ಹಸ್ಕಿಗೀತೆ; ಸಂಗೀತ ಕಲಿಯುವಲ್ಲಿ ಎಂಥಾ ಶ್ರದ್ಧೆ ಈ ತಾಯಿ ಮಕ್ಕಳದು

Husky : ನಿಮಗೆ ಹಾಡುವ ಖಯಾಲಿ ಇದ್ದರೆ ನಿಮ್ಮ ಮನೆಯ ನಾಯಿಗಳು ದನಿಸೇರಿಸುವುದನ್ನು ಕೇಳಿರುತ್ತೀರಿ. ಆದರೆ ಎಂದಾದರೂ ನಾಯಿ ತನ್ನ ಮಕ್ಕಳಿಗೆ ಇಷ್ಟು ಶಿಸ್ತಾಗಿ ಸಂಗೀತಪಾಠ ಹೇಳಿಕೊಡುತ್ತಿರುವುದನ್ನು ನೋಡಿದ್ದೀರಾ? ಬನ್ನಿ ಇಲ್ಲಿ.

ಹಸ್ಕಿಗೀತೆ; ಸಂಗೀತ ಕಲಿಯುವಲ್ಲಿ ಎಂಥಾ ಶ್ರದ್ಧೆ ಈ ತಾಯಿ ಮಕ್ಕಳದು
ಹಸ್ಕಿ ನಾಯಿಯು ತನ್ನ ಮರಿಗಳಿಗೆ ಹಾಡು ಹೇಳಿಕೊಡುತ್ತಿರುವುದು
Edited By: ಶ್ರೀದೇವಿ ಕಳಸದ

Updated on: May 05, 2023 | 10:32 AM

Viral Video : ನೀವಷ್ಟೇ ಹಾಡು ಕಲಿಯಬೇಕೇ? ನಮಗೂ ಹಾಡಲು ಬರುತ್ತದೆ. ನಮ್ಮ ಹಾಡನ್ನೂ ನೀವು ಕೇಳಬೇಕು ಎನ್ನುತ್ತಿದೆ ಹಸ್ಕಿಯಮ್ಮ. ಅದೆಷ್ಟು ಶ್ರದ್ಧೆಯಿಂದ ಈ ಅಮ್ಮ ಮಕ್ಕಳು ಹಾಡಿನಲ್ಲಿ ಮುಳುಗಿವೆ ನೋಡಿ. ಸುತ್ತಲೂ ಶಿಸ್ತಿನಿಂದ ಮಕ್ಕಳನ್ನು ಕೂರಿಸಿಕೊಂಡು ಅದೆಷ್ಟು ತನ್ಮಯತೆಯಿಂದ ಕಲಿಸಿಕೊಡುತ್ತಿದೆ. ಒಂದೇ ಶ್ರುತಿಗೆ ಎಲ್ಲವೂ ಸೇರಲು ಪ್ರಯ್ನಿಸುವುದನ್ನು ಗಮನಿಸಿ.

ನಿಮ್ಮ ಮನೆಯಲ್ಲಿ ನೀವು ನಾಯಿಯನ್ನು ಸಾಕಿದ್ದೀರಿ ಎಂದುಕೊಳ್ಳಿ. ನೀವೇನಾದರೂ ಹಾಡಲು ಆರಂಭಿಸಿದರೆ ನಾಯಿಯೂ ನಿಮ್ಮನ್ನು ಅನುಕರಿಸಲು ನೋಡುತ್ತದೆ. ಆದರೆ ಹೀಗೆ ತಾಯಿನಾಯಿಯು ಶಿಸ್ತಾಗಿ ತನ್ನ ಮಕ್ಕಳಿಗೆ ಹಾಡಲು ಹೇಳಿಕೊಡುವುದೆಂದರೆ, ಅಮ್ಮ ಹೇಳಿದ ಹಾಗೆ ಮಕ್ಕಳೂ ಕೇಳುವುದೆಂದರೆ, ಅಚ್ಚರಿ ಎನ್ನಿಸುವುದಿಲ್ಲವೆ?

ಇದನ್ನೂ ನೋಡಿ : ಡೋಲೋ 650 ಶಶಿರೇಖಾ; ನಿಮ್ಮ ಮನೆಮಗಳೀಗ ಮಾಡೆಲಿಂಗ್​ಗೂ ಸೈ?

ಈಗಾಗಲೇ ಈ ವಿಡಿಯೋ ಅನ್ನು ಸುಮಾರು 84,000 ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಈ ವಿಡಿಯೋಗೆ ಪ್ರತಕ್ರಿಯಿಸಿದ್ದಾರೆ. ನಾವು ಹೇಗೆ ಪ್ರಾರ್ಥಿಸುತ್ತೇವೋ ಆದೇ ರೀತಿ ಇದು ತನ್ನ ಮಕ್ಕಳಿಗೆ ಪ್ರಾರ್ಥಿಸುವುದನ್ನ ಹೇಳಿಕೊಡುತ್ತದೆ ಎಂದಿದ್ದಾರೆ ಒಬ್ಬರು. ಅಯ್ಯೋ ಸದ್ಯ ಈ ನಾಯಿ ನಮ್ಮನೆಯಲ್ಲಿಲ್ಲ! ಎಂದಿದ್ಧಾರೆ ಮತ್ತೊಬ್ಬರು.

ಇದನ್ನೂ ಓದಿ : ನಾಯಿ ಕರುವಿನ ಬಾಂಧವ್ಯ; ಸ್ವಜಾತಿ ಸ್ನೇಹ ಸಹಜ ಆದರೆ

ಈ ನಾಯಿ ಸಾಕಿದ ಮನೆ ಮತ್ತು ನೆರೆಹೊರೆಯವರು ಎಷ್ಟೊಂದು ಅದೃಷ್ಟವಂತರು ಎಂದಿದ್ದಾರೆ ಮಗದೊಬ್ಬರು. ಈ ವಿಡಿಯೋ ನೋಡಲು ಬಹಳ ಮುದ್ಧಾಗಿದೆ. ಇವರೆಲ್ಲರೂ ಹೀಗೆ ಒಂದೇ ಕಡೆ ಒಟ್ಟಿಗೇ ಹೀಗೇ ಖುಷಿಯಾಗಿರಲಿ ಎಂದು ಹಾರೈಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:29 am, Fri, 5 May 23

TV9 Web

TV9 Kannada

Read More
Loading...
Unable to load recommendations.
Follow Us