Viral Video: ಬೈಕ್ ಹತ್ತಿ ಕನ್ನಡಿ ನೋಡಿಕೊಳ್ಳುತ್ತಿದ್ದ ಕೋತಿಯ ರಿಯಾಕ್ಷನ್ ಹೇಗಿತ್ತು ನೋಡಿ

ಬೈಕ್​ ಹತ್ತಿ ಕುಳಿತ ಕೋತಿಯ ರಿಯಾಕ್ಷನ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ವಿಡಿಯೋ ಮಜವಾಗಿದೆ ವಿಡಿಯೋ ನೋಡಿ.

Viral Video: ಬೈಕ್ ಹತ್ತಿ ಕನ್ನಡಿ ನೋಡಿಕೊಳ್ಳುತ್ತಿದ್ದ ಕೋತಿಯ ರಿಯಾಕ್ಷನ್ ಹೇಗಿತ್ತು ನೋಡಿ
Edited By:

Updated on: Oct 17, 2021 | 9:41 AM

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ತುಂಟಾಟದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ಹೆಚ್ಚು ತಮಾಷೆಯಾಗಿರುತ್ತದೆ. ಅಂತಹ ವಿಡಿಯೋಗಳು ಮನಗೆಲ್ಲುವುದಂತೂ ಸತ್ಯ. ಅಂಥಹುದೇ ಒಂದು ವಿಡಿಯೋ ಇದೀಗ ಫುಲ್ ವೈರಲ್ ಆಗಿದ್ದು, ಕೋತಿ ಬೈಕ್ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುತ್ತಿದೆ. ಈ ದೃಶ್ಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ನಗುವ ಇಮೋಜಿಗಳನ್ನು ಕಳುಹಿಸುವ ಮೂಲಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ವಿಡಿಯೋದಲ್ಲಿ, ನಿಂತಿದ್ದ ಬೈಕ್​ ಮೇಲೆ ಕೋತಿಯೊಂದು ಹತ್ತಿ ಕುಳಿತಿದೆ. ಮೊದಲಿಗೆ ತಾನೇ ಬೈಕ್ ಸವಾರಿ ಮಾಡುವಂತೆ ನಟಿಸುತ್ತದೆ. ಬಳಿಕ ಬೈಕ್ ಕನ್ನಡಿ ನೋಡಿಕೊಂಡ ಕೋತಿ ಲುಕ್ ಕೊಟ್ಟಿದೆ. ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬ ಕಾಣುತ್ತಿದ್ದಂತೆಯೇ ಕೋತಿಗೆ ಆಶ್ವರ್ಯವಾಗಿದೆ. ಆಗ ಕೋತಿಯ ರಿಯಾಕ್ಷನ್ ಹೇಗಿತ್ತು ಎಂಬುದನ್ನು ವಿಡಿಯೋದಲ್ಲೇ ನೋಡಿ.

ಕನ್ನಡಿ ನೋಡಿಕೊಳ್ಳುತ್ತಿದ್ದಂತೆಯೇ ಕೋತಿಗೆ ಆಶ್ವರ್ಯವಾಗಿದೆ. ನಗೊಂದಲದಲ್ಲಿ ತಲೆ ಕೆರೆದುಕೊಳ್ಳುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂತಹ ನನ್ನಂತೆಯೇ ಮತ್ತೊಂದು ಪ್ರಾಣಿ ಎದುರಿಗಿದೆ ಎಂಬ ಭಾವಿಸಿ ಕೋಪದಿಂದ ಕನ್ನಡಿಗೆ ಹೊಡೆಯುತ್ತಿರುವ ದೃಶ್ಯ ಮಜವಾಗಿದೆ.

ಇದನ್ನೂ ಓದಿ:

Viral Video: ಸುಮಧುರ ಕಂಠದಲ್ಲಿ ಹಾಡು ಹೇಳಿ ರೋಗಿಗೆ ಧೈರ್ಯ ತುಂಬಿದ ನರ್ಸ್​; ನೆಟ್ಟಿಗರೆಲ್ಲಾ ಭಾವುಕರಾದ ವಿಡಿಯೋವಿದು

Viral Video: ರೈಲಿಗೆ ಸಿಕ್ಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಬೆಕ್ಕಿನ ಮರಿಯನ್ನು ರಕ್ಷಿಸಿದ ವ್ಯಕ್ತಿ! ನೆಟ್ಟಿಗರ ಮನಗೆದ್ದ ವಿಡಿಯೋ ನೋಡಿ