Viral Video : ಬಿಸಿಬಿಸಿ ಪಕೋಡಾ ಮಾಡುತ್ತಿದ್ದೇನೆ ತಿನ್ನು ಎನ್ನುತ್ತಾಳೆ ತಾಯಿ. ನನಗೆ ಬೇಡ ನಾನು ಡಯೆಟ್ ಮಾಡುತ್ತಿದ್ದೇನೆ ಮತ್ತೀಗ ವರ್ಕೌಟ್ ಮಾಡೋದಕ್ಕೆ ಹೋಗಬೇಕು ಎನ್ನುತ್ತಾನೆ ಮಗ. ತಾಯಿ ಒತ್ತಾಯಿಸಿದಾಗ ಆಯ್ತು ತಿನ್ನುತ್ತೇನೆ ಆದರೆ ಮಯೋನೈಸ್ ಸಾಸ್ ಜೊತೆ ಮಾತ್ರ ಎನ್ನುತ್ತಾನೆ. ತಾಯಿಗೆ ಪಿತ್ಥ ನೆತ್ತಿಗೇರುತ್ತದೆ, ಮಯೋನೈಸ್ ಸಾಸ್ ನಿನ್ನ ಗರ್ಲ್ಫ್ರೆಂಡ್ ಏನು? ಯಾವಾಗಲೂ ಮಯೋನೈಸ್! ಇಲ್ಲ ಪುದೀನಾ ಚಟ್ನಿ ಹಚ್ಚಿಕೊಂಡೇ ಪಕೋಡಾ ತಿನ್ನು. ತಿಂದು ವರ್ಕೌಟ್ ಮಾಡು ಎಂದು ಹುಸಿಗದರುತ್ತಾಳೆ ತಾಯಿ. ಆದರೆ ಈ ತಟ್ಟೆಯನ್ನು ನಿನ್ನ ತಂದೆಯ ಮುಂದೆ ಮಾತ್ರ ಇಡಬೇಡ ಎಂಬ ತಾಕೀತನ್ನೂ ಮಾಡುತ್ತಾಳೆ.
ನೀನಾ ಕಪೂರ್ ಎಂಬ ಇನ್ಸ್ಟಾಗ್ರಾಂ ಖಾತೆದಾರರು ಈ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ‘ಮಮ್ಮಿ ನಿಮಗೆ ಗೊತ್ತಲ್ಲ, ನಾನು ವರ್ಕೌಟ್ ಮಾಡ್ತೀನಿ. ನಾನು ಜಿಮ್ಗೆ ಹೋಗುತ್ತಿದ್ದಂತೆ ನೀವು ಹೀಗೆ ಒಳ್ಳೊಳ್ಳೆ ಸ್ನ್ಯಾಕ್ಸ್ ಮಾಡೋದಕ್ಕೆ ಶುರು ಮಾಡಿದ್ದೀರಿ. ಬೇಡ ನಾನು ಡಯೆಟ್ ಮಾಡಬೇಕು ಎನ್ನುತ್ತಾನೆ ಮಗ.’ ನಾನು ಯಾವಾಗಲೂ ಚೆನ್ನಾಗಿಯೇ ಅಡುಗೆ ಮಾಡುತ್ತೇನೆ ಎಂದು ಸಮರ್ಥಿಸಿಕೊಳ್ಳುತ್ತಾಳೆ ತಾಯಿ. ಜೊತೆಗೆ, ‘ನಾಳೆ ನನ್ನಷ್ಟು ವಯಸ್ಸಾದಾಗ ನೀನು ಇಂಥದೆಲ್ಲ ತಿನ್ನಲು ಸಾಧ್ಯವಿಲ್ಲ. ಆದರೆ ಈಗ ಕೂಡ ನೀ ತಿನ್ನುವುದಿಲ್ಲ ಎನ್ನುತ್ತಿದ್ದೀ. ಸುಮ್ಮನೇ ತಿನ್ನು’ ಎನ್ನುತ್ತಾಳೆ.
ಇದನ್ನೂ ಓದಿ : ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ ಚಹಾ ಕುಡಿಯಲು ಹೋಗಿದ್ದ ದೆಹಲಿ ಡ್ರೈವರ್ ವಿಡಿಯೋ ವೈರಲ್
ಕೊನೆಗೆ ತಟ್ಟೆ ತುಂಬಿದ ಪಕೋಡಾಗಳನ್ನು ಅವನಿಗೆ ಕೊಡುತ್ತ, ತಂದೆಗೆ ಮಾತ್ರ ಖಂಡಿತ ಕೊಡಬಾರದು ಎನ್ನುತ್ತಾಳೆ. ಆಯ್ತು ಮಯೋನೈಸ್ ಸಾಸ್ ಕೊಟ್ಟರೆ ಮಾತ್ರ ತಿನ್ನುತ್ತೇನೆ ಎನ್ನುತ್ತಾನೆ. ಪುದೀನಾ ಚಟ್ನಿ ಜೊತೆನೇ ತಿನ್ನಬೇಕು ಎನ್ನುತ್ತಾಳೆ. ಅವ ಒಪ್ಪದೇ ಇದ್ಧಾಗ, ಮಯೋನೈಸ್ ನಿನ್ನ ಗರ್ಲ್ಫ್ರೆಂಡ್ ಏನು? ಎಂದು ಕೇಳುತ್ತಾಳೆ. ಚೆನ್ನಾಗಿ ತಿನ್ನು ವ್ಯಾಯಾಮ ಮಾಡು ನಡಿ ಎಂದು ಮುದ್ದಿನಿಂದ ಗದರುತ್ತಾಳೆ.
ಇದನ್ನೂ ಓದಿ : ಬಾಲಕಾರ್ಮಿಕನೊಬ್ಬ ಅತೀ ಎತ್ತರದ ಜಾಗದಲ್ಲಿ ಕುಳಿತು ಕೆಲಸ ಮಾಡುತ್ತಿರುವ ವಿಡಿಯೋ ವೈರಲ್; ಕೋಪಗೊಂಡ ನೆಟ್ಟಿಗರು
ಡಿಸೆಂಬರ್ 26ರಂದು ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 6 ಲಕ್ಷ ಜನರು ನೋಡಿದ್ದಾರೆ. 18,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕ ನೆಟ್ಟಿಗರು, ನೀವು ಹೇಳಿದ್ದು ಸರಿ ಇದೆ ಆಂಟೀ ಎಂದು ಹೊಗಳಿದ್ದಾರೆ. ಇದು ಬಹಳ ಉಲ್ಲಾಸದಿಂದ ಕೂಡಿದೆ ಈ ವಿಡಿಯೋ ಎಂದು ಒಬ್ಬರು ಹೇಳಿದ್ದಾರೆ. ನಮ್ಮ ಮನೆಯಲ್ಲೂ ಹೀಗೆಯೇ ಆಗುತ್ತಿರುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ರಾಮೆನ್ ಥಣ್ಣಗಾಗಿದ್ದಾನೆ! ಚಮಚ ಸಮೇತ ಹಿಮಗಟ್ಟಿದ ನೂಡಲ್ಸ್ ವಿಡಿಯೊ ವೈರಲ್
ಈ ಚಳಿಯಲ್ಲಿ ಈ ವಿಡಿಯೋ ನೋಡುತ್ತ ನಿಮಗೂ ಈಗ ಪಕೋಡಾ ತಿನ್ನಬೇಕು ಅನ್ನೋ ಆಸೆ ಉಂಟಾಗುತ್ತಿದೆಯಾ? ತಿನ್ನಿ ಆದರೆ ವರ್ಕೌಟ್ ಮಾಡಿ ಎಂದು ಆಂಟಿ ಹೇಳಿರುವ ಮಾತನ್ನು ಮಾತ್ರ ಮರೆಯಬೇಡಿ. ಮತ್ತೆ ಮಯೋನೈಸ್ ಸಾಸ್ ಜಂಕ್, ಆದ್ದರಿಂದ ಚಟ್ನಿಯನ್ನೇ ತಿನ್ನಿ. ಏನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:50 am, Wed, 11 January 23