Viral Video: ‘ಮೂರು ವರ್ಷ ವ್ಯಾನ್​ ಡ್ರೈವರ್​ನಿಂದ ಲೈಂಗಿಕ ದೌರ್ಜನ್ಯ, ಹೇಳಿದ್ದಕ್ಕೆ ಪೋಷಕರು ನನ್ನನ್ನೇ ಬೈದರು’

|

Updated on: Sep 13, 2023 | 12:43 PM

Parenting: ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಮತ್ತದನ್ನು ಪೋಷಕರಲ್ಲಿ ಹೇಳಿಕೊಂಡಾಗ ಪೋಷಕರು ಕೂಡಲೇ ಆ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಜೀವನಪೂರ್ತಿ ಆ ಮಕ್ಕಳು ನಲುಗಬೇಕಾಗುತ್ತದೆ. ಸಮಾಜದ ಮುಖ್ಯವಾಹಿನಿಯಿಂದ ಮಕ್ಕಳು ದೂರ ಉಳಿದಾಗಲೂ ಪೋಷಕರು ಅದರಲ್ಲಿಯೂ ಭಾರತೀಯ ಪೋಷಕರು ದೂರುವುದು ಮಕ್ಕಳನ್ನೇ. ಅಬಿರಾ ಮುಖರ್ಜಿಯ ಈ ಕಥೆಯನ್ನು ಓದಿ.

Viral Video: ಮೂರು ವರ್ಷ ವ್ಯಾನ್​ ಡ್ರೈವರ್​ನಿಂದ ಲೈಂಗಿಕ ದೌರ್ಜನ್ಯ, ಹೇಳಿದ್ದಕ್ಕೆ ಪೋಷಕರು ನನ್ನನ್ನೇ ಬೈದರು
ಅಬಿರಾ ಮುಖರ್ಜಿ
Follow us on

Sexual Assault : ‘ನಾನು 7ನೇ ತರಗತಿ ಓದುತ್ತಿದ್ದಾಗ ವ್ಯಾನ್​ನಲ್ಲಿ ಶಾಲೆಗೆ ಹೋಗುತ್ತಿದ್ದೆ. ನನ್ನ ಸುರಕ್ಷತೆ ದೃಷ್ಟಿಯಿಂದ ನನ್ನ ಅಜ್ಜಿ ವ್ಯಾನ್​ ಡ್ರೈವರ್​ನನ್ನು (Van Driver) ಬಹಳ ನಂಬಿದ್ದರು. ಆದರೆ ಅವನು ತನ್ನ ಸೀಟಿನಲ್ಲಿ ನನ್ನನ್ನು ಕೂರಿಸಿಕೊಂಡು ಸ್ಕರ್ಟ್​ನೊಳಗೆ ಕೈಹರಿಬಿಡುತ್ತಿದ್ದ. ಇದನ್ನು ನಾನು ಮನೆಯೊಳಗೆ ಹೇಳಿದೆ. ನನ್ನನ್ನೇ ವಾಪಾಸು ಬೈದರೇ ಹೊರತು ಆ ವ್ಯಾನ್​ನ ಬದಲಾಗಿ ಬೇರೆ ವ್ಯವಸ್ಥೆ ಮಾಡಲಿಲ್ಲ. ಮುಂದೆ 9ನೇ ತರಗತಿಯಲ್ಲಿದ್ದಾಗ ನನ್ನ ಎದೆ ಮುಟ್ಟಿದ. ಆಗಲೂ ನನ್ನ ಪೋಷಕರು ನನ್ನನ್ನೇ ಬೈದರು. ಪ್ರತೀ ದಿನ ನಾನು ಹೀಗೆ ಲೈಂಗಿಕ ದೌರ್ಜನ್ಯಕ್ಕೆ ಒಳಪಡುತ್ತಲೇ ಹೋದೆ. ಆದರೆ ನಾನು ಇದರಿಂದ ಹೊರಬರಬೇಕಿತ್ತು. ಒಂದು ದಿನ ನಾನು ನನ್ನ ಪಾದದಿಂದ ಹೆಬ್ಬೆರಳನ್ನು ಜೋರಾಗಿ ತುಳಿದೆ. ಆಗ ಅವನು ಹೆದರಿದ. ಒಂದು ಕ್ಷಣ ನಾವು ಧೈರ್ಯ ತೋರಿದರೆ ಬದುಕೇ ಬದಲಾಗುತ್ತದೆ. ಆದರೆ ನನಗಿನ್ನೂ ಭಯ ಇದ್ದೇ ಇದೆ, ಅದರಿಂದ ಹೊರಬರಲು ಪ್ರತೀದಿನ ಪ್ರಯತ್ನಿಸುತ್ತಿರುತ್ತೇನೆ’ ಅಬಿರಾ ಮುಖರ್ಜೀ

ಇದನ್ನೂ ಓದಿ : Viral Video: ಬೆಂಗಳೂರು; ‘ಬೆಳಗ್ಗೆಯಿಂದ ಗೂಂಡಾಗಿರಿ ನಡೆಯುತ್ತಿದೆ, ಏನು ಮಾಡುತ್ತಿದ್ದೀರಿ ಪೊಲೀಸರೇ?’

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇನ್​ಸ್ಟಾಗ್ರಾಂನ officialpeopleofindia ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಒಂದು ಗಂಟೆಯ ಹಿಂದೆ ಹಂಚಿಕೊಂಡ ಈ ಪೋಸ್ಟ್​ ಅನ್ನು ಸುಮಾರು 36,000 ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಈ ಬಗ್ಗೆ ಚರ್ಚಿಸಿದ್ದಾರೆ. ಕ್ಷಮಿಸಿ, ನಿಮ್ಮ ಕುಟುಂಬದವರ ಬಗ್ಗೆ ಅಸಹ್ಯವೆನ್ನಿಸುತ್ತಿದೆ ಎಂದಿದ್ದಾರೆ ಅನೇಕರು.

ಅಬಿರಾ ಮುಖರ್ಜಿಯ ಈ ವಿಡಿಯೋ ನೋಡಿ

ಇಂಥ ಪರಿಸ್ಥಿತಿಯಲ್ಲಿಯೂ ಪೋಷಕರು ಮಗಳನ್ನು ಬೆಂಬಲಿಸುವುದಿಲ್ಲವೆಂದರೆ ಹೇಗೆ? ಅವರಿಗೆ ಅವರ ಮಗಳ ಬಗ್ಗೆ ಕಾಳಜಿಯೇ ಇಲ್ಲವೇ? ಎಂದಿದ್ದಾರೆ ಒಬ್ಬರು. ಹೀಗೆ ಬಲಿಪಶುವಾಗುವ ಮಕ್ಕಳನ್ನೇ ಸಮಾಜ ಮತ್ತು ಕುಟುಂಬ ದೂರುತ್ತದೆ ಇದು ಖೇದನೀಯ ಎಂದಿದ್ದಾರೆ ಇನ್ನೊಬ್ಬರು. ಇಂಥ ಪೋಷಕರೂ ಇದ್ಧಾರಾ? ಎಂದು ಮತ್ತೊಬ್ಬರು ಕೇಳಿದ್ದಕ್ಕೆ, ಹೌದು ಅಂಥ ಪೋಷಕರೇ ನನಗಿರುವುದು ಎಂದು ಒಂದಿಷ್ಟು ಜನ ಯುವತಿಯರು ಹೇಳಿದ್ಧಾರೆ.

ಇದನ್ನೂ ಓದಿ : Viral Video: ಅಮ್ಮನ ಮದುವೆಯಲ್ಲಿ ಮಗನ ಭಾವನಾತ್ಮಕ ಭಾಷಣ; ಕಣ್ಣೀರಾದ ನೆರೆದವರು

ಬಹುಪಾಲು ಭಾರತೀಯರು ತಮ್ಮ ಪ್ರಸಿದ್ಧಿಯ ಬಗ್ಗೆ ಗಮನ ಕೊಡುತ್ತಾರೆ, ಮಕ್ಕಳನ್ನು ನಿರ್ಲಕ್ಷಿಸುತ್ತಾರೆ ನಾನು ಹೇಳುತ್ತಿರುವುದನ್ನು ದಯವಿಟ್ಟು ನಂಬಿ ಎಂದಿದ್ದಾರೆ ಒಬ್ಬರು. ಬಲಿಪಶುಗಳಾಗುವ ಇಂಥ ಜೀವಗಳು ಸಾಯುವತನಕ ಹೋರಾಡುತ್ತಲೇ ಇರಬೇಕಾಗುತ್ತದೆ, ನಿಮಗೆ ಹೆಚ್ಚು ಶಕ್ತಿ ಒದಗಲಿ ಸಹೋದರಿ ಎಂದಿದ್ದಾರೆ ಇನ್ನೊಬ್ಬರು. ಭಾರತೀಯ ಪೋಷಕರು ತಮ್ಮ ಮಕ್ಕಳನ್ನು ಎಂದಿಗೂ ನಂಬುವುದಿಲ್ಲ. ಅವರ ತಪ್ಪಿದ್ದರೂ ಅವರು ದೂಷಿಸುವುದು ಮಕ್ಕಳನ್ನೇ. ನೀವು ಧೈರ್ಯಶಾಲಿ, ಆ ವಿಕೃತಕಾಮಿಯಿಂದ ದೂರ ಸರಿದಿದ್ದೀರಿ. ಅವನು ನರಕದಲ್ಲಿ ಖಂಡಿತ ಕೊಳೆಯುತ್ತಾನೆ. ನಿಮ್ಮ ಬಗ್ಗೆ ಹೆಮ್ಮೆ ಇದೆ. ಆದರೆ ನಿಮ್ಮನ್ನು ನಂಬದಿರುವ ನಿಮ್ಮ ಹೆತ್ತವರ ಬಗ್ಗೆ ವಿಪರೀತ ಕೋಪವೂ ಇದೆ ಎಂದಿದ್ದಾರೆ ಮಗದೊಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ