ಶಾಲಾಮಕ್ಕಳು ಮತ್ತು ಪತ್ನಿಯೊಂದಿಗೆ ಅಸ್ಸಾಂನ ಮುಖ್ಯಮಂತ್ರಿ ನೃತ್ಯದ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Jan 09, 2023 | 3:26 PM

Himanta Biswa Sarma : ಶಾಲಾಮಕ್ಕಳು ಅಸ್ಸಾಂನ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ನೃತ್ಯ ಪ್ರದರ್ಶನವನ್ನು ನೀಡುತ್ತಿದ್ಧಾಗ ಲಹರಿಗೆ ಬಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಪತ್ನಿಯೊಂದಿಗೆ ವೇದಿಕೆಯೇರಿ ನರ್ತಿಸಿದ್ಧಾರೆ.

ಶಾಲಾಮಕ್ಕಳು ಮತ್ತು ಪತ್ನಿಯೊಂದಿಗೆ ಅಸ್ಸಾಂನ ಮುಖ್ಯಮಂತ್ರಿ ನೃತ್ಯದ ವಿಡಿಯೋ ವೈರಲ್
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಶರ್ಮಾ ಶಾಲಾ ಮಕ್ಕಳೊಂದಿಗೆ
Follow us on

Viral : ಸಂಗೀತ ನೃತ್ಯ ಕಲೆಯ ಮಾಯೆಯೇ ಹಾಗೆ. ತನ್ನ ಸ್ಪರ್ಶಕ್ಕೆ ಸಿಕ್ಕವರನ್ನು ಹಾಗಾಗೇ ಎಳೆದುಕೊಂಡು ಬಿಡುತ್ತದೆ. ತಾನು ತನ್ನದು ತನ್ನ ಜಾತಿ, ಧರ್ಮ, ವರ್ಗ, ಹುದ್ದೆ ಅಂತಸ್ತು ಇದೆಲ್ಲವನ್ನೂ ಮೀರಿ ಪ್ರವಹಿಸುವ ಮತ್ತು ಎಲ್ಲರೊಳಗೂ ಒಂದಾಗುವ ಶಕ್ತಿ ಇರುವುದು ಕಲೆಗೆ ಮಾತ್ರ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಶಾಲಾಮಕ್ಕಳು ಅಸ್ಸಾಂನ ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ನೃತ್ಯ ಜುಮುರ್​ ಪ್ರದರ್ಶನ ಮಾಡುತ್ತಿದ್ಧಾರೆ. ಲಹರಿಗೆ ಬಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ವೇದಿಕೆಯನ್ನೇರಿ ಮಕ್ಕಳೊಂದಿಗೆ ನರ್ತಿಸಿಯೇ ಬಿಟ್ಟಿದ್ದಾರೆ. ಅವರೊಂದಿಗೆ ಅವರ ಪತ್ನಿಯೂ ಹೆಜ್ಜೆ ಹಾಕಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ತಮ್ಮ ನಿವಾಸದಲ್ಲಿ ಹತಿಂಗಾ ಟಿಇ ಮಾಡೆಲ್ ಸ್ಕೂಲ್ ಆಫ್​ ಬಿಸ್ವನಾಥ್ ಶಾಲೆಯ  ಮಕ್ಕಳಿಗಾಗಿಯೇ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಅವರು ಸಂವಾದ ನಡೆಸಿದರು. ಒಟ್ಟಿಗೆ ಊಟ ಮಾಡಿದರು. ಆ ನಂತರ ಮಕ್ಕಳನ್ನು ತಾರಾಲಯ, ಮೃಗಾಲಯ, ವಿಜ್ಞಾನ ವಸ್ತು ಸಂಗ್ರಹಾಲಯ, ಐಐಟಿ, ಶಂಕರದೇವ ಕಲಾಕ್ಷೇತ್ರ ಒಳಗೊಂಡಂತೆ ಅನೇಕ ಸ್ಥಳಗಳಿಗೆ ಕರೆದೊಯ್ಯಲಾಯಿತು. ಈ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಪದ್ಮಶ್ರೀ ದುಲಾಲ್ ಮಂಕಿ ಮತ್ತು ಗಾಯಕಿ ಗೀತಾಂಜಲಿ ದಾಸ್ ಅವರು ಸಂಗೀತ ಸುಧೆ ಹರಿಸಿದರು.

ಇದನ್ನೂ ಓದಿ : ಸಿಇಒ ರಾಧಿಕಾ ಗುಪ್ತಾ ತಾಯ್ತನದೊಂದಿಗೆ ಕಚೇರಿ ಕೆಲಸವನ್ನು ಹೇಗೆ ನಿರ್ವಹಿಸುತ್ತಿದ್ಧಾರೆ?

ಜಗತ್ತಿನ ವಿವಿಧ ಸ್ಥಳಗಳಲ್ಲಿರುವ ಅಸ್ಸಾಮಿಗರು ಈ ವಿಡಿಯೋ ನೋಡಿ ಪುಳಕಿತರಾಗಿದ್ದಾರೆ. ಅನೇಕರು ಈ ಪ್ರದರ್ಶನವನ್ನು ಕೊಂಡಾಡಿದ್ಧಾರೆ. ಮಕ್ಕಳಲ್ಲಿ ಕಲೆಯ ಬಗ್ಗೆ ಅಭಿರುಚಿ ಬೆಳೆಸುತ್ತಿರುವ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 3:18 pm, Mon, 9 January 23