Viral Video: ಚರಂಡಿಯಲ್ಲಿ ತೇಲಿಬಂತು ಕಂತೆ ಕಂತೆ ಹಣ, ಗಲೀಜು ಲೆಕ್ಕಿಸದೆ ಧುಮುಕಿದ ಜನ

ರಸ್ತೆಯಲ್ಲಿ ಹೋಗುವಾಗ 1 ರೂ ಬಿದ್ದಿದ್ದರೂ ತೆಗೆದುಕೊಳ್ಳುತ್ತೇವೆ ಹೀಗಿರುವಾಗ ಸಾರ್ವಜನಿಕವಾಗಿ ಕಂತೆ ಕಂತೆ ಹಣ ನೀರಿನಲ್ಲಿ ತೇಲಿಬರುತ್ತಿದ್ದರೆ ಜನರು ಬಿಡುತ್ತಾರೆಯೇ, ಚರಂಡಿ ನೀರು ಗಲೀಜು ಎಂಬುದನ್ನೂ ಲೆಕ್ಕಿಸದೆ ಜನರು ಚರಂಡಿಗೆ ದುಮುಕಿದ್ದಾರೆ.

Viral Video: ಚರಂಡಿಯಲ್ಲಿ ತೇಲಿಬಂತು ಕಂತೆ ಕಂತೆ ಹಣ, ಗಲೀಜು ಲೆಕ್ಕಿಸದೆ ಧುಮುಕಿದ ಜನ
ಚರಂಡಿಯಲ್ಲಿ ಹಣ
Image Credit source: India.com

Updated on: May 07, 2023 | 2:27 PM

ರಸ್ತೆಯಲ್ಲಿ ಹೋಗುವಾಗ 1 ರೂಪಾಯಿ ಬಿದ್ದಿದ್ದರೂ ತೆಗೆದುಕೊಳ್ಳುತ್ತೇವೆ ಹೀಗಿರುವಾಗ ಸಾರ್ವಜನಿಕವಾಗಿ ಕಂತೆ ಕಂತೆ ಹಣ ನೀರಿನಲ್ಲಿ ತೇಲಿಬರುತ್ತಿದ್ದರೆ ಜನರು ಬಿಡುತ್ತಾರೆಯೇ, ಚರಂಡಿ ನೀರು ಗಲೀಜು ಎಂಬುದನ್ನೂ ಲೆಕ್ಕಿಸದೆ ಜನರು ಚರಂಡಿಗೆ ದುಮುಕಿದ್ದಾರೆ. ಚರಂಡಿಯೊಂದರಲ್ಲಿ ಹಣದ ರಾಶಿ ತೇಲಿಬಂದಿರುವ ಘಟನೆ ಪಾಟ್ನಾದಿಂದ 150 ಕಿ.ಮೀ ದೂರದಲ್ಲಿರುವ ಸಸಾರಾಮ್ ಜಿಲ್ಲೆಯ ಮೊರಾದಾಬಾದ್ ಪ್ರದೇಶದಲ್ಲಿ ನಡೆದಿದೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬರು ಚರಂಡಿಯ ನೀರಿನಲ್ಲಿ ಹಣ ತೇಲಿ ಹೋಗುತ್ತಿರುವುದನ್ನು ಕಂಡಿದ್ದರು, ಅದರಲ್ಲಿ 100ರ ಕಂತೆ ಕಂತೆ ನೋಟುಗಳಿದ್ದವು. ಕೆಲವು ಸಮಯದ ಬಳಿಕ ಅಲ್ಲಿ ನೋಡಿದಾಗ ನೋಟು ಕಂಡಿಲ್ಲ.

ಮೊದಲು ಉಬ್ಬರು ಚರಂಡಿಗೆ ಇಳಿದು ನೋಟಿನ ಬಂಡಲ್ ತೆಗೆದಿದ್ದರು, ಈ ವಿಚಾರ ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ, ಇಡೀ ಗ್ರಾಮಕ್ಕೆ ವಿಷಯ ತಿಳಿದುಬಂದಿತ್ತು. ಗ್ರಾಮದ ಜನರೆಲ್ಲಾ ಗಲೀಜು ನೀಡಿಗೆ ದುಮುಕಿದ್ದರು. ನೋಟುಗಳ ಬಂಡಲ್ ಚರಂಡಿಯಿಂದ ಮೇಲಕ್ಕೆ ಬರುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತಷ್ಟು ಓದಿ: ಬುದ್ಧಂ ಶರಣಂ; ಗರ್ಲ್​ಫ್ರೆಂಡ್​ ಮತ್ತು ಹಣಕ್ಕಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ಚೀನೀಭೂಪ

ಕೆಲವು ನೋಟುಗಳು ನಕಲಿ ಎಂದು ಹೇಳಿದರೆ, ಕೆಲವರು ಅಸಲಿ ಎಂದಿದ್ದಾರೆ. ಮೊರಾದಾಬಾದ್ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಹಲವಾರು ಜನರು ಚರಂಡಿಗೆ ನುಗ್ಗಿ 2,000, 500, 100 ಮತ್ತು 10 ರೂ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಸಂಗ್ರಹಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:26 pm, Sun, 7 May 23