Viral Video : ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬ್ಯೂಟಿ ಹ್ಯಾಕ್ಸ್ ನೋಡಿದ್ದೀರಿ. ಆದರೆ ಇದೀಗ ವೈರಲ್ ಆಗಿರುವ ಈ ಬ್ಯೂಟಿ ಹ್ಯಾಕ್ ಎಂದಾದರೂ ನೋಡಿದ್ದೀರಾ? ಖಂಡಿತ ಸಾಧ್ಯವಿಲ್ಲ. ಏಕೆಂದರೆ ಒಂದು ಮೆಣಸಿನಕಾಯಿ ಹೆಚ್ಚುವ ಹೊತ್ತಿಗೆ ಬೆರಳೆಲ್ಲ ಉರಿ ಅಂಟಿರುತ್ತದೆ. ಇನ್ನು ಮೃದುವಾದ ತುಟಿಗೆ ಹೀಗೆ ಮೆಣಸಿನ ಹುಡಿ ಅಂಟಿಸಿಕೊಳ್ಳುವುದೆಂದರೆ? ಯಾಕೆ ಹೀಗೆ ಮಾಡುತ್ತಿದ್ದಾಳೋ ಈ ಹುಡುಗಿ ಎಂದು ನೆಟ್ಟಿಗರೆಲ್ಲ ತಲೆ ಕೆರೆದುಕೊಳ್ಳುತ್ತಿದ್ದಾರೆ. ನೋಡಿ ನೀವೂ ಈ ವಿಡಿಯೋ.
ಜಹಾನ್ವಿ ಸಿಂಗ್ ಎಂಬ ಬ್ಯೂಟಿ ಬ್ಲಾಗರ್ ಮೊದಲಿಗೆ ಲಿಪ್ ಗ್ಲಾಸ್ ಅನ್ನು ತುಟಿಗೆ ಸವರಿಕೊಳ್ಳುತ್ತಾಳೆ ನಂತರ ಬೀಜಗಳ ಸಮೇತ ಮೆಣಸಿನ ಹುಡಿಯನ್ನು ಅದರ ಮೇಲೆ ಅಂಟಿಸಿಕೊಳ್ಳುತ್ತಾಳೆ. ಆ ನಂತರ ಟಿಶ್ಯೂ ಪೇಪರ್ನಿಂದ ತುಟಿಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಾಳೆ. ತುಟಿಗಳು ಗುಲಾಬಿ ಬಣ್ಣಕ್ಕೆ ರಂಗೇರಿರುತ್ತವೆ. ಆದರೆ ಈ ವಿಡಿಯೋ ಮಾಡಿದ ಮೇಲೆ, ಇನ್ನೆಂದೂ ಚಿಲ್ಲಿ ಲಿಪ್ ಗ್ಲಾಸ್ನ ಉಸಾಬರಿಗೆ ಹೋಗಬಾರದು ಎಂದು!
ಇದನ್ನೂ ಓದಿ : ಮೊಬೈಲ್ ವಶಪಡಿಸಿಕೊಂಡಿದ್ದಕ್ಕೆ ಶಿಕ್ಷಕರಿಗೆ ವಿದ್ಯಾರ್ಥಿನಿಯಿಂದ ಪೆಪ್ಪರ್ ಸ್ಪ್ರೇ; ವಿಡಿಯೋ ವೈರಲ್
ಯಾಕೆ ಆಕೆ ಹಾಗೆ ಹೇಳಿದಳು ಎನ್ನುವುದನ್ನು ಮತ್ತೆ ಬಿಡಿಸಿ ಹೇಳಬೇಕಲ್ಲ ಅಲ್ಲವಾ? ಗಮನಿಸಿದಿರಾ, ಆಕೆಯ ತುಟಿಗಳು ಊದಿಕೊಂಡಿದ್ದನ್ನು? ಈ ವಿಡಿಯೋ ನೋಡಿದ ಅನೇಕರು, ದಯವಿಟ್ಟು ಇಂಥದನ್ನೆಲ್ಲ ಪ್ರೋತ್ಸಾಹಿಸಬೇಡಿ, ಇದನ್ನು ಟ್ರೆಂಡ್ ಆಗದಂತೆ ನೋಡಿಕೊಳ್ಳಿ. ಇದು ಬಹಳೇ ಅಪಾಯಕಾರಿಯಾಗಿದೆ ಎಂದಿದ್ದಾರೆ. ಇಂಥ ಮೂರ್ಖತನ ಯಾಕೆ ಬೇಕು, ಲಿಪ್ ಬಾಮ್ ಹಚ್ಚಿಕೊಂಡರೆ ಮುಗಿಯಿತು ತಾನೆ? ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಪ್ರಚಾರಕ್ಕಾಗಿ ಜನ ಏನೂ ಮಾಡುತ್ತಾರೆ. ಇದರಲ್ಲಿ ಜನರ ತಪ್ಪೇನು ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಸ್ಪೈಸ್ಜೆಟ್ನ ಬ್ಯಾಂಕಾಕ್ ವಿಮಾನದಲ್ಲಿ ಪೈಲಟ್ನ ತಮಾಷೆ ವಿಡಿಯೋ ವೈರಲ್
ನಾನೊಮ್ಮೆ ಅಚಾನಕ್ಕಾಗಿ ಝಂಡೂಬಾಮ್ ಹಚ್ಚಿಕೊಂಡೆ ತುಟಿಗೆ. ಉರಿದುರಿದು ಹೋಯಿತು ತುಟಿ. ಇದೂ ಬಹುಶಃ ಅಷ್ಟೇ ಉರಿ ಅನ್ನಿಸಿರಬಹುದು ಆಕೆಗೆ ಎಂದಿದ್ದಾರೆ ಮತ್ತೊಬ್ಬರು. ಈಗ ಚಿಲ್ಲಿ ಫ್ಲೇಕ್ಸ್ ಆಯ್ತು ಮುಂದೆ ಓರಿಗಾನೋ ಹಚ್ಚಿಕೊಳ್ಳಿ ಎಂದು ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು.
ಹೇಳಿಕೇಳಿ ಮೆಣಸಿನಕಾಯಿ! ಬೇಕಾ ಇಂಥಾ ಹುಚ್ಚಾಟಗಳೆಲ್ಲಾ? ನೀವೇನಂತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:21 pm, Tue, 9 May 23