ನೀರಜ್ ಛೋಪ್ರಾ ವರ್ಕೌಟ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ
Neeraj Chopra : ಶ್ರಮವಿಲ್ಲದೇ ಯಾವ ಸಾಧನೆಯೂ ನಿಮ್ಮದಾಗುವುದಿಲ್ಲ. ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ನೀರಜ್ ಛೋಪ್ರಾ ಅವರ ನಿತ್ಯದ ವರ್ಕೌಟ್ ದೃಶ್ಯ ಇದಾಗಿದೆ.
Viral Video : ಉದ್ಯಮಿ ಆನಂದ ಮಹೀಂದ್ರಾ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಜೀವನ ಕೌಶಲ, ಜೀವನೋತ್ಸಾಹ ಮತ್ತು ಸಾಧನೆಗೆ ಸ್ಫೂರ್ತಿಯಾಗುವಂಥ ಅನೇಕ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇವರು ಹಂಚಿಕೊಂಡ ವಿಡಿಯೋದಲ್ಲಿ ವರ್ಕೌಟ್ ಮಾಡುತ್ತಿರುವವರು ಭಾರತೀಯ ಅಥ್ಲೀಟ್ ನೀರಜ್ ಛೋಪ್ರಾ. ಪುರುಷರ್ ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಇದೀಗ ಇವರ ನಿತ್ಯದ ವರ್ಕೌಟ್ ದೃಶ್ಯ ವೈರಲ್ ಆಗಿದೆ.
Just watching the workout routine of @Neeraj_chopra1 reminds me of the extraordinary, back-breaking effort that lies ‘behind-the-scenes’ of any victory. Nothing comes easy… pic.twitter.com/cgMRcZaDkq
ಇದನ್ನೂ ಓದಿ— anand mahindra (@anandmahindra) January 17, 2023
ಇಡೀ ದೇಶವೇ ಹೆಮ್ಮೆ ಪಡುವಂಥ ಸಾಧನೆಯನ್ನು ನೀರಜ್ ಮಾಡಿದ್ದಾರೆ. ಈ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದಾರೆ ನಿಜ. ಆದರೆ ಇವರ ಈ ಸಾಧನೆಯ ಹಿಂದೆ ಇರುವ ಪರಿಶ್ರಮ ಮಾತ್ರ ಅಪಾರ. ಹಾಗಾಗಿ ಸಾಧನಾಮುಖಿಯಾಗಿ ಯೋಚಿಸುವ ಪ್ರತಿಯೊಬ್ಬರೂ ಈ ವಿಡಿಯೋ ನೋಡುವುದು ಅತ್ಯವಶ್ಯ. ಏಕೆಂದರೆ ಯಾವ ಸಾಧನೆಯೂ ನಿತ್ಯಶ್ರಮವಿಲ್ಲದೆ ಬರಲಾರದು.
ಇದನ್ನೂ ಓದಿ : ನಾನೂ ನನ್ನ ಬೆಕ್ಕುಗಳೂ; ಬೆಕ್ಕುಗಳೊಂದಿಗೆ ಬೈಕ್ಸವಾರಿ ಮಾಡುತ್ತಿರುವ ಬೆಂಗಳೂರಿಗನ ವಿಡಿಯೋ ವೈರಲ್
2022 ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ನೀರಜ್ ಡೈಮಂಡ್ ಲೀಗ್ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. 33 ಸೆಕೆಂಡುಗಳ ಈ ವಿಡಿಯೋದಲ್ಲಿ ನೀರಜ್ ಕ್ಯಾರಿಯೋಕಾ ಡ್ರಿಲ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದು ಪ್ರತಿನಿತ್ಯ ಮಾಡಬೇಕಾದ ವ್ಯಾಯಾಮ. ಇದು ಪಾದಗಳನ್ನು ಚುರುಕುಗೊಳಿಸುತ್ತದೆ ಮತ್ತು ಹೃದಯದ ರಕ್ತನಾಳಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
9 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿ ಅಚ್ಚರಿ ಪಟ್ಟಿದ್ಧಾರೆ. ಎಂಥ ಶ್ರದ್ಧೆಯಿಂದ ಕೂಡಿದೆ ಈ ಪ್ರಯತ್ನ ಎಂದು ಶ್ಲಾಘಿಸಿದ್ದಾರೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:56 pm, Wed, 18 January 23