AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ವಂಚನೆ: ಏನಿದು ಪ್ರಯಾಣಿಕರ ಹೊಸ ಆರೋಪ?

ಬೆಂಗಳೂರಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರು ಅದರಲ್ಲೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕ್ಯಾಬ್​​ ಚಾಲಕರು ಅತಿಯಾದ ಶುಲ್ಕ ವಿಧಿಸುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಆರೋಪ ಕೇಳಿಬಂದಿದೆ. ಅನಗತ್ಯ ದೂರ ಸಂಚಾರ, ತಪ್ಪು ಮಾರ್ಗಗಳನ್ನು ಬಳಸುವುದು ಮತ್ತು ಪೆಟ್ರೋಲ್​ ಖಾಲಿ ಆಗಿದೆ ಎಂದು ಹೇಳಿ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ವಂಚನೆ: ಏನಿದು ಪ್ರಯಾಣಿಕರ ಹೊಸ ಆರೋಪ?
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ವಂಚನೆ: ಏನಿದು ಪ್ರಯಾಣಿಕರ ಹೊಸ ಆರೋಪ?
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 03, 2024 | 4:51 PM

Share

ಬೆಂಗಳೂರು, ನವೆಂಬರ್​ 03: ನಗರದಲ್ಲಿ ಸಾಕಷ್ಟು ಜನರು ತಮ್ಮ ದಿನನಿತ್ಯದ ಓಡಾಟಕ್ಕೆ ಹೆಚ್ಚಾಗಿ ಓಲಾ, ಉಬರ್​ ಮತ್ತು ರ‍್ಯಾಪಿಡೊ ಕ್ಯಾಬ್ (cab)​ ಬಳಸುತ್ತಾರೆ. ಆದರೆ ಇದೇ ಕ್ಯಾಬ್​ಗಳು ಜನರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಮಾತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಕ್ಯಾಬ್ ವಂಚನೆ ಬಗ್ಗೆ ಕೆಲ ಪ್ರಯಾಣಿಕರು ತಮ್ಮ ಅನುಭವಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳಾ ಪ್ರಯಾಣಿಕರೇ ಟಾರ್ಗೆಟ್

ಬೆಂಗಳೂರಿನ ಪ್ರಯಾಣಿಕರು ಕ್ಯಾಬ್​ಗಳು ಮಾಡುತ್ತಿರುವ ವಂಚನೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಅದರಲ್ಲೂ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ವಂಚನೆ ಮಾಡಲಾಗುತ್ತಿದೆ. ಜನಪ್ರಿಯ ಓಲಾ, ಉಬರ್​ ಮತ್ತು ರ‍್ಯಾಪಿಡೊ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳೊಂದಿಗೆ ಸಂಯೋಜಿತವಾಗಿರುವ ಕ್ಯಾಬ್​ ಚಾಲಕರು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ವಿಧಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಲಾಗುತ್ತಿದೆ.

ಇದನ್ನೂ ಓದಿ: ರಾಜಸ್ಥಾನದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾರು ಕದಿಯುವ ಖದೀಮರ ಬಂಧನ

ಎಕ್ಸ್​ ಬಳಕೆದಾರರಾದ ಶಿವಂ ಸೌರವ್ ಝಾ ಎಂಬುವವರು ಈ ಘಟನೆ ಬಗ್ಗೆ ವಿವರಿಸಿದ್ದಾರೆ. ‘ನೀವು ಸಾಗುವ ಮಾರ್ಗ ಮಧ್ಯೆ ಈ ವಾಹನ ಚಾಲಕರು ಪೆಟ್ರೋಲ್​ ಖಾಲಿ ಆಗಿದೆ ಎಂದು ಮಧ್ಯದಲ್ಲಿ ನಿಲ್ಲಿಸುತ್ತಾರೆ.  ಪೆಟ್ರೋಲ್​ ಹಾಕಿದ ಮೇಲೆ ಪಾವತಿಸಲು ನಿಮ್ಮನ್ನು ಕೇಳುತ್ತಾರೆ. ಕ್ಯಾಬ್​ ಆ್ಯಪ್​ ಮೊದಲು ನಿಮಗೆ ಸಾವಿರ ರೂ ಅಂತಾ ತೋರಿಸಿದ್ದರೆ, ಇವರು 1100 ರೂ. ಪಾವತಿಸಲು ಹೇಳುತ್ತಾರೆ.

ಒಂದು ವೇಳೆ ನೀವು ಹಣ ನೀಡಲು ನಿರಾಕರಿಸಿದರೆ ನಾನು ವಾಹನ ಚಲಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟರಲ್ಲಾಗಲೇ ವಿಮಾನ ಕೈತಪ್ಪಿ ಹೋಗುತ್ತದೆ ಎಂಬ ಭಯದಲ್ಲಿ ನಾವು ಹಣವನ್ನು ನೀಡುತ್ತೇವೆ. ಬಳಿಕ ಅವರು ಎಲ್ಲಾ ಟೋಲ್​ ಗೇಟ್​ಗಳನ್ನು ತಪ್ಪಿಸಿ ಒಳ ರಸ್ತೆಯಿಂದ ಶಾರ್ಟ್‌ಕಟ್​ನಲ್ಲಿ ಕರೆದುಕೊಂಡು ಹೋಗುತ್ತಾರೆ. ಹೀಗಾಗಿ ಯಾವುದೇ ಸುಂಕ ವಿಧಿಸದ ಕಾರಣ 800 ರೂ ಮಾತ್ರ ನೀವು ನೀಡಬೇಕಾಗಿರುತ್ತದೆ. ಆದರೆ ನೀವು ಈಗಾಗಲೇ 1000 ಪಾವತಿಸಿದ್ದೀರಿ. ಹಾಗಾದರೆ ಆ 200 ರೂ. ಎಲ್ಲಿ ಹೋಯಿತು ಮತ್ತು ಆ ಚಾಲಕ ಅದನ್ನು ವಾಪಸ್​ ನೀಡುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.

ಮತ್ತೊಂಬ ನೆಟ್ಟಿಗರು, ‘ಇದು ಅವರ ಸಾಮಾನ್ಯ ತಂತ್ರಗಾರಿಕೆ ಆಗಿದೆ. ನನ್ನ ಸಹೋದ್ಯೋಗಿಯೊಬ್ಬರು ಈ ಸಮಸ್ಯೆಯನ್ನು ಅನುಭವಿಸಿದ್ದಾರೆ. ಆ ಘಟನೆ ಬಳಿಕ ನಾನು ವಿಮಾನ ನಿಲ್ದಾಣದ ಪಿಕ್ ಮತ್ತು ಡ್ರಾಪ್ ಸೌಲಭ್ಯಗಳಿಗಾಗಿ MakeMyTrip ಟ್ಯಾಕ್ಸಿಗಳನ್ನು ಬಳಸಲು ಪ್ರಾರಂಭಿಸಿದೆ. ನಾನು ವಿಮಾನವನ್ನು ಬುಕ್ ಮಾಡುವಾಗ ಅದನ್ನು ಬುಕ್ ಮಾಡುತ್ತೇನೆ. ಅವರ ಸೇವೆ ಉತ್ತಮವಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 6 ವಿಮಾನಗಳಲ್ಲಿ 12 ಬಾಂಬರ್‌ಗಳು: ಕೆಂಪೇಗೌಡ ಏರ್​ಪೋರ್ಟ್​​ಗೆ ಬೆದರಿಕೆ ಸಂದೇಶ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವಾಗ ಇದೇ ರೀತಿಯ ಭಯಾನಕ ಅನುಭವಗಳನ್ನು ಎದುರಿಸಿದ್ದೇವೆ ಎಂದು ಸಾಕಷ್ಟು ಪ್ರಯಾಣಿಕರು ಹಂಚಿಕೊಂಡಿದ್ದಾರೆ. ಒಬ್ಬೊಬ್ಬರು ತಮಗಾದ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದು, ಸೂಕ್ತ ಕ್ರಮಕ್ಕೆ ಕೂಡ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:44 pm, Sun, 3 November 24

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ