Viral Video: ಮೊದಲ ಬಾರಿಗೆ ಪಿಜ್ಜಾ ತಿಂದ ಅಜ್ಜಿಯ ರಿಯಾಕ್ಷನ್ ಮಜವಾಗಿತ್ತು! ವಿಡಿಯೊ ನೋಡಿ

ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಅಜ್ಜಿ ಪಿಜ್ಜಾ ತಿನ್ನುತ್ತಿದ್ದಾಳೆ. ಪಿಜ್ಜಾ ತಿಂದ ಅಜ್ಜಿಯ ರಿಯಾಕ್ಷನ್​ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ. ವಿಡಿಯೊ ಮಜವಾಗಿದೆ ನೀವೇ ನೋಡಿ.

Viral Video: ಮೊದಲ ಬಾರಿಗೆ ಪಿಜ್ಜಾ ತಿಂದ ಅಜ್ಜಿಯ ರಿಯಾಕ್ಷನ್ ಮಜವಾಗಿತ್ತು! ವಿಡಿಯೊ ನೋಡಿ
ಪಿಜ್ಜಾ ತಿಂದ ಅಜ್ಜಿಯ ರಿಯಾಕ್ಷನ್​ ವೈರಲ್​
Edited By:

Updated on: Nov 11, 2021 | 9:20 AM

ಯುವ ಪೀಳಿಗೆಗೆ ಪಿಜ್ಜಾ ಅಂದ್ರೆ ಎಷ್ಟು ಇಷ್ಟ ಎಂಬುದನ್ನ ಹೇಳಬೇಕಾಗಿಲ್ಲ. ತಿಂಡಿ ಆರ್ಡರ್ ಮಾಡೋಣ ಅಂದಾಗಲೆಲ್ಲಾ ಮೊದಲಿಗೆ ನೆನಪಿಗೆ ಬರೋದೇ ಪಿಜ್ಜಾ. ಫ್ರೆಂಡ್ಸ್​ಗಳೆಲ್ಲಾ ಒಟ್ಟಿಗೆ ಸೇರಿ ಪಾರ್ಟಿ ಮಾಡೋಣ ಅಂದಾಗಲೆಲ್ಲಾ ಮೊದಲು ನೆನಪಾಗೋದು ಪಿಜ್ಜಾ. ಅಷ್ಟು ಅಚ್ಚು ಮೆಚ್ಚಾಗಿಬಿಟ್ಟಿದೆ ಪಿಜ್ಜಾ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ಅಜ್ಜಿ ಪಿಜ್ಜಾ ತಿನ್ನುತ್ತಿದ್ದಾಳೆ. ಪಿಜ್ಜಾವನ್ನು ಕೈಗೆತ್ತಿಕೊಂಡು ಬಾಯಿಗೆ ಹಾಕಿದ ಬಳಿಕ ಅಜ್ಜಿಯ ರಿಯಾಕ್ಷನ್ ಮಜವಾಗಿದೆ. ವಿಡಿಯೊ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಫುಲ್ ಹರಿದಾಡುತ್ತಿದೆ.

ವಿಡಿಯೊದಲ್ಲಿ ಗಮನಿಸುವಂತೆ ಅಜ್ಜಿ ಮೊದಲ ಬಾರಿಗೆ ಪಿಜ್ಜಾ ತಿನ್ನುತ್ತಿರುವುದನ್ನು ನೋಡಬಹುದು. ಅವರ ಮೊಮ್ಮಗ ಅಜ್ಜಿಯ ರಿಯಾಕ್ಷನ್ಅನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೊ ಹಂಚಿಕೊಂಡಿದ್ದು ಇದೀಗ ವಿಡಿಯೊ ಫುಲ್ ವೈರಲ್ ಆಗಿದೆ, ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಇದುವರೆಗೆ 58,203 ಕ್ಕೂ ಹೆಚ್ಚಿನ ಲೈಕ್ಸ್​ಗಳನ್ನು ಗಳಿಸಿಕೊಂಡಿದೆ. ಪಿಜ್ಜಾ ತಿಂದು ಅಜ್ಜಿಯ ನೀಡಿದ ರಿಯಾಕ್ಷನ್ ಮಜವಾಗಿದೆ ಎಂದು ಪ್ರತಿಕ್ರಿಯಿಸುವ ಮೂಲಕ ನೆಟ್ಟಿಗರು ಅನಿಸಿಕೆ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ಎಚ್ಚರಿಕೆಯ ಸಂದೇಶವನ್ನು ಸಾರುತ್ತವೆ. ಇನ್ನು ಕೆಲವು ತಮಾಷೆಯಾಗಿದ್ದು ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತವೆ. ಈ ವಿಡಿಯೊ ಕೂಡಾ ತಮಾಷೆಯದ್ದಾಗಿದ್ದು, ಫುಲ್​ ವೈರಲ್​ ಆಗಿದೆ. ಪಿಜ್ಜಾ ತಿಂದ ಬಳಿಕ ಅಜ್ಜಿ ಕೊಟ್ಟ ರಿಯಾಕ್ಷನ್​ ಇದೀಗ ಸಕತ್​ ವೈರಲ್​ ಆಗಿದೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಲು ಪ್ರಯತ್ನಿಸಿದ ವ್ಯಕ್ತಿ! ವಿಡಿಯೊ ಮಜವಾಗಿದೆ ನೀವೇ ನೋಡಿ

Viral Video: ಲಿಫ್ಟ್​ನೊಳಗೆ ಸಿಲುಕಿಕೊಂಡು ನೇತಾಡುತ್ತಿದ್ದ ನಾಯಿ ಮರಿಯ ಜೀವ ಉಳಿಸಿದ ಡೆಲಿವರಿ ಬಾಯ್; ವಿಡಿಯೊ ನೋಡಿ

Loading...
Unable to load recommendations.
Follow Us