Viral Video : ಹಾವು! ಯಾರಿಗೆ ತಾನೆ ಭಯವಾಗುವುದಿಲ್ಲ? ನೋಡಿದರೇ ಭಯ, ಇನ್ನು ಹಿಡಿಯುವುದೆಂದರೆ… ಸಾಹಸವಂತರಿಗೆ ಮಾತ್ರ ಇದು ಸಾಧ್ಯ. ಈ ವಿಡಿಯೋದಲ್ಲಿ ಡೇವಿಡ್ ಒರಿನ್ ಎಂಬ ವ್ಯಕ್ತಿ ತನ್ನ ಪಾಡಿಗೆ ತಾ ಸರಸರನೆ ಹೋಗುತ್ತಿದ್ದ ನೀರುಹಾವನ್ನು ಹಿಡಿಯುತ್ತಿರುವುದನ್ನು ನೋಡಬಹುದಾಗಿದೆ. ಆದರೆ ಸೆಕೆಂಡುಗಳ ವ್ಯತ್ಯಾಸದಲ್ಲಿಯೇ ಹಾವು ಎರಡು ಬಾರಿ ಕಚ್ಚಿದೆ. ಈ ವಿಡಿಯೋ ನೋಡುತ್ತ ನೋಡುತ್ತ ನೆಟ್ಟಿಗರು ಇದನ್ನು ವೈರಲ್ ಮಾಡಿಬಿಟ್ಟಿದ್ದಾರೆ.
ನೀರುಹಾವುಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ದೇಹವನ್ನು ಚಪ್ಪಟೆಯಾಗಿಸಿಕೊಳ್ಳುತ್ತವೆ. ಆದರೆ ಅಷ್ಟೇ ವೇಗದಲ್ಲಿ ಕಚ್ಚಲೂಬಹುದು. ಈ ವಿಡಿಯೋದಲ್ಲಿ ಪದೇಪದೆ ಹಾವು ಕಚ್ಚಿರುವುದನ್ನು ನೋಡಬಹುದು. ಈ ವಿಡಿಯೋ ಅನ್ನು ಈತನಕ 1.5 ಮಿಲಿಯನ್ ಜನರು ನೋಡಿದ್ದಾರೆ. 40,000 ಜನರು ಇಷ್ಟಪಟ್ಟಿದ್ದಾರೆ.
ನೆಟ್ಟಿಗರು ಕೈಮೇಲಾದ ಗಾಯಗಳನ್ನು ನೋಡಿ ಗಾಬರಿಗೆ ಬಿದ್ದಿದ್ದಾರೆ. ಕಚ್ಚುವಾಗಲೂ ಅವನು ಪಟ್ಟುಬಿಡದೆ ಹಿಡಿಯಲು ಪ್ರಯತ್ನಿಸುವುದನ್ನು ನೋಡಿ ಭಯಪಟ್ಟಿದ್ದಾರೆ. ಇಷ್ಟಕ್ಕೇ ಯಾಕೆ ಬಿಡುತ್ತೀರಿ ತಬ್ಬಿಕೊಳ್ಳಿ, ಮುತ್ತುಕೊಡಿ ಎಂದಿದ್ದಾರೆ ಒಬ್ಬರು. ಇಷ್ಟು ಅಪಾಯ ತಂದುಕೊಂಡು ಯಾಕದನ್ನು ಹಿಡಿಯಲು ಪ್ರಯತ್ನಿಸುವುದು ಬರೀಗೈಯಿಂದ ಎಂದಿದ್ದಾರೆ ಅನೇಕರು. ಈ ವಿಡಿಯೋ ನೋಡಿ ಉಳಿದವರೂ ಹೀಗೇ ಸಾಹಸ ಮಾಡಲು ಗತಿಯೇನು ಎಂದಿದ್ದಾರೆ ಹಲವರು.
ಹೌದಲ್ಲವೆ ನೆಟ್ಟಿಗರು ಹೇಳುತ್ತಿರುವುದು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ