Viral Video: ‘ನಾನೂ ಊಟ ಮಾಡುತ್ತೇನೆ’ ಕರಡಿಯೊಂದು ಮಗುವಿದ್ದ ಡೈನಿಂಗ್​ ಟೇಬಲ್​ಗೆ ಬಂದಾಗ

Bear : ಕುಟುಂಬದೊಂದಿಗೆ ವಿಹಾರಕ್ಕೆ ಹೋಗಿರುತ್ತೀರಿ. ನಿಮ್ಮಿಷ್ಟವಾದ ತಿಂಡಿತಿನಿಸುಗಳನ್ನು ಹರವಿಟ್ಟುಕೊಂಡು ತಿನ್ನುತ್ತಿರುತ್ತೀರಿ. ಇದ್ದಕ್ಕಿದ್ದಂತೆ ಕರಡಿಯೊಂದು ಪ್ರತ್ಯಕ್ಷವಾಗುತ್ತದೆ. ಅಷ್ಟೇ ಅಲ್ಲ ಟೇಬಲ್​ ಮೇಲಿದ್ದ ತಿಂಡಿತಿನಿಸನ್ನು ತಿನ್ನಲು ತೊಡಗುತ್ತದೆ. ಅಕಸ್ಮಾತ್ ನಿಮ್ಮ ಕೈಯಲ್ಲಿ ಮಗುವಿದ್ದರೆ ಏನು ಮಾಡುತ್ತೀರಿ? ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಮಹಿಳೆ ಏನು ಮಾಡಿದ್ದಾರೆ ನೋಡಿ.

Viral Video: ನಾನೂ ಊಟ ಮಾಡುತ್ತೇನೆ ಕರಡಿಯೊಂದು ಮಗುವಿದ್ದ ಡೈನಿಂಗ್​ ಟೇಬಲ್​ಗೆ ಬಂದಾಗ
ಪಿಕ್​ನಿಕ್​ ಗೆ ಹೋದ ಕುಟುಂಬದೊಂದಿಗೆ ಊಟ ಮಾಡಲು ಬಂದ ಕರಡಿ

Updated on: Sep 28, 2023 | 10:42 AM

Mexico : ಕುಟುಂಬ ಸಮೇತ ಕುಟುಂಬವೊಂದು ಮೆಕ್ಸಿಕೋದ ಚಿಪಿಂಕ್​ ಉದ್ಯಾನದಲ್ಲಿ ವಿಹಾರಕ್ಕೆ ಬಂದಿದೆ. ಆಗ ಇದ್ದಕ್ಕಿದ್ದ ಹಾಗೆ ಕರಡಿಯೊಂದು ಇವರ ಡೈನಿಂಗ್​ ಟೇಬಲ್​ಗೆ ಬಂದಿದೆ. ಮಡಿಲಲ್ಲಿದ್ದ ಮಗು ಕರಡಿಯನ್ನು ನೋಡಿ ಹೆದರಿ ಅಮ್ಮನನ್ನು ಅವುಚಿ ಕುಳಿತಿದೆ. ಅಮ್ಮ ಮಗುವಿನ ಕಣ್ಣನ್ನು ಮುಚ್ಚಿ, ಕರಡಿ (Bear) ತನಗೆ ಬೇಕಾದ್ದೆಲ್ಲವನ್ನೂ ತಿಂದು ಹೋಗುವ ಕಾದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ಅನೇಕರನ್ನು ಇದು ಗಾಬರಿಗೆ ಕೆಡವಿದೆ. ಮೂಲತಃ ಈ ವಿಡಿಯೋ ಅನ್ನು ಟಿಕ್​ಟಾಕ್​ನಲ್ಲಿ ಪೋಸ್ಟ್ ಮಾಡಲಾಗಿತ್ತು. ನಂತರ ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಯಿತು.

ಇದನ್ನೂ ಓದಿ : Viral Video: ‘ಅಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದರೂ ಕುಸಿದಿಲ್ಲ’ ಪ್ರೊ ರಿದ್ಧಿ ರಾಥೋರ್

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸೆ. 27 ರಂದು ಈ ವಿಡಿಯೋ ಅನ್ನು Xನಲ್ಲಿ ಪೋಸ್ಟ್ ಮಾಡಲಾಗಿದೆ. ಈತನಕ 9 ಲಕ್ಷಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. 4,000 ಹೆಚ್ಚು ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ನಿಮ್ಮೊಂದಿಗೆ ನಾನೂ ಊಟ ಮಾಡುತ್ತೇನೆ

ಆ ತಾಯಿ ಕುಳಿತಲ್ಲಿಯೇ ಕುಳಿತು ಧೈರ್ಯದಿಂದ ಶಾಂತವಾಗಿ ಆ ಮಗುವನ್ನು ರಕ್ಷಿಸಿದ್ದಾಳೆ, ಅವಳಿಗೆ ಧನ್ಯವಾದ ಎಂದಿದ್ದಾರೆ ಒಬ್ಬರು. ಅವರು ಅದೃಷ್ಟವಂತರು ಕರಡಿ ಅವರ ಮೇಲೆ ದಾಳಿ ಮಾಡಿಲ್ಲವಲ್ಲ ಎಂದಿದ್ದಾರೆ ಇನ್ನೊಬ್ಬರು. ಅದು ಹದಿಹರೆಯಕ್ಕೆ ಬಂದ ಕಪ್ಪುಕರಡಿ, ಸದ್ಯ ಶಾಂತವಾಗಿದೆ ಎಂದಿದ್ದಾರೆ ಮತ್ತೊಬ್ಬರು. ವನ್ಯಮೃಗಗಳು ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಹೀಗೆ ಬಂದಾಗ ಸುಮ್ಮನೇ ಇರುವುದು ಒಳ್ಳೆಯದು ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : Viral Video: ಈ ವಿಡಿಯೋ ಖಂಡಿತ ಮುಂಬೈಯದ್ದೇ! ಎಂದ ನೆಟ್ಟಿಗರು, ನೀವೇನು ಹೇಳುತ್ತೀರಿ?

ನಾನಾಗಿದ್ದರೆ ಮಗುವನ್ನೆತ್ತಿಕೊಂಡು ಓಡಿಬಿಡುತ್ತಿದ್ದೆ, ಆಕೆ ಧೈರ್ಯವಂತೆ ಸುಮ್ಮನೇ ಕುಳಿತಿದ್ದಾರೆ ಎಂದಿದ್ಧಾರೆ ಅನೇಕರು. ಆದರೂ ಅವರು ಅಲ್ಲಿ ಯಾಕೆ ಕುಳಿತಿದ್ದಾರೆ? ಕರಡಿ ದಾಳಿ ಮಾಡಿದರೆ? ಎಂದು ಕೇಳಿದ್ದಾರೆ ಕೆಲವರು. ಸಂಕೋಚ ಬೇಡ ಕರಡಿಯೊಂದಿಗೆ ಎಲ್ಲರೂ ಊಟ ಮಾಡಿ ಎಂದು ತಮಾಷೆ ಕೂಡ ಮಾಡಿದ್ದಾರೆ ಒಬ್ಬರು. ನಾನು ಈ ಕಪ್ಪುನಾಯಿಯನ್ನು ಸಾಕಬಹುದೆ? ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ