Viral Video: ಪ್ಲೀಸ್ ಮಮ್ಮಿ ನಮಗೆ ನಿಮ್ಮ ಒಂದು ಮಗುವನ್ನು ಕೊಡಿ ಎಂದು ಅಂಗಲಾಚಿದ ಪುಟ್ಟ ಬಾಲಕ

|

Updated on: Feb 27, 2023 | 6:21 PM

ಪುಟ್ಟ ಬಾಲಕ ನಾಯಿಯ ಬಳಿ ಮಾತನಾಡುತ್ತಾ ಪ್ಲೀಸ್ ಅಮ್ಮ ನನಗೆ ನಿಮ್ಮ ಒಂದು ಮಗುವನ್ನು ಕೊಡುವಿರಾ ಎಂದು ಕೇಳಿಕೊಳ್ಳುವ ಮುದ್ದಾದ ವಿಡಿಯೊವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದೆ. ಮಕ್ಕಳ ಮನಸ್ಸು ತುಂಬಾ ಪರಿಶುದ್ಧವಾದ್ದು. ಅವರು ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ.

Viral Video: ಪ್ಲೀಸ್ ಮಮ್ಮಿ ನಮಗೆ ನಿಮ್ಮ ಒಂದು ಮಗುವನ್ನು ಕೊಡಿ ಎಂದು ಅಂಗಲಾಚಿದ ಪುಟ್ಟ ಬಾಲಕ
ವೈರಲ್ ವಿಡಿಯೊ
Follow us on

ಪುಟ್ಟ ಬಾಲಕ ನಾಯಿಯ ಬಳಿ ಮಾತನಾಡುತ್ತಾ ಪ್ಲೀಸ್ ಅಮ್ಮ ನನಗೆ ನಿಮ್ಮ ಒಂದು ಮಗುವನ್ನು ಕೊಡುವಿರಾ ಎಂದು ಕೇಳಿಕೊಳ್ಳುವ ಮುದ್ದಾದ ವೀಡಿಯೋವೊಂದು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿದೆ. ಮಕ್ಕಳ ಮನಸ್ಸು ತುಂಬಾ ಪರಿಶುದ್ಧವಾದ್ದು. ಅವರು ಎಲ್ಲರನ್ನು ಸಮಾನವಾಗಿ ಕಾಣುತ್ತಾರೆ. ಅದು ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಗಳೇ ಆಗಿರಲಿ ಎಲ್ಲರಿಗೂ ನಿಷ್ಕಲ್ಮಶ ಪ್ರೀತಿಯನ್ನು ತೋರುತ್ತಾರೆ. ಜೊತೆಗೆ ಅವರ ಈ ಬಗೆಯ ಒಳ್ಳೆಯ ನಡವಳಿಕೆಯ ಹಿಂದೆ ತಂದೆ ತಾಯಿ ಕಲಿಸುವ ಸಂಸ್ಕಾರವು ಅಡಗಿರುತ್ತವೆ. ಅದೇ ರೀತಿ ಮಕ್ಕಳಿಗೆ ಪ್ರಾಣಿಗಳ ಬಗೆಗಿನ ಪ್ರೀತಿಯನ್ನು ಕಲಿಸುವುದು ತುಂಬಾ ಮುಖ್ಯವಾಗಿರುತ್ತದೆ. ಬೀದಿ ಬದಿಯಲ್ಲಿರುವ ನಾಯಿ, ಬೆಕ್ಕುಗಳಿಗೆ ತೊಂದರೆ ನೀಡದೆ. ಅವುಗಳ ಬಗ್ಗೆ ಕಾಳಜಿ ವಹಿಸಿ ಅವುಗಳಿಗೆ ಒಂದು ಹೊತ್ತಿನ ಊಟವನ್ನು ಹಾಕಿಸುವಂತಹ ಒಳ್ಳೆಯ ಗುಣವನ್ನು ಕಲಿಸಿಕೊಡಬೇಕು.

ಮಕ್ಕಳ ಮನಸ್ಸು ಎಷ್ಟು ಪರಿಶುದ್ಧ ಹಾಗೂ ಅವರಿಗೆ ಯಾವುದೇ ಬೇಧಭಾವವಿಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಾರೆ ಎಂಬುವುದನ್ನು ಬಿಂಬಿಸುವ ವಿಡಿಯೊವೊಂದು ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಜೊತೆಗೆ ಆ ಪುಟ್ಟ ಬಾಲಕನ ವರ್ತನೆಗೆ ನೆಟ್ಟಿಗರು ಬೇಷ್ ಎಂದಿದ್ದಾರೆ.

ವೈರಲ್ ಆಗಿರುವ ಈ ವೀಡಿಯೋದಲ್ಲಿ ಯಾವುದೋ ಒಂದು ರೋಡ್ ಸೈಡ್ ಪುಟ್ಟ ಟೆಂಟ್ ಒಂದರಲ್ಲಿ ನಾಯಿ ಮತ್ತು ಅದರ ಮರಿಗಳು ಮಲಗಿರುವುದನ್ನು ಗಮನಿಸಿದ ಪುಟ್ಟ ಬಾಲಕ, ತನ್ನ ಮುಗ್ಧ ಮನಸ್ಸಿನಿಂದ ಅಮ್ಮ ನಿಮ್ಮ ಒಂದು ಮಗುವನ್ನು ನನಗೆ ಕೊಡುವಿರಾ, ನಮಗೆ ಬೇಗ ಮನೆಗೆ ಹೋಗಬೇಕಿದೆ ಪ್ಲೀಸ್ ಮಮ್ಮಿ ನಿಮ್ಮ ಒಂದು ಮಗುವನ್ನು ನನಗೆ ಕೊಡಿ ಎಂದು ಬಹಳ ವಿನಮ್ರತೆಯಿಂದ ಕೇಳಿಕೊಳ್ಳುತ್ತಾನೆ. ಕೆಲವೇ ಸೆಕೆಂಡುಗಳ ವಿಡಿಯೋ ಇದಾದರೂ ಆ ಮಗುವಿನ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ. ಒಂದು ತಾಯಿಯಾಗಿರುವ ನಾಯಿಯನ್ನು ಅಮ್ಮ ಎಂದು ಕರೆಯುವ ಸನ್ನಿವೇಶ ನೆಟ್ಟಿಗರ ಮನಸ್ಸನ್ನು ಗೆದ್ದಿದೆ.

ಇದನ್ನೂ ಓದಿ: Viral Video: ಹುಂಜ ಹಿಡಿಯಲು ಹೋಗಿ ಚಿರತೆ ಬೋನಿಗೆ ಬಿದ್ದ ಭೂಪ, ಅಯ್ಯೋ ಕಾಪಾಡಿ ಸರ್

ಈ ವೀಡಿಯೋಗೆ ಹೆಚ್ಚಿನ ಜನರು ತಮ್ಮ ಮೆಚ್ಚುಗೆಯನ್ನು ಕಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ. ಒಬ್ಬ ಇನ್‌ಸ್ಟಾಗ್ರಾಮ್ ಬಳಕೆದಾದರು ಈ ಮಗುವಿನ ಪೋಷಕರ ಬಗ್ಗೆ ಹೆಮ್ಮೆಯಾಗುತ್ತೆ, ಅವರು ತಮ್ಮ ಮಗುವಿಗೆ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುವ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ವಿಡಿಯೊ ತುಂಬಾ ಮುದ್ದಾಗಿದೆ. ಮಗುವಿಗೆ ಪ್ರಾಣಿ ಪ್ರೀತಿಯನ್ನು ಕಲಿಸಿರುವ ಪೋಷಕರಿಗೆ ನನ್ನದೊಂದು ಧನ್ಯವಾದ ಎಂದು ಹೇಳಿದ್ದಾರೆ.

Published On - 6:21 pm, Mon, 27 February 23