Viral Video: ಚಳಿಯಿಂದ ನಡುಗುತ್ತಿದ್ದ ಮಗಳು ದುಪಟ್ಟಾ ಎಳೆದುಕೊಂಡಿದ್ದಕ್ಕೆ ಗದರಿದ ಅಮ್ಮ; ವಿಡಿಯೋ ವೈರಲ್

ನವೆಂಬರ್ 6ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೊ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು 1.9 ಮಿಲಿಯನ್ ಜನರು ನೋಡಿದ್ದಾರೆ.

Viral Video: ಚಳಿಯಿಂದ ನಡುಗುತ್ತಿದ್ದ ಮಗಳು ದುಪಟ್ಟಾ ಎಳೆದುಕೊಂಡಿದ್ದಕ್ಕೆ ಗದರಿದ ಅಮ್ಮ; ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋದ ತುಣುಕು
Updated By: ಸುಷ್ಮಾ ಚಕ್ರೆ

Updated on: Dec 01, 2021 | 7:20 PM

ಚಳಿಗಾಲದಲ್ಲಿ ಸ್ಟೈಲಿಶ್ ಆಗಿರುವ ಸ್ವೆಟರ್, ಜಾಕೆಟ್, ಸ್ಕಾರ್ಫ್​ಗಳನ್ನು ಧರಿಸುವುದು ಫ್ಯಾಷನ್ ಆಗಿದೆ. ಈ ರೀತಿ ಸ್ಟೈಲಿಶ್ ಆಗಿರುವ ಬಟ್ಟೆಯನ್ನು ಧರಿಸಿ ಮನೆಯಿಂದ ಹೊರಟ ನಂತರ ಆ ಡ್ರೆಸ್​ ಅನ್ನು ಬದಲಾಯಿಸಿ ಬೇರೆ ಬಟ್ಟೆ ಧರಿಸಿದ್ದೀರಾ? ಮನೆಯಿಂದ ಹೊರಟ ಮೇಲೆ ನಿಮ್ಮ ಡ್ರೆಸ್​ ಕಂಫರ್ಟಬಲ್ ಎನಿಸದೆ ನಿಮ್ಮ ಜೊತೆಯಲ್ಲಿ ಬರುತ್ತಿದ್ದವರ ಜಾಕೆಟ್ ಅನ್ನೋ, ಶಾಲ್ ಅನ್ನೋ ತೆಗೆದುಕೊಂಡು ಹಾಕಿಕೊಂಡಿದ್ದೀರಾ? ಅದೇ ರೀತಿ ಇಲ್ಲೊಬ್ಬಳು ಮಗಳು ಮನೆಯಿಂದ ಹೊರಡುವಾಗ ತನ್ನ ತಾಯಿಯ ದುಪಟ್ಟಾವನ್ನು ಕೇಳಿದ್ದಾಳೆ. ಅದಕ್ಕೆ ಆಕೆಯ ತಾಯಿ ವ್ಯಂಗ್ಯವಾಗಿ ನೀಡಿದ ಉತ್ತರಕ್ಕೆ ನೆಟ್ಟಿಗರು ಏನಂದಿದ್ದಾರೆ ಗೊತ್ತಾ?

ಮೇಕಪ್ ಆರ್ಟಿಸ್ಟ್​ ಆಗಿರುವ ಯಷ್ನಾ ಹಂಡ ಎಂಬ ಯುವತಿ ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಮ್ಮನೊಂದಿಗೆ ಕುಳಿತಿದ್ದ ಮಗಳಿಗೆ ಬಹಳ ಚಳಿಯಾಗುತ್ತಿತ್ತು. ಅಲ್ಲಿ ಅಷ್ಟೊಂದು ಚಳಿ ಇರಬಹುದು ಎಂದು ಆಕೆ ಅಂದುಕೊಂಡಿರಲಿಲ್ಲ. ಹೀಗಾಗಿ, ಆಕೆ ತನ್ನ ಪಕ್ಕ ಕುಳಿತಿದ್ದ ಅಮ್ಮನ ಹಳದಿ ಬಣ್ಣದ ದುಪಟ್ಟಾದಿಂದ ತನ್ನ ಮೈಯನ್ನು ಸುತ್ತಿಕೊಂಡು ಬೆಚ್ಚಗಾಗಲು ನೋಡಿದ್ದಾಳೆ.

ತನ್ನ ದುಪಟ್ಟಾವನ್ನು ಎಳೆದು ಸುತ್ತಿಕೊಂಡ ಮಗಳಿಗೆ ಗದರಿದ ತಾಯಿ, ನೀನು ಇಷ್ಟೆಲ್ಲ ಚೆನ್ನಾಗಿ ಡ್ರೆಸ್ ಮಾಡಿಕೊಂಡು ಬಂದು ಈಗ ನನ್ನ ದುಪಟ್ಟಾವನ್ನು ಸುತ್ತಿಕೊಳ್ಳುತ್ತಿದ್ದೀಯಾ? ನೀನೇನು ಸಣ್ಣ ಮಗುವಾ? ಎಂದು ವ್ಯಂಗ್ಯ ಮಾಡಿದ್ದಾಳೆ. ಅಮ್ಮನ ತಮಾಷೆಯ ಮಾತು ಕೇಳಿದ ಮಗಳು ಮುಖವನ್ನು ಮುಚ್ಚಿಕೊಂಡು, ದುಪಟ್ಟಾವನ್ನು ಹೊದ್ದುಕೊಂಡು ಕುಳಿತಿದ್ದಾಳೆ.

ನವೆಂಬರ್ 6ರಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಈ ವೀಡಿಯೊ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು 1.9 ಮಿಲಿಯನ್ ಜನರು ನೋಡಿದ್ದಾರೆ. ಆ ತಾಯಿ ಮಾಡಿದ ರೀಲ್ ಭಾರೀ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಕಾಫಿ ಮಾಡೋದನ್ನು ನೋಡಿದ್ದೀರಾ?; ಬೀದಿ ವ್ಯಾಪಾರಿಯ ವಿಡಿಯೋ ವೈರಲ್

Viral News: ಮದುವೆಯಾದ ಮರುದಿನವೇ ಗರ್ಲ್​ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!

Published On - 7:20 pm, Wed, 1 December 21