ಪಾಕಿಸ್ತಾನಿ ಟಾಕ್ ಶೋಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿವೆ. ಇತ್ತೀಚಿಗಷ್ಟೇ ಟಾಕ್ ಶೋ ಒಂದರಲ್ಲಿ ಪಾಕಿಸ್ತಾನಿ ಗಾಯಕಿ ಶಾಜಿಯಾ ಮಂಜೂರ್ ಲೈವ್ ಕಾರ್ಯಕ್ರಮದಲ್ಲೇ ಸಹ ನಿರೂಪಕನಿಗೆ ಸರಿಯಾಗಿ ಬೈದು ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ‘ಹನಿಮೂನ್’ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಗಾಯಕಿ ಸಹ ನಿರೂಪಕ ವಿರುದ್ಧ ಕೋಪಗೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ವೈರಲ್ ವಿಡಿಯೋದಲ್ಲಿ ಹಾಸ್ಯನಟ ಹಾಗೂ ಸಹ-ನಿರೂಪಕ ಶೆರ್ರಿ ನನ್ಹಾ “ನಮ್ಮ ಮದುವೆಯ ನಂತರ ಹನಿಮೂನ್ಗಾಗಿ ನಾನು ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಕರೆದುಕೊಂಡು ಹೋಗುತ್ತೇನೆ” ಎಂದು ಗಾಯಕಿ ಶಾಜಿಯಾ ಅವರಿಗೆ ಹಾಸ್ಯಸ್ಪದವಾಗಿ ಹೇಳಿದ್ದಾನೆ.
Slap kalesh b/w Pakistani Singer Shazia Manjoor and Co-Host of show over making joke on ‘Honeymoon’ with a Woman
pic.twitter.com/6fehVrq7NS— Ghar Ke Kalesh (@gharkekalesh) February 27, 2024
ಇದನ್ನೂ ಓದಿ: ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭಕ್ಕೆ ತಯಾರಾಗುತ್ತಿದೆ 2500 ಬಗೆಯ ಖಾದ್ಯಗಳು
ಲೈವ್ ಕಾರ್ಯಕ್ರಮದಲ್ಲಿ ಹಾಸ್ಯನಟನ ಮಾತಿಗೆ ಗಾಯಕಿ ಕೋಪಗೊಂಡಿದ್ದಾಳೆ. “ಕಳೆದ ಬಾರಿಯೂ ನೀವು ಹೀಗೆಯೇ ವರ್ತಿಸಿದ್ದೀರೀ. ಪ್ರತೀ ಬಾರಿಯೂ ತಮಾಷೆಯಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯರೊಂದಿಗೆ ಈ ರೀತಿ ಅಸಭ್ಯವಾಗಿ ಮಾತನಾಡುವುದು ಎಷ್ಟು ಸರಿ?” ಎಂದು ಗಾಯಕಿ ವಾಗ್ವಾದಕ್ಕೀಳಿದ್ದಿದ್ದಾರೆ. ಇದಲ್ಲದೆ ಸಹ ನಿರೂಪಕನಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Wed, 28 February 24