Teachers Day 2023: ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ

Teacher Student: ಎಲ್ಲೆಡೆ ಶಿಕ್ಷಕರನ್ನು ಗೌರವಿಸುವ, ಸನ್ಮಾನಿಸುವ, ಸ್ಮರಿಸುವ ಮತ್ತು ಆದರಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಅದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಎಲ್ಲಕ್ಕಿಂತ ಭಿನ್ನವಾಗಿದೆ. ಅಷ್ಟೇ ಅಲ್ಲ, ಸ್ವಲ್ಪ ಯೋಚಿಸುವಂತೆ ಮಾಡುತ್ತದೆ. ಹಾಗೆಯೇ ಬೇಸರವನ್ನೂ ತರುತ್ತದೆ. ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು? ತಿಳಿಸಿ.

Teachers Day 2023: ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ
ಶಿಕ್ಷಕರ ದಿನಾಚರಣೆಯಂದು ಸ್ನೋ ಸ್ಪ್ರೇ ಮಾಡುತ್ತಿರುವ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ

Updated on: Sep 05, 2023 | 4:07 PM

Teachers Day Special: ಮಕ್ಕಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಪೋಷಕರಷ್ಟೇ ಶಿಕ್ಷಕರಿಗೂ ಇದೆ. ಇಂದು ಎಲ್ಲೆಡೆ ಶಿಕ್ಷಕರ ದಿನಾಚರಣೆ ಸಂಭ್ರಮ. ಶಿಕ್ಷಕರನ್ನು ಗೌರವಿಸುವ, ನೆನೆಯುವ ಮತ್ತು ವಂದನೆ ಸಲ್ಲಿಸುವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿವೃಂದ ಮುಳುಗಿದೆ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಈ ದಿನಕ್ಕೆ ವ್ಯತಿರಿಕ್ತವಾಗಿದೆ. 1 ಲಕ್ಷಕ್ಕಿಂತಲೂ ಹೆಚ್ಚು ಜನರು ನೋಡಿರುವ ಈ ವಿಡಿಯೋದಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಯ ಮೇಲೆ ಹಲ್ಲೆ (Assault) ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಈ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಸಪ್ತಸಾಗರದಾಚೆ ಎಲ್ಲೋ; ಸುನಿಧಿ ಗಣೇಶ್ ಹಾಡಿರುವ ಟೈಟಲ್ ಟ್ರ್ಯಾಕ್​ ವೈರಲ್ 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವಿಡಿಯೋದಲ್ಲಿರುವ ತರಗತಿಯಲ್ಲಿ ವಿದ್ಯಾರ್ಥಿಗಳೆಲ್ಲರೂ ಶಿಕ್ಷಕರ ದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಒಬ್ಬ ವಿದ್ಯಾರ್ಥಿ ಬರ್ತಡೇ ಪಾರ್ಟಿಗಳಲ್ಲಿ ಸ್ನೋ ಸ್ಪ್ರೇ ಮಾಡುವಂತೆ ತಮಾಷೆಗಾಗಿ ಶಿಕ್ಷಕರ ಮೇಲೆ ಸ್ಪ್ರೇ ಮಾಡುತ್ತಾನೆ. ಆಗ ಕೋಪಗೊಂಡ ಶಿಕ್ಷಕರು ಆತನನ್ನು ಎಳೆದು ಬೆನ್ನ ಮೇಲೆ ಹೊಡೆಯಲಾರಂಭಿಸುತ್ತಾರೆ.

ಶಿಕ್ಷಕರು ವಿದ್ಯಾರ್ಥಿಯನ್ನು ಹೊಡೆದ ದೃಶ್ಯ

ಆದರೆ ಇದನ್ನು ನೋಡಿದ ನೆಟ್ಟಿಗರು ಈ ದೃಶ್ಯವನ್ನು ತಮಾಷೆಯಾಗಿ ಸ್ವೀಕರಿಸಿದ್ದಾರೆ. ತುಂಬಾ ಚೆನ್ನಾಗಿದೆ ಶಿಕ್ಷಕರ ದಿನಾಚರಣೆಯ ಸಂಭ್ರಮ ಮತ್ತು ಉಡುಗೊರೆ ಎನ್ನುತ್ತಿದ್ದಾರೆ. ಆದರೆ ವಿದ್ಯಾರ್ಥಿಯು ಇಂಥ ಕುಚೇಷ್ಟೆಗೆ ಮುಂದಾಗಬಾರದಿತ್ತು, ಹಾಗೆಯೇ ಶಿಕ್ಷಕರು ತಾಳ್ಮೆಯಿಂದ ಆ ಹುಡುಗನಿಗೆ ಬುದ್ಧಿ ಹೇಳಬೇಕಿತ್ತು. ಈ ತನಕ ಈ ವಿಡಿಯೋ ಅನ್ನು ಸುಮಾರು 1,900 ಜನರು ಲೈಕ್ ಮಾಡಿದ್ದಾರೆ. 240 ಜನರು ರೀಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : Viral Video: ಅದು ವಿದ್ವಾನ್​ ಬಾತುಕೋಳಿಯವರ ಬೀಟ್​ಬಾಕ್ಸ್​​; ಎಡಿಟಿಂಗ್​ ವೇಳೆ ಗೊತ್ತಾದ ಸತ್ಯ

ಆ ವಿದ್ಯಾರ್ಥಿಯು ತಿಳಿವಳಿಕೆ ಇಲ್ಲದೆ ಮಾಡಿದ್ದಾನೋ ಅಥವಾ ಬೇಕೆಂದೇ ಮಾಡಿದ್ದಾನೋ ಗೊತ್ತಿಲ್ಲ. ಆದರೆ ಶಿಕ್ಷಕರು ಮಾತ್ರ ಇದನ್ನು ಸಮಾಧಾನದಿಂದ ನಿರ್ವಹಿಸಬೇಕಿತ್ತು. ಬಹುಶಃ ಈ ವಿಡಿಯೋದಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಪೆಟ್ಟು ತಿಂದ ಆ ವಿದ್ಯಾರ್ಥಿಗೆ, ಪೆಟ್ಟು ಕೊಟ್ಟ ಶಿಕ್ಷಕರಿಗೆ ಈ ಶಿಕ್ಷಕರ ದಿನಾಚರಣೆ ಜನ್ಮಪೂರ್ತಿ ನೆನಪಿನಲ್ಲಿ ಉಳಿಯುವುದಂತೂ ಗ್ಯಾರಂಟೀ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ