ಮುಂಬೈ: ಕೆಲವು ಪೊಲೀಸರು ತಮ್ಮ ಅಧಿಕಾರವನ್ನು ಬಳಸಿ ಎಲ್ಲರ ಮೇಲೆ ದಬ್ಬಾಳಿಕೆ ನಡೆಸಿ ವಸೂಲಿ ಮಾಡುವ ಪದ್ಧತಿ ಹೊಸತೇನಲ್ಲ. ಮಹಾರಾಷ್ಟ್ರದ ವಕೋಲಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಗುರುವಾರ ಮಧ್ಯರಾತ್ರಿಯ ನಂತರ ಉಚಿತವಾಗಿ ಊಟ ನೀಡಲು ನಿರಾಕರಿಸಿದ ಆರೋಪದ ಮೇಲೆ ಹೋಟೆಲ್‌ನ ಕ್ಯಾಷಿಯರ್‌ನ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಎಪಿಐ ವಿಕ್ರಮ್ ಪಾಟೀಲ್ ಅವರು ವಕೋಲಾ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಸ್ವಾಗತ್ ಡೈನಿಂಗ್ ಬಾರ್‌ಗೆ ಆಲ್ಕೋಹಾಲ್ ಮತ್ತು ಆಹಾರಕ್ಕಾಗಿ ಫೋನ್ ಮಾಡಿದ್ದರು. ಆದರೆ, ಈಗಾಗಲೇ ಅಡುಗೆ ಕೋಣೆಯನ್ನು ಮುಚ್ಚಲಾಗಿದೆ ಎಂದು ಕ್ಯಾಷಿಯರ್ ರಾಮದಾಸ್ ಪಾಟೀಲ್ ತಿಳಿಸಿದ್ದರು. ಹೀಗಾಗಿ, ಮಧ್ಯರಾತ್ರಿ 12.30ಕ್ಕೆ ಮುಂಬೈನ ಬಾರ್‌ಗೆ ಹೋದ ಆತ ಉಚಿತವಾಗಿ ಊಟ, ಮದ್ಯ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್ಗೆ ಹೊಡೆದಿದ್ದಾರೆ.
ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ವಿಕ್ರಮ್ ಪಾಟೀಲ್ ಹಿಂಬಾಗಿಲಿನಿಂದ ಹೊಟೇಲ್‌ಗೆ ನುಗ್ಗಿ ದಬ್ಬಾಳಿಕೆ ನಡೆಸಿದ್ದಾರೆ. ವಿಡಿಯೋ ತುಣುಕಿನಲ್ಲಿ ಅವನು ಕ್ಯಾಷಿಯರ್‌ನ ಶರ್ಟ್ ಅನ್ನು ಎಳೆದುಕೊಂಡು ಅನೇಕ ಬಾರಿ ಕಪಾಳಕ್ಕೆ ಹೊಡೆದಿರುವುದನ್ನು ನೋಡಬಹುದು. ಆದರೆ, ಹೋಟೆಲ್ ಸಿಬ್ಬಂದಿ ಅವನನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಆದರೂ ಸುಮ್ಮನಾಗದ ಪೊಲೀಸ್ ಕ್ಯಾಷಿಯರ್ ಕೆನ್ನೆಗೆ ಮತ್ತೆ ಹೊಡೆದಿದ್ದಾರೆ.
ಘಟನೆಯ ಬಗ್ಗೆ ತಿಳಿದ ಹೋಟೆಲ್ ವ್ಯವಸ್ಥಾಪಕರು ಸಹಾಯಕ್ಕಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ರಾಮದಾಸ್ ಅವರ ದೂರಿನ ಆಧಾರದ ಮೇಲೆ ವಕೋಲಾ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 ಅಡಿಯಲ್ಲಿ ನಾನ್-ಕಾಗ್ನಿಜಬಲ್ (NC) ಅಪರಾಧವನ್ನು ದಾಖಲಿಸಿದ್ದಾರೆ. ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಪೊಲೀಸ್ ಅಧಿಕಾರಿಯ ಹಲ್ಲೆಯನ್ನು ಖಂಡಿಸಿದೆ.
He is API Vikram Patil, attached to Vakola Pol Stn of @MumbaiPolice, who is seen hitting the cashier of #Swagat restaurant at 12.35 am because the manager refused to give him FREE food and DRINK as the kitchen had closed: #AHAR #dadagiri #highhandedness #shameful pic.twitter.com/3WrD9FocVM
— Diwakar Sharma (@DiwakarSharmaa) December 23, 2021
AHAR ಅಧ್ಯಕ್ಷ ಶಿವಾನಂದ ಶೆಟ್ಟಿ ಮಾತನಾಡಿ, ಪೊಲೀಸ್ ಪಡೆಗೆ ಕೆಟ್ಟ ಹೆಸರು ತರುವುದು ಮಾತ್ರವಲ್ಲದೆ ವ್ಯಾಪಾರ ಸಮುದಾಯಗಳು ಕಾನೂನು ಜಾರಿ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಈ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ರೆಸ್ಟೋರೆಂಟ್ ಮಾಲೀಕರು ತಮ್ಮ ಕಾನೂನುಬದ್ಧ ವ್ಯವಹಾರವನ್ನು ಶಾಂತಿಯುತವಾಗಿ ನಡೆಸುವುದನ್ನು ಬಿಟ್ಟು ಬೇರೇನನ್ನೂ ಬಯಸುವುದಿಲ್ಲ ಮತ್ತು ಆದ್ದರಿಂದ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಸಲುವಾಗಿ ಪೋಲೀಸರ ವಿರುದ್ಧ ಕಠಿಣ ಕ್ರಮವನ್ನು ಪ್ರಾರಂಭಿಸಬೇಕೆಂದು ನಾವು ವಿನಂತಿಸುತ್ತೇವೆ, ಇದರಲ್ಲಿ ಕಾನೂನು ಜಾರಿ ಮಾಡುವವರೇ ಕಾನೂನು ಉಲ್ಲಂಘಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಕುಕ್ಕರ್ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್
Viral Video: ರಸ್ತೆಯುದ್ದಕ್ಕೂ ಮೆರವಣಿಗೆ ಮಾಡಿ ಮುದ್ದು ಮಗಳಿಗೆ ಸ್ಮಾರ್ಟ್ಫೋನ್ ಕೊಡಿಸಿದ ಟೀ ವ್ಯಾಪಾರಿ!