AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾರು ಕದಿಯುವ ಖದೀಮರ ಬಂಧನ

ಫೋನ್ ಹ್ಯಾಕ್, ಬ್ಯಾಂಕ್ ಖಾತೆ ಹ್ಯಾಕ್, ಸೋಷಿಯಲ್​ ಮೀಡಿಯಾ ಖಾತೆಗಳನ್ನು ಹ್ಯಾಕ್ ಮಾಡುವುದನ್ನು ಕೇಳಿದ್ದೇವೆ. ಈಗ ಕರುಗಳನ್ನು ಹ್ಯಾಕ್​ ಮಾಡಿ ಕದಿಯುತ್ತಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ರಾಜ್ಯಸ್ಥಾನದಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು ಕಾರುಗಳನ್ನು ಕದಿಯುತ್ತಿದ್ದ ಆರೋಪಗಳಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ರಾಜಸ್ಥಾನದಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾರು ಕದಿಯುವ ಖದೀಮರ ಬಂಧನ
ಪ್ರಾತಿನಿಧಿಕ ಚಿತ್ರ
Follow us
Shivaprasad
| Updated By: ರಮೇಶ್ ಬಿ. ಜವಳಗೇರಾ

Updated on: Nov 03, 2024 | 11:27 AM

ಬೆಂಗಳೂರು, (ನವೆಂಬರ್ 03): ಕಾರು ಹ್ಯಾಕ್ ಮಾಡಿ ಕದ್ದೊಯ್ಯುತ್ತಿದ್ದ ಖದೀಮರನ್ನ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದಿಂದ ಫ್ಲೈಟ್​ನಲ್ಲಿ ಬಂದು ಕಾರುಗಳನ್ನ ಕದಿಯುತ್ತಿದ್ದ ಹೈಟೆಕ್ ಕಳ್ಳರನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದೆ. ಬೆಂಗಳೂರಿನ ಸುತ್ತಮುತ್ತ ಹೈಎಂಡ್ ಕಾರುಗಳನ್ನೇ ಟಾರ್ಗೆಟ್ ಮಾಡಿದ್ದ ಈ ಹ್ಯಾಕಿಂಗ್ ಟೀಂ, ಕಾರಿನ ಡೋರ್ ಗಳನ್ನ ಈಜಿಯಾಗಿ ಸಾಫ್ಟ್ ವೇರ್ ಹ್ಯಾಕ್ ಮಾಡುವದರ ಮೂಲಕ ಕಾರನ್ನ ಕಂಟ್ರೋಲ್ ಗೆ ತೆಗೆದುಕೊಳ್ಳುತ್ತಾರೆ. ಇದೀಗ ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಕಾರಿನ ಡೋರ್ ಗಳನ್ನ ಈಜಿಯಾಗಿ ಸಾಫ್ಟ್ ವೇರ್ ಹ್ಯಾಕ್ ಮಾಡುವುದರ ಮೂಲಕ ಕಾರನ್ನ ಕಂಟ್ರೋಲ್ ಗೆ ತೆಗೆದುಕೊಳ್ಳುತ್ತಾರೆ. ರಾಜಸ್ಥಾನದಿಂದ ಫ್ಲೈಟ್ ನಲ್ಲೇ ಬಂದು ಆಪರೇಟ್ ಮಾಡುತ್ತಿದ್ದ ಖದೀಮರು, ಬ್ಯಾಡರಹಳ್ಳಿ, ಅನ್ನಪೂರ್ಣೇಶ್ವರಿನಗರ ಸೇರಿದಂತೆ ಹಲವು ಕಡೆ ಕಾರುಗಳನ್ನು ಕಳವು ಮಾಡಿದ್ದರು.

ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಸ್ಕಾರ್ಪಿಯೋ ಕಾರನ್ನು ಕದ್ದಿದ್ದರು. ಇನ್ನು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನೋವಾ ಕ್ರಿಸ್ಟಾ ಕಾರನ್ನ ಕದ್ದೊಯ್ದಿದ್ದರು. ರಾಜ್ಯವಲ್ಲದೇ ಇತರ ರಾಜ್ಯಗಳಿಗೂ ಈ ಕಾರು ಹ್ಯಾಕಿಂಗ್ ಟೀಂ ಬೇಕಾಗಿದೆ. ಸದ್ಯಕ್ಕೆ ರಾಜಸ್ಥಾನ ಮೂಲದ ಮೂವರು ಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವ ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವ ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ