Viral Video: ಚಿಕ್ಕ ಹುಡುಗಿಯನ್ನು ಯಾಮಾರಿಸಿ ಲಾಲಿಪಾಪ್ ಕಚ್ಚಿಕೊಂಡು ಓಡಿದ ನಾಯಿಮರಿ; ವಿಡಿಯೋ ವೈರಲ್

ನಾಯಿ ಮರಿ ತನ್ನ ಕೈಲಿದ್ದ ಕ್ಯಾಂಡಿ ಕಿತ್ತುಕೊಂಡು ಓಡಿಹೋಗಿದ್ದಕ್ಕೆ ಜೋರಾಗಿ ಅಳುತ್ತಿರುವ ಹುಡುಗಿಯನ್ನು ಆಕೆಯ ಅಮ್ಮ ಸಮಾಧಾನ ಮಾಡುವ ದೃಶ್ಯ ಈ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಇದುವರೆಗೆ 2 ಮಿಲಿಯನ್ ಜನ ವೀಕ್ಷಿಸಿದ್ದಾರೆ.

Viral Video: ಚಿಕ್ಕ ಹುಡುಗಿಯನ್ನು ಯಾಮಾರಿಸಿ ಲಾಲಿಪಾಪ್ ಕಚ್ಚಿಕೊಂಡು ಓಡಿದ ನಾಯಿಮರಿ; ವಿಡಿಯೋ ವೈರಲ್
ಬಾಲಕಿಯ ಕೈಲಿದ್ದ ಕ್ಯಾಂಡಿ ಕಚ್ಚಿಕೊಂಡು ಓಡಿದ ನಾಯಿ ಮರಿ
Image Credit source: Zee News
Updated By: ಸುಷ್ಮಾ ಚಕ್ರೆ

Updated on: May 28, 2022 | 3:48 PM

ಮಕ್ಕಳೆಂದರೆ ನಾಯಿ ಮರಿಗಳಿಗೂ ಬಹಳ ಇಷ್ಟ. ಮಕ್ಕಳಿಗೂ ನಾಯಿ, ಬೆಕ್ಕುಗಳೆಂದರೆ ಹೆಚ್ಚು ಇಷ್ಟ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಹುಡುಗಿಯೊಬ್ಬಳು ನಾಯಿಮರಿಯೊಂದಿಗೆ ವಾಕಿಂಗ್ ಮಾಡುವಾಗ ಆಕೆಯ ಗಮನವನ್ನು ಬೇರೆಡೆ ತಿರುಗಿಸಿದ ನಾಯಿ, ಆಕೆಯನ್ನು ಯಾಮಾರಿಸಿ, ಆಕೆಯ ಕೈಲಿದ್ದ ಲಾಲಿಪಾಪ್ ಕಚ್ಚಿಕೊಂಡು ಓಡಿಹೋಗಿದೆ. ತನ್ನ ಲಾಲಿಪಾಪ್ ನಾಯಿಮರಿಯ ಪಾಲಾಗಿದ್ದಕ್ಕೆ ಆ ಬಾಲಿ ಜೋರಾಗಿ ಅಳುತ್ತಿರುವ ವಿಡಿಯೋ ವೈರಲ್ (Video Viral) ಆಗಿದೆ.

ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರ ಹಿಂದೆ ವಿಶೇಷ ಕಾರಣವಿದೆ. ಈ ವಿಡಿಯೋದಲ್ಲಿ ಪುಟ್ಟ ಹುಡುಗಿ ತನ್ನ ಕೈಯಲ್ಲಿ ಲಾಲಿಪಾಪ್ ಹಿಡಿದು ನಡೆಯುವುದನ್ನು ಕಾಣಬಹುದು. ಆದರೆ ಪುಟ್ಟ ನಾಯಿ ಅವಳ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತದೆ. ಆ ಹುಡುಗಿಯ ಕಾಲಿನ ಕೆಳಗೆ ನುಸುಳುವ ನಾಯಿ ಮರಿ ಆಕೆಯ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತದೆ. ಆಗ ನಾಯಿಮರಿ ಆ ಬಾಲಕಿಯ ಕೈಯಿಂದ ಲಾಲಿಪಾಪ್ ಕಿತ್ತುಕೊಂಡು ಓಡಿಹೋಗುತ್ತದೆ.

ನಾಯಿ ಮರಿ ತನ್ನ ಕೈಲಿದ್ದ ಕ್ಯಾಂಡಿ ಕಿತ್ತುಕೊಂಡು ಓಡಿಹೋಗಿದ್ದಕ್ಕೆ ಜೋರಾಗಿ ಅಳುತ್ತಿರುವ ಹುಡುಗಿಯನ್ನು ಆಕೆಯ ಅಮ್ಮ ಸಮಾಧಾನ ಮಾಡುವ ದೃಶ್ಯ ಈ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಇದುವರೆಗೆ 2 ಮಿಲಿಯನ್ ಜನ ವೀಕ್ಷಿಸಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ