ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್

Paw Print : ಆಗಷ್ಟೇ ಹುಟ್ಟಿದ ನಾಯಿಮರಿಯೊಂದು ತನ್ನ ಜನನ ಪ್ರಮಾಣ ಪತ್ರಕ್ಕೆ ಪಂಜ ಒತ್ತಿ ಸಹಿ ಮಾಡಿದೆ. ಆಹ್ ಎಂಥ ಮುದ್ದು ಎಂದು ಕೆಲವರು. ನಿಮ್ಮ ಆಸೆಗಳನ್ನು ಮುಗ್ಧ ಪ್ರಾಣಿಗಳ ಮೇಲೆ ಯಾಕೆ ಹೇರುತ್ತೀರಿ ಎಂದು ಹಲವರು.

ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಕಾಲ್ಬೆರಳು ಒತ್ತಿ ಸಹಿ ಮಾಡಿರುವ ವಿಡಿಯೋ ವೈರಲ್
ಜನನ ಪ್ರಮಾಣ ಪತ್ರದ ಮೇಲೆ ಮರಿನಾಯಿಯ ಕಾಲುಬೆರಳುಗಳಿಂದ ಮುದ್ರೆಯೊತ್ತಿಸುತ್ತಿರುವುದು
Edited By:

Updated on: Jan 25, 2023 | 6:08 PM

Viral Video : ನಿಮ್ಮ ಜನನ ಪ್ರಮಾಣ ಪತ್ರಕ್ಕೆ ನೀವು ಎಂದಾದರೂ ಸಹಿ ಹಾಕುವ ಅವಕಾಶ ಸಿಕ್ಕಿತ್ತಾ? ನೋಡಿ ಎಳೆಯ ನಾಯಿಮರಿ ತನ್ನ ಜನನ ಪ್ರಮಾಣ ಪತ್ರಕ್ಕೆ ಪಂಜ ಒತ್ತಿ ಸಹಿ ಮಾಡಿದೆ. ಈ ವಿಡಿಯೋ ಅನ್ನು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ಮುದ್ದಾದ ವಿಡಿಯೋ ನಮ್ಮಿಡೀ ದಣಿವನ್ನು ಕಳೆಯುವಂತೆ ಮಾಡಿದೆ ಎನ್ನುತ್ತಿದ್ದಾರೆ ಕೆಲವರು. ಯಾಕೋ ಇದು ನನ್ನ ಮೂಡ್ ಆಫ್​ ಮಾಡಿತು ಎನ್ನುತ್ತಿದ್ದಾರೆ ಇನ್ನೂ ಕೆಲವರು. ನೀವೇನಂತೀರಿ?

ಈ ವಿಡಿಯೋ ಈಗಾಗಲೇ 5.5 ಮಿಲಿಯನ್​ ಜನರನ್ನು ತಲುಪಿದೆ. ಗ್ರೇಹೌಂಡ್​ ತಳಿಯ ಈ ಮರಿ ಹೆಣ್ಣು. ಇದರ ಹೆಸರು ಅಲೆಕ್ಸ್. ನೆಟ್ಟಿಗರಂತೂ ಈ ಮುದ್ದಾದ ವಿಡಿಯೋ ನೋಡಿ ಇದು ನನಗೆ ಬೇಕು ಎಂದು ಕೇಳುತ್ತಿದ್ದಾರೆ. ಇಂಥ ಐಡಿಯಾ ಹೇಗೆ ಹೊಳೆಯಿತು ಎಂದು ಕೇಳುತ್ತಿದ್ದಾರೆ.

ಇದನ್ನೂ ಓದಿ : ಪಾಕಿಸ್ತಾನದ ಸ್ಕರ್ದೂ ಕಣಿವೆಯಲ್ಲಿ ಕಟ್ಟಿಗೆ ಆಯಲು ಬಂದ ಪುಟ್ಟಿಯ ವಿಡಿಯೋ ವೈರಲ್

ಈತನಕ ನಾನು ಇಂಥ ವಿಡಿಯೋ ನೋಡಿರಲೇ ಇಲ್ಲ. ಬಹಳ ಮುದ್ದಾಗಿದೆ ಎಂದು ಹೇಳಿದ್ದಾರೆ. ಎಂಥ ಕಾಲ ಬಂತಪ್ಪಾ ನಾಯಿಗಳಿಗೆ ಎಂದು ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು. ತಮ್ಮ ಖುಷಿಗೆ ಏನೂ ಮಾಡುತ್ತಾರೆ ಜನ. ಯಾವತ್ತಾದರೂ ನಿಮ್ಮ ಜನನ ಪ್ರಮಾಣ ಪತ್ರಗಳಿಗೆ ನೀವೇ ಸಹಿ ಮಾಡಿದ್ದಿದೆಯೇ? ಎಂದು ಕೇಳಿದ್ದಾರೆ ಅನೇಕರು.

ಇದನ್ನೂ ಓದಿ : ಇಂಗ್ಲಿಷ್​ ಅಕ್ಷರಗಳಲ್ಲಿ ತಾಜ್​ಮಹಲ್​ ರಚಿಸಿದ ಯುವಕನ ವಿಡಿಯೋ ವೈರಲ್

ಅದರ ಕಾಲುಗಳಿಗೆ ಹಚ್ಚಿರುವ ಮಸಿ ಅದರ ಚರ್ಮಕ್ಕೆ ಹಾನಿಕಾರಕ ಅಲ್ಲ ತಾನೆ? ಎಂದು ಕೇಳಿದ್ದಾರೆ ಮತ್ತೊಬ್ಬ ನಾಯಿಪ್ರಿಯರು. ಆದರೂ ಇದು ಯಾಕೋ ತೀರಾ ಅಸಹಜ ಎನ್ನಿಸುತ್ತಿದೆ ಈ ನಡೆ ಎಂದಿದ್ದಾರೆ ಕೆಲವರು. ರೀಲ್ಸ್​​ಗಾಗಿ ಜನ ಏನನ್ನೂ ಮಾಡುತ್ತಾರೆ. ನಾಯಿಗಳಿಗೂ ಅವುಗಳದೇ ಆದ ವೈಯಕ್ತಿಕ ಎನ್ನುವುದಿದೆ ಎಂದಿದ್ದಾರೆ ಮತ್ತೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 6:08 pm, Wed, 25 January 23