ಟ್ಯಾಟೂ ಶ್ರದ್ಧಾಂಜಲಿ; ನಾಯಿಯ ನೆನಪಿಗಾಗಿ ತನ್ನ ಕಿವಿಗೆ ‘ನಾಯಿಕಿವಿ’ ಟ್ಯಾಟೂ ಹಾಕಿಸಿಕೊಂಡ ಯುವತಿ

Tattoo Tribute : ಮೊನ್ನೆಯಷ್ಟೇ ಆಸ್ಟ್ರೇಲಿಯಾದಲ್ಲಿ ತಮ್ಮ ಪ್ರೀತಿಯ ನಾಯಿಯ ನೆನಪಿಗಾಗಿ ಅದರ ತುಪ್ಪಳದ ಹೊದಿಕೆಯನ್ನೇ ಇಟ್ಟುಕೊಂಡಿದ್ದರು. ಈಗ ಈಕೆ ತನ್ನ ನಾಯಿಯ ನೆನಪನ್ನು ಹೀಗೆ ಹಚ್ಚೆಯಾಗಿಸಿಕೊಂಡಿದ್ದಾರೆ.

ಟ್ಯಾಟೂ ಶ್ರದ್ಧಾಂಜಲಿ; ನಾಯಿಯ ನೆನಪಿಗಾಗಿ ತನ್ನ ಕಿವಿಗೆ ‘ನಾಯಿಕಿವಿ’ ಟ್ಯಾಟೂ ಹಾಕಿಸಿಕೊಂಡ ಯುವತಿ
Viral video of woman‘s heartfelt tattoo tribute to her dog
Edited By:

Updated on: Nov 08, 2022 | 1:28 PM

Viral Video : ಪ್ರಾಣಿಗಳನ್ನು ಕಳೆದುಕೊಂಡ ದುಃಖ ವ್ಯಕ್ತಿಗಳನ್ನು ಕಳೆದುಕೊಂಡದ್ದಕ್ಕಿಂತ ಹೆಚ್ಚು. ಅಷ್ಟು ಅಂತಃಕರಣ ಮತ್ತು ವಿಶ್ವಾಸವುಳ್ಳ ಜೀವ ನಾಯಿ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಈ ಯುವತಿ ತನ್ನ ನಾಯಿಗೆ ಶ್ರದ್ಧಾಂಜಲಿ ಸಲ್ಲಿಸಲು ತನ್ನ ಕಿವಿಗೆ ನಾಯಿಯ ಕಿವಿಯಾಕಾರದ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ನೆಟ್ಟಿಗರು ಈ ವಿಡಿಯೋ ನೋಡಿ ಹನಿಗಣ್ಣಾಗುತ್ತಿದ್ದಾರೆ.

ಮ್ಯಾಟ್ ಎಂಬ ಟ್ವಟಿರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನಾನು ವಾರಗಟ್ಟಲೆ ಅಳುತ್ತೇನೆ ಎಂದು… 5 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 36,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಈ ವಿಡಿಯೋ ಟಿಕ್​ಟಾಕ್​ನಲ್ಲಿ ಮೊದಲು ಕಾಣಿಸಿಕೊಂಡಿತ್ತು. ಇದೀಗ ಟ್ವಿಟರ್​ನಲ್ಲಿ ಕಾಣಿಸಿಕೊಂಡಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ದುಃಖತಪ್ತರಾಗಿದ್ದಾರೆ. ಇಡೀ ದಿನ ನನಗೆ ಮನೆಯಿಂದ ಹೊರಬರಲಾಗದು. ಅಳುವುದನ್ನು ಬಿಟ್ಟರೆ ಏನೂ ತೋಚುತ್ತಿಲ್ಲ ಎಂದಿದ್ದಾರೆ ಒಬ್ಬರು. ಇದಕ್ಕಿಂತ ಒಳ್ಳೆಯ ಶ್ರದ್ಧಾಂಜಲಿ ಇಲ್ಲವೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು.

ನೋವು ಎದೆಯಲ್ಲಿ ಮಡುಗಟ್ಟಿದಾಗ ಮಾತು ಹೇಗೆ ಹೊಮ್ಮುತ್ತದೆ?

ಏನು ಅನ್ನಿಸುತ್ತಿದೆ ಈ ವಿಡಿಯೋ ನೋಡಿ ನಿಮಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ