Viral Video: ದೀಪಾವಳಿಗೆ ಪಟಾಕಿ ಬದಲು ರಾಶಿ ರಾಶಿ ನೋಟು ಸುಟ್ಟು ಹಾಕಿದ ವ್ಯಕ್ತಿ

ದೀಪಾವಳಿಯ ಹಬ್ಬಕ್ಕೆ ಎಲ್ಲರು ಪಟಾಕಿ ಸುಟ್ಟು ಸಂಭ್ರಮಿಸಿದರೆ ಇಲ್ಲೊಬ್ಬ ಒಬ್ಬ ವ್ಯಕ್ತಿ 500 ಮತ್ತು 100 ರೂಪಾಯಿ ನೋಟುಗಳನ್ನು ಸುಟ್ಟು ಹಾಕಿದ್ದು, ಸದ್ಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. "ಹಣ ಬೇಡವಾದರೆ ಬಡವರಿಗೆ ಕೊಡಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

Viral Video: ದೀಪಾವಳಿಗೆ ಪಟಾಕಿ ಬದಲು ರಾಶಿ ರಾಶಿ ನೋಟು ಸುಟ್ಟು ಹಾಕಿದ ವ್ಯಕ್ತಿ

Updated on: Nov 03, 2024 | 5:02 PM

ದೀಪಾವಳಿ ಹಬ್ಬ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿಗಳದ್ದೇ ಸೌಂಡು. ಹಬ್ಬಕ್ಕೆ ಎಲ್ಲರೂ ಪಟಾಕಿ ಸುಟ್ಟು ಸಂಭ್ರಮಿಸಿದರೆ ಇಲ್ಲೊಬ್ಬ ವ್ಯಕ್ತಿ 500 ಮತ್ತು 100ರ ನೋಟುಗಳನ್ನು ಸುಟ್ಟು ಹಾಕಿದ್ದಾನೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

kumardineshbhai049 ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್​​ ಆಗುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ 7 ದಿನಗಳಲ್ಲಿ 2.8 ಮಿಲಿಯನ್​ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಒಬ್ಬರು “ಹಣ ಬೇಡವಾದರೆ ಬಡವರಿಗೆ ಕೊಡಿ” ಎಂದು ಕಾಮೆಂಟ್​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: 7 ದಿನದ ಹಸುಗೂಸನ್ನು ಸೇತುವೆಯಿಂದ ಎಸೆದ ಪೋಷಕರು; 50ಕ್ಕೂ ಅಧಿಕ ಗಾಯಗೊಂಡಿದ್ದ ಮಗು ಬದುಕಿದ್ದೇ ರೋಚಕ

ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ಪ್ರಕಾರ, ಯಾವುದೇ ಕರೆನ್ಸಿ ನೋಟನ್ನು ನಾಶಪಡಿಸುವುದು ಅಥವಾ ಸುಡುವುದು ಶಿಕ್ಷಾರ್ಹ ಅಪರಾಧ. ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ನೋಟುಗಳನ್ನು ಸುಡುವುದು ರಾಷ್ಟ್ರೀಯ ಕರೆನ್ಸಿಗೆ ಅವಮಾನ ಮತ್ತು ನಮ್ಮ ದೇಶದಲ್ಲಿ ದೇಶದ್ರೋಹದ ಅಡಿಯಲ್ಲಿ ಬರುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ