Viral: ಪುಣ್ಯ ಜಲ ಎಂದು ತಪ್ಪಾಗಿ ಭಾವಿಸಿ ಎಸಿ ನೀರನ್ನು ಕುಡಿದ ಭಕ್ತರು; ವಿಡಿಯೋ ವೈರಲ್‌

ಇಲ್ಲೊಂದು ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದ್ದು, ಮಥುರಾ ವೃಂದಾವನದ ಬಂಕೆ ಬಿಹಾರಿ ದೇವಾಲಯದಲ್ಲಿ ಅಲ್ಲಿನ ಗೋಡೆಯ ಆನೆಯ ಮೂರ್ತಿಯಿಂದ ಸೋರಿಕೆಯಾಗುತ್ತಿದ್ದ ಎಸಿ ನೀರನ್ನು ಇದೇ ಚರಣ್‌ ಅಮೃತ ಅಂದರೆ ಶ್ರೀ ಕೃಷ್ಣನ ಪಾದದ ಪವಿತ್ರ ನೀರು ಎಂದು ತಪ್ಪಾಗಿ ಭಾವಿಸಿ ಭಕ್ತರೆಲ್ಲರೂ ಸರತಿ ಸಾಲಿನಲ್ಲಿ ಬಂದು ಅದೇ ನೀರನ್ನು ಕುಡಿದಿದ್ದಾರೆ ಮತ್ತು ಆ ನೀರನ್ನು ತಲೆಗೆ ಸ್ಪರ್ಶಿಸಿದ್ದಾರೆ. ಈ ದೃಶ್ಯವನ್ನು ಕಂಡು ʼಜನರಿಗೆ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆʼ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 04, 2024 | 12:15 PM

ಪ್ರತಿಯೊಬ್ಬರೂ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವರ ದರ್ಶನವನ್ನು ಮುಗಿಸಿ ಅಲ್ಲಿನ ಪವಿತ್ರ ತೀರ್ಥವನ್ನು ಸೇವನೆ ಮಾಡುತ್ತಾರೆ. ದೇವಾಲಯಗಳಲ್ಲಿ ಪವಿತ್ರ ಜಲವನ್ನು ಕುಡಿದರೆ ಅಥವಾ ಆ ನೀರನ್ನು ತಲೆಗೆ ಚಿಮುಕಿಸಿದರೆ ಪುಣ್ಯ ಲಭಿಸುತ್ತದೆ ಎಂದು ಹೆಚ್ಚಿನವರು ನಂಬುತ್ತಾರೆ. ಅದೇ ನಂಬಿಕೆಯಲ್ಲಿ ಇಲ್ಲೊಂದಷ್ಟು ಭಕ್ತರು ಮಥುರಾ ವೃಂದಾವನದ ಬಂಕೆ ಬಿಹಾರಿ ದೇವಾಲಯದಲ್ಲಿ ಆನೆಯ ಮೂರ್ತಿಯಿಂದ ಸೋರಿಕೆಯಾಗುತ್ತಿದ್ದ ಎಸಿ ನೀರನ್ನೇ ಚರಣ್‌ ಅಮೃತ ಅಂದರೆ ಶ್ರೀ ಕೃಷ್ಣನ ಪಾದದ ಪವಿತ್ರ ನೀರು ಎಂದು ತಪ್ಪಾಗಿ ಭಾವಿಸಿ ಸರತಿ ಸಾಲಿನಲ್ಲಿ ಬಂದು ಅದೇ ನೀರನ್ನು ಕುಡಿದಿದ್ದಾರೆ. ಈ ದೃಶ್ಯವನ್ನು ಕಂಡು ʼಜನರಿಗೆ ಶಿಕ್ಷಣದ ಅವಶ್ಯಕತೆ ತುಂಬಾನೇ ಇದೆʼ ಎಂದು ನೆಟ್ಟಿಗರು ಕಾಮೆಂಟ್ಸ್‌ ಮಾಡಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿರುವ ಪ್ರಸಿದ್ಧ ಬಂಕೆ ಬಿಹಾರಿ ದೇವಾಲಯದಲ್ಲಿ ನಡೆದಿದ್ದು, ಈ ದೇವಾಲಯದ ಗೋಡೆಯಲ್ಲಿರುವ ಆನೆಯ ಮೂರ್ತಿಯ ಶಿಲ್ಪದಿಂದ ನಿಗೂಢವಾಗಿ ಸೋರಿಕೆಯಾಗುತ್ತಿದ್ದ ನೀರನ್ನು ಚರಣ್‌ ಅಮೃತ ಅಂದರೆ ಶ್ರೀ ಕೃಷ್ಣನ ಪಾದದ ಪವಿತ್ರ ನೀರು ಎಂದು ತಪ್ಪಾಗಿ ಭಾವಿಸಿ ಭಕ್ತರು ಅದನ್ನು ಕುಡಿದಿದ್ದಾರೆ. ಇನ್ನೂ ಹಲವು ಭಕ್ತರು ಆ ನೀರನ್ನು ತಲೆಗೆ ಚಿಮುಕಿಸಿದ್ದಾರೆ. ವಾಸ್ತವಾಗಿ ಅದು ಎಸಿಯಿಂದ ಸೋರಿಕೆಯಾದ ನೀರಾಗಿದ್ದು, ಭಕ್ತರು ತಪ್ಪಾಗಿ ಭಾವಿಸಿ ಆ ನೀರನ್ನೇ ಪವಿತ್ರ ಜಲವೆಂದು ಕುಡಿದಿದ್ದಾರೆ.

ಈ ಕುರಿತ ವಿಡಿಯೋವನ್ನು BroominsKaBaap ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಗಂಭೀರ ಶಿಕ್ಷಣದ ಅವಶ್ಯಕತೆಯಿದೆ; ದೇವರ ಪಾದದ ಚರಣಾಮೃತ ಎಂದು ಭಾವಿಸಿ ಎಸಿ ನೀರನ್ನು ಕುಡಿದ ಜನರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಭಕ್ತರು ದೇವಾಲಯದ ಗೋಡೆಯಲ್ಲಿರುವ ಆನೆಯ ಮೂರ್ತಿ ಶಿಲ್ಪದಿಂದ ಸೋರಿಕೆಯಾಗುತ್ತಿದ್ದ ನೀರನ್ನು ಕುಡಿಯುತ್ತಿರುವ ಮತ್ತು ತಲೆಗೆ ಸ್ಪರ್ಶಿಸುತ್ತಿರುವ ದೃಶ್ಯವನ್ನು ಕಾಣಬಹುದು. ವಾಸ್ತವವಾಗಿ ಇದು ಎಸಿಯಿಂದ ಸೋರಿಕೆಯಾದ ನೀರಾಗಿದ್ದು, ಭಕ್ತರು ಇದನ್ನು ದೇವರ ಪಾದದ ಚರಣಾಮೃತ ಎಂದು ಭಾವಿಸಿ ಸರತಿ ಸಾಲಿನಲ್ಲಿ ಬಂದು ಅದರಲ್ಲಿ ಕೆಲವರು ಆ ನೀರನ್ನು ಕುಡಿದರೆ ಇನ್ನೂ ಕೆಲವರು ಆ ನೀರನ್ನು ತಲೆಗೆ ಸ್ಪರ್ಶಿಸಿದ್ದಾರೆ.

ಇದನ್ನೂ ಓದಿ: ಅಂಕಲ್‌ ಎಂದು ಕರೆದ ಬಟ್ಟೆ ಅಂಗಡಿಯವನಿಗೆ ಥಳಿಸಿದ ಗ್ರಾಹಕ

ನವೆಂಬರ್‌ 3 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು ʼಕನಿಷ್ಠ ಪಕ್ಷ ದೇವಾಲಯದ ಟ್ರಸ್ಟ್‌ ಇದು ಎಸಿ ನೀರು ಎಂದು ಅಲ್ಲೊಂದು ಎಚ್ಚರಿಕೆಯ ನೋಟಿಸ್‌ ಹಾಕಬಹುದಿತ್ತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅಬ್ಬಬ್ಬಾ ಜನರು ಇಷ್ಟೊಂದು ಮೂರ್ಖರೇʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:15 pm, Mon, 4 November 24

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು