‘ದೀವಾನಾ ಹುವಾ ಬಾದಲ್’ ಹಾಡಿದ ಸಾನಿಗ್ಧನ ಪ್ರತಿಭೆಗೆ ನೆಟ್ಟಿಗರು ಫಿದಾ
Deewana Huva Baadal : ಈ ತಿಂಗಳ ನೆಟ್ಪ್ಯಾಕ್ ವಸೂಲಿ ಆಯ್ತು ನಿನ್ನ ಹಾಡು ಕೇಳಿ, ಹಾಡುವುದನ್ನು ಬಿಡಬೇಡ ಎಂದಿದ್ದಾರೆ ಒಬ್ಬರು. ಜಗತ್ತನ್ನು ನೀನು ಖಂಡಿತ ಗೆಲ್ಲುತ್ತೀ, ಹೀಗೆ ಹಾಡುತ್ತಿರು ಎಂದಿದ್ದಾರೆ ಹಲವರು. ನೋಡಿ ವಿಡಿಯೋ.

Viral Video: ಆಶಾ ಭೋಸ್ಲೆ ಮತ್ತು ಮೊಹಮ್ಮದ್ ರಫಿ ಹಾಡಿರುವ ಮತ್ತು ಶರ್ಮಿಳಾ ಟ್ಯಾಗೋರ್, ಶಮ್ಮಿ ಕಪೂರ್ ನಟಿಸಿರುವ ‘ದಿವಾನಾ ಹುವಾ ಬಾದಲ್’ ಹಾಡಿಗೆ ಮನಸೋಲದವರು ಯಾರಿದ್ದಾರೆ? 1964ರಲ್ಲಿ ಕಶ್ಮೀರ್ ಕೀ ಕಲೀ ಚಿತ್ರದ ಈ ಹಾಡನ್ನು ಇದೀಗ ಈ ಬಾಲಕ ಅತ್ಯಂತ ಸುಮಧುರವಾಗಿ ಹಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಮತ್ತೆ ಮತ್ತೆ ಈ ಹಾಡನ್ನು ಕೇಳುತ್ತಲೇ ಇದ್ದಾರೆ. ಇದನ್ನು ಕೇಳಿದ ನಂತರ ನಿಮ್ಮ ಮನಸ್ಸು ಆಹ್ಲಾದಕತೆಯಿಂದ ತೇಲುವುದರಲ್ಲಿ ಎರಡು ಮಾತಿಲ್ಲ!
View this post on Instagram
ಸಾನಿಗ್ಧ ಜೇಥ್ವಾ ಎಂಬುವವರು ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುಮಾರು 2 ಲಕ್ಷ ಜನರು ಈ ವಿಡಿಯೋ ನೋಡಿದ್ದಾರೆ. 26,500 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಈ ದಿನ ಸಾರ್ಥಕವಾಯಿತು, ಎಂಥ ಮಧುವರಾಗಿ ಹಾಡಿದ್ದಾನೆ ಈ ಹುಡುಗ ಎಂದಿದ್ದಾರೆ ಕೆಲವರು. ಈ ತಿಂಗಳ ನೆಟ್ಪ್ಯಾಕ್ ನ ಹಣ ವಸೂಲ್ ಆಯಿತು! ಚೆನ್ನಾಗಿ ಬೆಳಿ ಮಗು ಎಂದಿದ್ದಾರೆ ಮತ್ತೊಬ್ಬರು.
ಎಂದೂ ಹಾಡುವುದನ್ನು ನಿಲ್ಲಿಸಬೇಡ. ನೀನೊಂದು ದಿನ ಜಗತ್ತನ್ನೇ ಗೆಲ್ಲುತ್ತೀ, ಬಹಳ ಒಳ್ಳೆಯ ಕಂಠ ಇದೆ ನಿನಗೆ ಎಂದಿದ್ದಾರೆ ಮಗದೊಬ್ಬರು. ಇಷ್ಟೊಂದು ತನ್ಮಯತೆಯಿಂದ, ಸುಶ್ರಾವ್ಯವಾಗಿ ಈ ವಯಸ್ಸಿನಲ್ಲಿ ಇಂಥ ಹಾಡನ್ನು ಹಾಡಿದ ಬಾಲಕ ಎಲ್ಲರಿಗೂ ಇಷ್ಟವೇ!
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:47 pm, Fri, 6 January 23