Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 02, 2023 | 4:49 PM

ಹುಲಿ ಮತ್ತು ಅದರ ಮರಿಗಳು ರಸ್ತೆ ದಾಟುವ ವೀಡಿಯೊವನ್ನು ಐಎಫ್ಎಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ. ಅಲ್ಲದೆ ವನ್ಯಜೀವಿ ಪ್ರಾಬಲ್ಯದ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಜನರಿಗೆ ಅವರು ಮನವಿ ಮಾಡಿದ್ದಾರೆ.

Viral Video: ರಸ್ತೆ ದಾಟುತ್ತಿರುವ ಹುಲಿ ಮರಿಗಳು, ನಿಧಾನವಾಗಿ ವಾಹನ ಚಲಾಯಿಸಿ ಎಂದ ಐಎಫ್ಎಸ್ ಅಧಿಕಾರಿ
ವೈರಲ್ ವೀಡಿಯೊ
Follow us on

ಸಾಮಾಜಿಕ ಮಾಧ್ಯಮಗಳಲ್ಲಿ ಜನರಿಗೆ ಮನೋರಂಜನೆ ನೀಡುವ ವಿಡಿಯೋಗಳಿಗೆ ಕೊರತೆ ಇಲ್ಲ. ಆದರೆ ಕೆಲವು ವಿಡಿಯೋ ಹಾಗಲ್ಲ ಅವು ನಮಗೆ ಎಚ್ಚರಿಕೆಯ ಸಂದೇಶವಾಗಿರುತ್ತದೆ. ಅಂತಹ ವಿಡಿಯೋ ಒಂದು ಈಗ ವೈರೆಲ್ ಆಗಿದೆ. ನಿಮಗೆ ಗೊತ್ತಿರುವಂತೆ ಇತ್ತೀಚಿನ ದಿನಗಳಲ್ಲಿ, ಮಾನವರು ಮತ್ತು ವನ್ಯಜೀವಿಗಳು ಮುಖಾಮುಖಿಯಾಗಿರುವ ಹಲವಾರು ನಿದರ್ಶನಗಳಿವೆ. ಅದಕ್ಕೆ ಕಾರಣ ಬಹಳಷ್ಟಿದೆ. ಪ್ರಾಣಿಗಳು ಹೋಟೆಲ್​​ ಪ್ರವೇಶಿಸುವುದರಿಂದ ಹಿಡಿದು ರಸ್ತೆ ದಾಟವಂತಹ ಅನೇಕ ನಿದರ್ಶನಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇದಕ್ಕೆ ಪೂರಕವೆಂಬಂತೆ ಈ ರೀತಿಯ ಘಟನೆಗಳ ಬಗ್ಗೆ ಜಾಗೃತಿ ಮೂಡಿಸಲು, ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ಬಾರಿ ಪೋಸ್ಟ್​​ವೊಂದನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊ ವೈರಲ್ ಆಗುತ್ತಿದ್ದು, ಹುಲಿ ರಾತ್ರಿಯಲ್ಲಿ ಅದರ ಮರಿಗಳೊಂದಿಗೆ ರಸ್ತೆ ದಾಟುತ್ತಿದೆ. ಅದರ ಮರಿಗಳು ಒಂದೊಂದಾಗಿ ತಾಯಿಯ ಹಿಂದೆಯೇ ದಾಟುತ್ತಿರುವ ದೃಶ್ಯವನ್ನು ವೀಡಿಯೊ ಮಾಡಿದ್ದಾರೆ. ಮೊದಲು ತಾಯಿ ಹುಲಿ ರಸ್ತೆ ದಾಟುತ್ತದೆ ಅದರ ಹಿಂದಿಯೇ ಇನ್ನೊಂದು ಮರಿ ರಸ್ತೆಯನ್ನು ದಾಟಿದ ಬಳಿಕ ಮತ್ತೊಂದು ಮರಿಯೂ ರಸ್ತೆ ದಾಟಬೇಕು ಎನ್ನುವಷ್ಟರಲ್ಲಿ ದೂರದಲ್ಲಿ ಬರುತ್ತಿರುವ ವಾಹನದ ಲೈಟ್ ಕಣ್ಣಿಗೆ ಬೀಳುತ್ತಿದ್ದಂತೆ ಹೆದರಿದ ಮರಿಗಳು ನೆಗೆಯುತ್ತಾ ರಸ್ತೆ ದಾಟಿ ತನ್ನ ತಾಯಿಯನ್ನು ಸೇರಿಕೊಳ್ಳುತ್ತದೆ.

ಅದೃಷ್ಟವಶಾತ್, ಹುಲಿ ಮತ್ತು ಅದರ ಮರಿ ಸುರಕ್ಷಿತವಾಗಿ ರಸ್ತೆ ದಾಟಿದೆ. ಈ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿ ಸುಸಂತಾ ನಂದಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ದಯವಿಟ್ಟು ವನ್ಯಜೀವಿಗಳ ಆವಾಸಸ್ಥಾನವನ್ನು ಹಾದುಹೋಗುವಾಗ ನಿಧಾನವಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ಚಾಲನೆ ಮಾಡಿ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯ ಮಧ್ಯಪ್ರದೇಶ’ ವಿಂಧ್ಯ ಬೆಟ್ಟದಲ್ಲಿರುವ ಪನ್ನಾ ಟೈಗರ್ ರಿಸರ್ವ್ ನಡುವೆ ಸಾಗುವ ಪನ್ನಾ-ಕಟ್ನಿ ರಸ್ತೆಯಲ್ಲಿ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Viral Video: ಮೊದಲ ಹೆಜ್ಜೆ ಇಡಲು ಹರಸಾಹಸ ಪಡುತ್ತಿರುವ ಜಿರಾಫೆ

ಬಳಕೆದಾರರು ಈ ಬಗ್ಗೆ ಹಲವಾರು ರೀತಿಯ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರೂ ಚಾಲಕರು ಈ ರೀತಿಯ ಸಂದರ್ಭಗಳಲ್ಲಿ ಲೈಟ್​​ಗಳನ್ನು ಸ್ವಿಚ್ ಆಫ್ ಮಾಡಿ ವಾಹನದ ಗ್ಲಾಸ್​​ಗಳನ್ನು ಹಾಕಿಕೊಳ್ಳವುದು ಸೂಕ್ತ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು “ಇದು ವನ್ಯಜೀವಿ ಪ್ರದೇಶವೇ? ಎಚ್ಚರಿಕೆ ಸೂಚನ ಫಲಕ ಎಲ್ಲಿದೆ” ಎಂದು ಕೇಳಿದ್ದಾರೆ.

ಈ ವಿಡಿಯೋ ಅನೇಕರು ಶೇರ್ ಮಾಡಿಕೊಂಡಿದ್ದು, ಇದು ಅಪರೂಪದ ದೃಶ್ಯ. ವನ್ಯಜೀವಿ ಸಂರಕ್ಷಣೆಯ ಪ್ರಮುಖ ಸಂದೇಶವಾಗಿದೆ. ಹುಲಿಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಲ್ಲದೆ ವನ್ಯಜೀವಿಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಬೇಕು ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ, ಈ ವಿಡಿಯೋವು ಭವಿಷ್ಯದ ಪೀಳಿಗೆಗೆ ವನ್ಯಜೀವಿ ಸಂರಕ್ಷಣೆಯ ಮುಖ್ಯ ಅಗತ್ಯವನ್ನು ನೆನಪಿಸುತ್ತದೆ. ರಾತ್ರಿಯಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದ ಪ್ರಾಣಿಗಳಿಗೆ ಅಪಘಾತ ಉಂಟಾಗಬಹುದು. ಮಾನವರು, ಪ್ರಾಣಿಗಳ ಮತ್ತು ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ಹೆಚ್ಚು ಪ್ರಮುಖ್ಯತೆ ನೀಡಿದಾಗ, ಅಪಾಯವನ್ನು ತಪ್ಪಿಸಬಹುದು.