ಇಂಡಿಗೋ ವಿಮಾನದಲ್ಲಿ ವ್ಯಕ್ತಿಯೊಬ್ಬ ಫ್ಲಾಸ್ಕ್ ಹಿಡಿದು ಚಹಾ ಮಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೈಲಿನಲ್ಲಿ ಚಹಾ ಮಾರುವ ರೀತಿಯಲ್ಲೇ ವಿಮಾನದಲ್ಲೂ ಕಂಡು ಬಂದಿದ್ದು, ಸದ್ಯ ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. 36,000 ಅಡಿ ಎತ್ತರದಲ್ಲಿ ಹಾರುವ ವಿಮಾನದಲ್ಲಿ, ಪ್ರಯಾಣಿಕರೊಬ್ಬರು ಫ್ಲಾಸ್ಕ್‌ನಿಂದ ಚಹಾವನ್ನು ಪೇಪರ್ ಕಪ್‌ಗೆ ಸುರಿದು ಇತರ ಪ್ರಯಾಣಿಕರಿಗೆ ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಈ ಹಿಂದೆ ಥೈಲ್ಯಾಂಡ್‌ಗೆ ಹೋಗುತ್ತಿದ್ದ ವಿಮಾನದಲ್ಲಿ, ಇಂಡಿಯನ್ ಪ್ರಯಾಣಿಕರು ಲೋಕಲ್ ಟ್ರೈನ್‌ನಲ್ಲಿ ಇದ್ದಂಗೆ ವರ್ತಿಸುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಟ್ರೈನ್ನಂತೆ ಇಂಡಿಗೋ ವಿಮಾನದಲ್ಲೂ ಫ್ಲಾಸ್ಕ್ ಹಿಡಿದು ಚಹಾ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. aircrew.in ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಚಾಯ್, ಚಾಯ್ ಎಂದು ಕರೆಯುತ್ತಾ, ಚಹಾವನ್ನು ಫ್ಲಾಸ್ಕ್‌ನಿಂದ ಪೇಪರ್ ಕಪ್‌ಗೆ ಸುರಿದು, ಮೊದಲು ಒಬ್ಬ ಮಹಿಳೆಗೆ ಕೊಡುತ್ತಿರುವುದನ್ನು ಕಾಣಬಹುದು. ಬಳಿಕ ಇತರ ಪ್ರಯಾಣಿಕರಿಗೂ ನೀಡುತ್ತಿರುವುದು ವಡಿಯೋದಲ್ಲಿ ಸೆರೆಯಾಗಿದೆ. ಒಬ್ಬ ಮುದುಕ ಮತ್ತು ಮಹಿಳೆ ರಾಜಸ್ಥಾನಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದು ಕಂಡುಬಂದಿದೆ. ಆದರೆ ಈ ವಿಮಾನ ಎಲ್ಲಿಗೆ ಹೋಗುತ್ತಿದೆ? ಘಟನೆ ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಮೀನಿಗಾಗಿ ಬೀಸಿದ್ದ ಬಲೆಯಲ್ಲಿ ಸಿಕ್ಕಿಹಾಕಿಕೊಂಡ 15 ಅಡಿ ಉದ್ದದ ದೈತ್ಯ ಹೆಬ್ಬಾವು
ಈ ವಿಡಿಯೋ ಕೇವಲ 24 ಗಂಟೆಗಳಲ್ಲಿ ನಾಲ್ಕು ಲಕ್ಷ ಮಂದಿ ವೀಕ್ಷಿಸಿದ್ದಾರೆ. ಕೆಲವರು ಹಾಸ್ಯ ಚಟಾಕಿ ಹಾರಿಸಿದರೆ ಇನ್ನು ಕೆಲವರು ವಿಚಿತ್ರ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಮುಂದೆಯೂ ಇದೇ ರೀತಿಯ ಘಟನೆಗಳು ನಡೆಯಲಿವೆ ಎನ್ನಲಾಗಿದೆ. ಕ್ಯಾಬಿನ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದಾರೆ? ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ