ದುಬಾರಿ ಬೈಕ್ ಮೇಲೆ ಹಾಲು ಮಾರುವವನ ಸವಾರಿ; ದುಡಿದದ್ದೆಲ್ಲ ಪೆಟ್ರೋಲಿಗೆ ಎನ್ನುತ್ತಿರುವ ನೆಟ್ಟಿಗರು

| Updated By: ಶ್ರೀದೇವಿ ಕಳಸದ

Updated on: Jan 06, 2023 | 5:12 PM

Harley Davidson : ಸೈಕಲ್​ ಮೇಲೆ, ಸ್ಕೂಟರ್ ಮೇಲೆ ಹಾಲು ಕೊಡಲು ಬರುವವರನ್ನು ನೋಡಿದ್ದೇವೆ. ಆದರೆ ಲಕ್ಷಗಟ್ಟಲೆ ಕೊಟ್ಟು ಹಾರ್ಲೆ ಡೇವಿಡ್​ಸನ್ ಎಂಬ ದುಬಾರಿ ಬೈಕ್​ ಮೇಲೆ ಹಾಲು ಮಾರಲು ಹೋಗುವವರನ್ನು ನೋಡಿದ್ದೀರಾ? ನೋಡಿ.

ದುಬಾರಿ ಬೈಕ್ ಮೇಲೆ ಹಾಲು ಮಾರುವವನ ಸವಾರಿ; ದುಡಿದದ್ದೆಲ್ಲ ಪೆಟ್ರೋಲಿಗೆ ಎನ್ನುತ್ತಿರುವ ನೆಟ್ಟಿಗರು
ಹಾರ್ಲೇ ಡೇವಿಡ್​ಸನ್​ ಬೈಕ್ ಮೇಲೆ ಹಾಲು ಮಾರಲು ಹೋಗುತ್ತಿರುವುದು
Follow us on

Viral Video : ಚಿಕ್ಕಂದಿನಲ್ಲಿ ಹಾಲಿನ ಡೇರಿಗೆ ಹೋಗಿ ಹಾಲು ತರುತ್ತಿದ್ದೆವು. ಸೈಕಲ್​ಗಳ ಮೇಲೆ ಹಾಲು ಮಾರುವವರಿಂದ ಹಾಲು ತೆಗೆದುಕೊಳ್ಳುತ್ತಿದ್ದೆವು. ನಂದಿನಿ ಮತ್ತಿತರ ಅಂಗಡಿಗಳಿಗೆ ಹೋಗುತ್ತಿದ್ದೆವು. ಕಾಲ ಸರಿದಂತೆ ಹಾಲು ಮಾರುವವರು ಸ್ಕೂಟರ್​ಗಳ ಮೇಲೆ ಮನೆಮನೆಗೆ ಬಂದು ಹಾಲು ಕೊಡುವುದು ಸಾಮಾನ್ಯ ಎಂಬಂತಾಯಿತು. ಆದರೆ ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಈ ವ್ಯಕ್ತಿ ಹಾರ್ಲೆ ಡೇವಿಡ್​ಸನ್ ಎಂಬ ದುಬಾರಿ​ ಬೈಕ್​ ಮೇಲೆ ಹಾಲು ಮಾರಲು ಹೊರಟಿದ್ದಾನೆ.

ಅಮಿತ್ ಭಡಾನಾ ಎನ್ನುವವರು ಈ ವಿಡಿಯೋ ಹಂಚಿಕೊಂಡಿದ್ಧಾರೆ. ​ಬೈಕ್​ನ ಎರಡೂ ಬದಿ ಹಾಲಿನ ಕ್ಯಾನುಗಳು ನೇತಾಡುತ್ತಿವೆ. ಇದು ಯಾವ ಊರಿನಲ್ಲಿ ಚಿತ್ರೀಕರಿಸಿರುವುದೆಂದು ತಿಳಿದು ಬಂದಿಲ್ಲ. ಡಿಸೆಂಬರ್ 18 ರಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ತನಕ ಸುಮಾರು 3 ಮಿಲಿಯನ್​ ಜನರು ಈ ವಿಡಿಯೋ ನೋಡಿದ್ದಾರೆ.

ಇದನ್ನೂ ಓದಿ : ದಂತಶಕ್ತಿ; 15,730 ಕಿ.ಗ್ರಾಂ ಟ್ರಕ್​ ಅನ್ನು ಹಲ್ಲುಗಳಿಂದ ಎಳೆದು ಗಿನ್ನೀಸ್​ ವಿಶ್ವ ದಾಖಲೆ ಮಾಡಿದ ಈಜಿಪ್ತಿನ ಸಾಹಸಿಯ ವಿಡಿಯೋ ವೈರಲ್

ನಿನಗೆ ಹಾರ್ಲೆ ಗಿಫ್ಟ್ ಕೊಡ್ತೀನಿ ಫ್ಯಾಮಿಲಿ ಬಿಝಿನೆಸ್ ಮಾಡು ಎಂದು ಅಪ್ಪ ಹೇಳಿದಾಗ… ಎಂದು ತಮಾಷೆ ಕ್ಯಾಪ್ಷನ್​ ಕೊಟ್ಟು ಪ್ರತಿಕ್ರಿಯಿಸಿದ್ದಾರೆ ಒಬ್ಬರು. ಅಣ್ಣಾ ನೀ ಎಷ್ಟೇ ದುಬಾರಿ ಗಾಡಿ ತೆಗೆದುಕೊಂಡರೂ ಹೆಲ್ಮೆಟ್​ ಹಾಕದೆ ಓಡಿಸಬೇಡ ಎಂದಿದ್ದಾರೆ ಇನ್ನೂ ಒಬ್ಬರು. ಅಯ್ಯೋ ನಿಮ್ಮ ಹಾಲು ಮಾರಿ ಪಡೆದ ಹಣವೆಲ್ಲ ಪೆಟ್ರೋಲಿಗೇ ಹೋಗುತ್ತದೆಯಲ್ಲ ಎಂದಿದ್ದಾರೆ ಮತ್ತೊಬ್ಬರು. ನಿಮಗೆ ಒಳ್ಳೆಯದಾಗಲಿ ಬೈಕ್ ಲವ್ ಹೀಗೇ ಸಾಗಲಿ ಎಂದಿದ್ದಾರೆ ಹಲವಾರು ಜನ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 5:03 pm, Fri, 6 January 23