Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್​ ಕೂಡ ನಡೆಸುವ ಧ್ರುವಿ ಪಂಚಾಲ್​

|

Updated on: Sep 20, 2023 | 4:37 PM

Pasta Stall : ಹೊಟ್ಟೆಗೆ ನೆತ್ತಿಗೆ ಬಟ್ಟೆಗೆ ಒಂದು ಕೆಲಸವಾದರೆ ಆಯಿತೆ? ಮನಸಿಗೆ ಬೇಕಾದುದನ್ನು ಮಾಡಿದಾಗಲೇ ಮನುಷ್ಯನ ಮನಸ್ಸು ಅರಳುವುದು. ಇತ್ತೀಚಿನ ನಾಲ್ಕು ವರ್ಷಗಳಲ್ಲಿ ಯುವಕ ಯುವತಿಯರು ಓದುತ್ತ ಅಥವಾ ಕೆಲಸ ಮಾಡುತ್ತ ಬೀದಿಬದಿ ಫುಡ್​ಸ್ಟಾಲ್​ ಹಾಕುತ್ತಿರುವುದನ್ನು ನೋಡಿದ್ದೀರಿ. ಇದೀಗ ಅಹಮದಾಬಾದಿನ ಧ್ರುವಿ ಪಂಚಾಲ್ ಇವರ ಸಾಲಿಗೆ ಸೇರಿದ್ಧಾರೆ.

Viral Video: ಅಹಮದಾಬಾದ್; ಫಾರ್ಮಾ ಕೆಲಸದೊಂದಿಗೆ ಪಾಸ್ತಾ ಸ್ಟಾಲ್​ ಕೂಡ ನಡೆಸುವ ಧ್ರುವಿ ಪಂಚಾಲ್​
ಅಹಮದಾಬಾದಿನ ಬೀದಿಯಲ್ಲಿ ಪಾಸ್ತಾ ಸ್ಟಾಲ್ ನಡೆಸುತ್ತಿರುವ ಧೃತಿ ಪಂಚಾಲ್
Follow us on

Ahmedabad : ಹೆಲ್ತ್ ಕೇರ್​ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಧ್ರುವಿ ಪಂಚಾಲ್​ ಎಂಬ ಯುವತಿ ವಾರಾಂತ್ಯದಲ್ಲಿ ಸಂಜೆ 6.30ರಿಂದ ರಾತ್ರಿ 11ರವರೆಗೆ ಅಹಮದಾಬಾದಿನ ಬೀದಿಯಲ್ಲಿ ಪಾಸ್ತಾ ಸ್ಟಾಲ್​ (pasta Stall) ನಡೆಸುತ್ತಾಳೆ. ಈಕೆ ಪಾಸ್ತಾ ತಯಾರಿಸುವ ರೀತಿಯನ್ನು ಮತ್ತು ಸ್ಟಾಲ್​ ಅನ್ನು ನೆಟ್ಟಿಗರು ಕುತೂಹಲದಿಂದ ನೋಡುತ್ತಿದ್ದಾರೆ. ಅಡುಗೆಯಲ್ಲಿ ಅತೀವ ಆಸಕ್ತಿ ಇರುವ ಧ್ರುವಿಗೆ ಸ್ವಂತ ಸ್ಟಾಲ್​ ಇಡಬೇಕೆಂಬ ಕನಸಿತ್ತು. ಅದನ್ನೀಗ ನನಸಾಗಿಸಿಕೊಂಡಿದ್ದಾಳೆ. ಯೋಗೇಶ್ ಜೀವ್ರಾಣಿ ಎಂಬ ಫುಡ್​ ವ್ಲಾಗರ್​ (Food Vlogger) ಇನ್​ಸ್ಟಾಗ್ರಾಂನ ತಮ್ಮ ಪುಟದಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಒಂದು ಕಂಪೆನಿಯ ಉದ್ಯೋಗಿಯಾದ ಮೇಲೆಯೂ ಈಕೆ ತನ್ನ ಆಸಕ್ತಿಯನ್ನು ಹೀಗೆ ಪೋಷಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಮಾದರಿ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ : Viral Video: ಪಾದ ಮುಟ್ಟಿದರೆ ಎದ್ದುನಿಂತು ಆಶೀರ್ವದಿಸುತ್ತಾನೆ ಈ ಕೊಲ್ಕತ್ತೆಯ ಗಣಪ

ಧ್ರುವಿ ಪಂಚಾಲ್ ಬಿ.ಫಾರ್ಮಾ ಓದಿ ಝೈಡಸ್‌ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಶನಿವಾರ ಸಂಜೆ 6.30 ಕ್ಕೆ ಅಹಮದಾಬಾದ್‌ನ ಸೆಪ್ಟ್ ಖಾವು ಗಲ್ಲಿಯನ್ನು ತಲುಪಿ ತನ್ನ ಗ್ರಾಹಕರಿಗೆ ಪಾಸ್ತಾ ಮತ್ತು ಮ್ಯಾಕರೋನಿ ತಯಾರಿಸುತ್ತಾಳೆ. ರುಚಿಯಾದ ಖಾದ್ಯ ಸವಿದ ಗ್ರಾಹಕರ ಮುಖದ ಮೇಲಿನ ಸಂತೃಪ್ತಿ ಈಕೆಯಲ್ಲಿ ಉತ್ಸಾಹವನ್ನು ಹೊಮ್ಮಿಸುತ್ತದೆ.

ಧ್ರುವಿಯ ಪಾಸ್ತಾ ಅಂಗಡಿ


ಸೆ. 18 ರಂದು ಈ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಈತನಕ 5,000 ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ಧಾರೆ. ಈಕೆ ಪ್ರಾಮಾಣಿಕವಾಗಿ ಖಾದ್ಯವನ್ನು ತಯಾರಿಸುತ್ತಿದ್ದಾಳೆ , ನಾವೆಲ್ಲರೂ ಈಕೆಯ ಕೈರುಚಿಯನ್ನು ಸವಿದು ಪ್ರೋತ್ಸಾಹಿಸಬೇಕು ಎಂದಿದ್ದಾರೆ ಅನೇಕರು. ಹೊಟ್ಟೆಬಟ್ಟೆಗೆ ಒಂದು ಉದ್ಯೋಗ ಸರಿ. ಆದರೆ ಮನಸಿನ ಖುಷಿಗೆ ಹೀಗೊಂದು ಹವ್ಯಾಸದಲ್ಲಿ ಮನುಷ್ಯ ತೊಡಗಿಕೊಳ್ಳಬೇಕು, ನಿಮಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಇನ್ನೂ ಕೆಲವರು.

ಇದನ್ನೂ ಓದಿ : Viral Video: ಈ ಪಹಾಡೀ ಪತ್ರೊಡೆ ತಿನ್ನಲು ಹಿಮಾಚಲಕ್ಕೆ ಹೋಗೋಣ ಬನ್ನಿ!

ಹೆಣ್ಣುಮಕ್ಕಳು ಹೀಗೆ ತಮಗನ್ನಿಸಿದ ಕೆಲಸದಲ್ಲಿ ತೊಡಗಿಕೊಳ್ಳಲು ಮನೆಯವರ ಮತ್ತು ಸಮಾಜದ ಪ್ರೋತ್ಸಾಹ ಅಗತ್ಯ. ಬೀದಿಯಲ್ಲಿ ರಾತ್ರಿಗಳಲ್ಲಿ ಹೀಗೆ ಹೆಣ್ಣುಮಕ್ಕಳು ನಿಂತು ವ್ಯಾಪಾರ ಮಾಡುವುದು ಸುಲಭದ ಸಂಗತಿ ಏನಲ್ಲ. ನೀವು ಅನೇಕ ಹೆಣ್ಣುಮಕ್ಕಳಿಗೆ ಮಾದರಿ ಎಂದಿದ್ದಾರೆ ಸಾಕಷ್ಟು ನೆಟ್ಟಿಗರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 4:35 pm, Wed, 20 September 23