ರಸ್ತೆಗೆ ಕಾಲಿಡಲಾಗುತ್ತಿಲ್ಲ. ಸೂರ್ಯನ ಶಾಖಕ್ಕೆ ಮೈ ಬೆವರುತ್ತಿದೆ. ಸುಡು ಬಿಸಿಲಿನಲ್ಲಿ ಹೊರ ಹೋಗಿ ಬಂದ ತಕ್ಷಣ ತಣ್ಣೀರು ಸ್ನಾನ ಮಾಡಬೇಕು ಅನ್ನುವಷ್ಟರ ಮಟ್ಟಿಗೆ ಸೆಕೆ. ಹಾಗೆಯೇ ಇಲ್ಲಿ ಆನೆಗಳ ದಂಡು ಸೆಕೆ ತಡೆಯಲಾರದೆ ಸರತಿ ಸಾಲಿನಲ್ಲಿ ತಣ್ಣೀರು ಸ್ನಾನ ಮಾಡಲು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತಾ ನಂದಾ ಅವರು ಮಂಗಳವಾರ ಸಂಜೆ ಟ್ವಿಟರ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸೆಕೆ ತಾಳಲಾರದೇ ಆನೆಗಳ ದಂಡು ತಂಪಾದ ನೀರಿನಲ್ಲಿ ಸ್ನಾನ ಮಾಡಲು ಹೊರಟಿವೆ. ವಿಡಿಯೋ ಸೆರೆ ಹಿಡಿದ ಐಎಫ್ಎಸ್ ಅಧಿಕಾರಿ ಹೇಳಿರುವಂತೆ, ಆನೆಗಳು ಹರಿದ್ವಾರದ ಗಂಗೆಯಲ್ಲಿ ಸ್ನಾನ ಮಾಡಲು ಹೊರಟಿವೆ.
ಈ ವಿಡಿಯೋ ಟ್ವಿಟರ್ನಲ್ಲಿ ಹಂಚಿಕೊಂಡ ಬಳಿಕವೇ ನೆಟ್ಟಿಗರು ವಿಡಿಯೋವನ್ನು ಇಷ್ಪಟ್ಟಿದ್ದಾರೆ. ವಿಡಿಯೋಗೆ ಸಾವಿರಾರು ಲೈಕ್ಗಳ ಸುರಿಮಳೆಯೇ ಬಂದಿವೆ. ಜೊತೆಗೆ ನೂರಾರು ರಿಟ್ವೀಟ್ಗಳು ಕೂಡಾ ಸಿಕ್ಕಿವೆ. ಆನೆಗಳು ಸರತಿ ಸಾಲಿನಲ್ಲಿ ಬರುತ್ತಿದ್ದ ವಿಡಿಯೋ ನೋಡಿದ ನೆಟ್ಟಿಗರು, ಆನೆಗಳು ಸರತಿಸಾಲಿನಲ್ಲಿ ಓಡಾಡುತ್ತಿವೆ, ಸೋಷಿಯಲ್ ಡಿಸ್ಟೆನ್ಸ್ ಪಾಲಿಸುತ್ತಿವೆ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ.
Bulls heading for dip at Ganges in Haridwar pic.twitter.com/56UB93OjHo
— Susanta Nanda IFS (@susantananda3) April 20, 2021