ತಮ್ಮ ಜೀವವನ್ನು ಲೆಕ್ಕಿಸದೆ ರೈಲು ಹತ್ತಿದರೆ ಸಾಕು ಎಂಬ ಮನಸ್ಥಿತಿಯಿಂದ ಕೆಲವು ಪ್ರಯಾಣಿಕರು ರೈಲು ಚಲಿಸುತ್ತಿರುವಾಗಲೇ ಹತ್ತುತ್ತಾರೆ. ಇದರಿಂದ ಅಲ್ಲೊಂದು ಇಲ್ಲೊಂದು ಅವಗಢಗಳು ಸಂಬವಿಸುತ್ತಿರುತ್ತವೆ. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಚಲಿಸುತ್ತಿರುವ ರೈಲಿ ಹಿಂಬದಿ ಬೋಗಿ ಹತ್ತಲು ಮುಂದಾದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದಾಗ ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡುವುದನ್ನು ವೈರಲ್ ವಿಡಿಯೋ ತೋರಿಸುತ್ತದೆ.
ಪೂರ್ಣಗಿರಿ ಜನಶತಾಬ್ದಿ ರೈಲು ನಿಲ್ದಾಣದಿಂದ ಹೊರಟಿದೆ. ಈ ವೇಳೆ ರೈಲು ಹತ್ತಲು ವ್ಯಕ್ತಿಯೊಬ್ಬರು ಯತ್ನಿಸಿದ್ದಾರೆ. ಇನ್ನೇನು ಕೊನೆಯ ಬೋಗಿಯೂ ತಪ್ಪಿಬಿಡುತ್ತದೆ ಎಂದು ಅವಸರವಾಗಿ ಹತ್ತಿದ್ದಾರೆ. ಈ ವೇಳೆ ಕಾಲು ಜಾರಿ ಫ್ಲಾಟ್ಫಾರ್ಮ್ಗೆ ಬಿದಿದ್ದು, ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ನೋಡಿದ ಸಹಾಯಕ ಸಬ್ಇನ್ಸ್ಪೆಕ್ಟರ್, ಕೂಡಲೇ ಅವರನ್ನು ಎಳೆದು ರಕ್ಷಣೆ ಮಾಡಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಯ ಪಾಲಿಗೆ ಆಪದ್ಬಾಂಧವನಾಗಿ ಪೊಲೀಸ್ ಸಿಬ್ಬಂದಿ ರಾಜೇಂದ್ರ ಸಿಂಗ್ ಅವರು ಬಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಶ್ಲಾಘಿಸಿದ ಆರ್ಪಿಎಫ್, ಎಎಸ್ಐ ರಾಜೇಂದ್ರ ಸಿಂಗ್ ಅವರು ದುರಂತವೊಂದನ್ನು ತಪ್ಪಿಸಿದರು, ಗಾಜಿಯಾಬಾದ್ ರೈಲ್ವೇ ನಿಲ್ದಾಣದಲ್ಲಿ ಚಲಿಸುವ ರೈಲಿನೊಂದಿಗೆ ಹತ್ತುತ್ತಿರುವಾಗ ಜಾರಿಬಿದ್ದ ಪ್ರಯಾಣಿಕನಿಗೆ ಹೊಸ ಜೀವನ ನೀಡಿದರು ಎಂದು ಹೇಳಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ ನೋಡಿ:
#AngelInKhaki#RPF ASI Rajendra Singh averted a tragedy and gave a new lease of life to a passenger who slipped while boarding & was dragging along with the moving train at Ghaziabad Railway Station.#MissionJeewanRaksha#LifesavingAct@RailMinIndia @rpfnr_ pic.twitter.com/xcEw4jaazZ
— RPF INDIA (@RPF_INDIA) September 12, 2022
ಮತ್ತಷ್ಟು ವೈರಲ್ ವಿಡಿಯೋಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Mon, 12 September 22