Woman : ‘ನಾನು ಆ್ಯಕ್ಸಿಡೆಂಟ್ಗೆ ಒಳಗಾದೆ. ಅದಕ್ಕಿಂತ ಮೊದಲು ಬ್ಯಾಂಕಿಂಗ್ ಕ್ಷೇತ್ರ, ಸಾಫ್ಟ್ವೇರ್ ಟೆಸ್ಟಿಂಗ್ (Software Testing) ಕೆಲಸ ಮಾಡುತ್ತಿದ್ದೆ. ಆ ಕೆಲಸ ಕಷ್ಟವೆನ್ನಿಸಿದಾಗ ನನ್ನದೇ ಆದ ಸಣ್ಣ ಉದ್ಯಮ ಮಾಡಬೇಕೆಂಬ ಮನಸ್ಸಾಯಿತು. ಆಗ ಶುರುಮಾಡಿದ್ದೇ ಈ ಕರಿದೋಸೆ ಹೋಟೆಲ್. ಜೆ.ಪಿ. ನಗರದ 7ನೇ ಹಂತದಲ್ಲಿರುವ ಬ್ರಿಗೇಡ್ ಮಿಲೇನಿಯಮ್ ಬಳಿ ಬೆಳಗ್ಗೆ 7ರಿಂದ 11ರವರೆಗೆ ದೋಸೆಕೆಲಸದಲ್ಲಿ ಮುಳುಗಿರುತ್ತೇನೆ. ಮಟನ್ ದೋಸೆ, ಪ್ರಾನ್ಸ್ ದೋಸೆ, ಎಗ್ ದೋಸೆ, ಚಿಕನ್ ರೋಸ್ಟ್ ದೋಸೆ, ಶೇರ್ವಾ ಎಗ್ ದೋಸೆ ಹೀಗೆ ಹತ್ತಾರು ಬಗೆಯ ದೋಸೆ ಮಾಡುತ್ತೇನೆ’ ಬೆಂಗಳೂರಿನಲ್ಲಿರುವ ಜನರು ಕರಿದೋಸೆ ವೀಣಕ್ಕನ ವೆರೈಟೆ ದೋಸೆಯನ್ನು ಹುಡುಕಿಕೊಂಡು ಬಂದು ಸವಿಯುತ್ತಾರೆ.
ಇದನ್ನೂ ಓದಿ : Viral Video: 88ರ ಅಜ್ಜ 85ರ ಅಜ್ಜಿ 66ನೇ ವಿವಾಹ ವಾರ್ಷಿಕೋತ್ಸವಕ್ಕೆ ಏರಿದ್ದು ಮೌಂಟ್ ವಾಷಿಂಗ್ಟನ್!
ಈ ವಿಡಿಯೋ ಅನ್ನು ಜು. 29ರಂದು ಕನ್ನಡ ಫುಡ್ ಚಾನೆಲ್ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಸುಮಾರು 61,000 ಜನರು ಲೈಕ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸುತ್ತ ಮಹಿಳೆ ಉದ್ಯಮದಲ್ಲಿ ತೊಡಗಿಕೊಂಡರೆ ಕಷ್ಟಜೀವಿ ಎನ್ನುತ್ತೀರಿ, ಆದರೆ ಅದೇ ಪುರುಷನಿಗೆ? ಎಂದು ಅನೇಕರು ಈ ವಿಡಿಯೋದಡಿ ಚರ್ಚಿಸಿದ್ದಾರೆ.
ಇದನ್ನೇ ಹುಡುಗರು ಮಾಡಿದರೆ ಸಪೋರ್ಟ್ ಮಾಡ್ತೀರಾ? ಕೆಲಸ ಬಿಟ್ಟು ರಸ್ತೆಬದಿ ದೋಸೆ ಹಾಕ್ತಾರೆ ಅಂದ್ರೆ ಯಾರು ಹೆಣ್ಣು ಕೊಡ್ತಾರೆ ಗುರು? ಎಂದಿದ್ದಾರೆ ಒಬ್ಬರು. ಹೌದು ಹುಡುಗರು ಪಾಪ ದುಡಿಮೆನೇ ಇಲ್ಲದೇ ರಸ್ತೆಯಲ್ಲಿ ತಿರುಗಾಡ್ತಾ ಇದ್ದಾರಲ್ವಾ? ಎಂದು ಕೇಳಿದ್ದಾರೆ ಇನ್ನೊಬ್ಬರು. ಹೆಣ್ಣುಮಕ್ಕಳು ಬಿಝಿನೆಸ್ ಮಾಡೋದು ಅಷ್ಟು ಸುಲಭ ಇಲ್ಲ, ಮನೆಯವರೂ ಕೂಡ ಬಿಝಿನೆಸ್ ಮಾಡು ಅಂತ ಹೇಳಲ್ಲ. ಅದಕ್ಕೋಸ್ಕರ ಇಂಥವರಿಗೆ ಸಪೋರ್ಟ್ ಮಾಡಿ ಅಂತ ಹೇಳಿದ್ದು ಎಂದು ಮತ್ತೊಬ್ಬರು ಹೇಳಿದ್ಧಾರೆ.
ಇದನ್ನೂ ಓದಿ : Viral Video: ‘ಹಸು ಸಾಕಿದ್ರೆ ಹೆಣ್ಣು ಕೊಡಲ್ಲ ಅಂತೀರಿ ಯಾಕೆ?’ ಪರವಿರೋಧ ಚರ್ಚೆ
ಅದೇನ್ ಗುರು ಎಲ್ಲಾ ಸಾಫ್ಟ್ವೇರ್ನವರೆಲ್ಲಾ ಯಾಕೆ ಹೀಗೆ ಬೀದಿಗೆ ಬಂದು ಹೋಟೆಲ್ ಮಾಡ್ತಿದಾರೆ? ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಎಂಬಿಎ ಮಾಡಿದವರೆಲ್ಲ ಏನು ಮಾಡ್ತಿದಾರೆ? ಎಂದು ಕೇಳಿದ್ದಾರೆ ಒಬ್ಬರು. ಹೆಣ್ಣುಮಗಳು ಗಂಡುಮಕ್ಕಳು ಮಾಡುವ ಕೆಲಸ ಮಾಡಿದರೆ ಸಬಲೆ, ಕಷ್ಟಜೀವಿ, ಸ್ವಾವಲಂಬಿ, ಶ್ರೇಷ್ಠ ಮಹಿಳೆ. ಅದೇ ಗಂಡಸು ಮಾಡಿದರೆ ನಿರುದ್ಯೋಗಿ, ಅನಕ್ಷರಸ್ಥ ಅಲ್ಲವಾ? ಎಂದು ಕೇಳಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 6:05 pm, Sat, 19 August 23