Viral Video: ರಿಪೋರ್ಟಿಂಗ್ ಮಾಡುತ್ತಿದ್ದ ಮಗನಿಗೆ ಕ್ಯಾಮೆರಾ ಎದುರೇ ಹಾಯ್ ಬೇಬಿ ಎಂದ ಅಮ್ಮ; ವಿಡಿಯೋ ವೈರಲ್

Trending Video: ಈ ವೈರಲ್ ವಿಡಿಯೋವನ್ನು ಎರಡು ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಇದುವರೆಗೆ 3.4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

Viral Video: ರಿಪೋರ್ಟಿಂಗ್ ಮಾಡುತ್ತಿದ್ದ ಮಗನಿಗೆ ಕ್ಯಾಮೆರಾ ಎದುರೇ ಹಾಯ್ ಬೇಬಿ ಎಂದ ಅಮ್ಮ; ವಿಡಿಯೋ ವೈರಲ್
ಅಮ್ಮ-ಮಗನ ವಿಡಿಯೋ ವೈರಲ್
Updated By: ಸುಷ್ಮಾ ಚಕ್ರೆ

Updated on: Feb 24, 2022 | 1:27 PM

ತಮ್ಮ ಮಕ್ಕಳು ಏನಾದರೂ ಸಾಧನೆ ಮಾಡಿದರೆ ಅವರ ಪೋಷಕರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ತಮ್ಮ ಗುರಿಗಳನ್ನು ಸಾಧಿಸುವುದನ್ನು ನೋಡುವುದಕ್ಕಿಂತಲೂ ಹೆಮ್ಮೆಯ ಕ್ಷಣ ಬೇರೊಂದಿಲ್ಲ. ಅದರಲ್ಲೂ ಅವರ ವೃತ್ತಿ ಜೀವನದಲ್ಲಿ ಅವರು ಮೇಲಕ್ಕೇರುವುದನ್ನು ನೋಡಿ ಪೋಷಕರು ಬಹಳ ಗರ್ವ ಪಡುತ್ತಾರೆ. ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ (Instagram) ವೈರಲ್ ಆಗಿರುವ ವಿಡಿಯೋವೊಂದರಲ್ಲಿ ತನ್ನ ಮಗ ಫೀಲ್ಡ್​​ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿರುವುದನ್ನು ಕಂಡು ಹೆಮ್ಮೆ ಪಟ್ಟ ತಾಯಿ ಆತ ಹೇಗೆ ಕೆಲಸ ಮಾಡುತ್ತಿದ್ದಾನೆಂದು ನೋಡಲು ಕ್ಯಾಮೆರಾದ ಎದುರು ಇಣುಕಿ ನೋಡಿದ್ದಾರೆ. ಕಾರಿನಲ್ಲಿ ಹೋಗುವಾಗ ಮಗ ರಿಪೋರ್ಟಿಂಗ್ ಮಾಡುತ್ತಿರುವುದನ್ನು ನೋಡಿ ಖುಷಿಯಿಂದ ಖುಷಿಯಿಂದ ಕಾರು ನಿಲ್ಲಿಸಿ ಮಾತನಾಡಿದ್ದಾರೆ. ಕ್ಯಾಮೆರಾ ಆನ್ ಆಗಿ, ಹೋಗಮ್ಮ ಎಂದು ಮಗ ಹೇಳಿದರೂ ಕೇಳದ ಆ ತಾಯಿ ಕ್ಯಾಮೆರಾಗೆ ಕೈ ಬೀಸಿ ಖುಷಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ನೋಡಿದರೆ ನಿಮ್ಮ ತುಟಿಯಂಚಿನಲ್ಲೂ ನಗು ಮೂಡುವುದು ಗ್ಯಾರಂಟಿ.

ಮೈಲ್ಸ್ ಹ್ಯಾರಿಸ್ ಎಂಬ ವ್ಯಕ್ತಿ ವರದಿಗಾರಿಕೆ ಮಾಡುತ್ತಿದ್ದಾಗ ಅದನ್ನು ಕ್ಯಾಮೆರಾದಲ್ಲಿ ರೆಕಾರ್ಡ್​ ಮಾಡಲಾಗಿರುತ್ತದೆ. ಅಷ್ಟರಲ್ಲಿ ಅಮ್ಮ ಕಾರಿನಲ್ಲಿ ಬಂದಿದ್ದನ್ನು ನೋಡಿದ ಆತ ನಗುವನ್ನು ಕಷ್ಟಪಟ್ಟು ಕಂಟ್ರೋಲ್ ಮಾಡಿಕೊಳ್ಳುತ್ತಾನೆ. ಆದರೆ, ಆಕೆ ಕಾರಿನ ಗ್ಲಾಸ್​ ಇಳಿಸಿ ಮತ್ತೆ ಕಾರು ತಿರುಗಿಸಿಕೊಂಡು ಬರುವ ಆಕೆ ಮಗನ ಹಿಂದೆ ಕಾರು ನಿಲ್ಲಿಸಿ, ಕ್ಯಾಮೆರಾದೆದುರಲ್ಲೇ ಮಗನಿಗೆ “ಹಾಯ್ ಬೇಬಿ!” ಎಂದು ಕೂಗುತ್ತಾಳೆ. ಇದರಿಂದ ಮುಜುಗರಗೊಂಡ ಆ ರಿಪೋರ್ಟರ್ ಜೋರಾಗಿ ನಗುತ್ತಲೇ ಅಮ್ಮನಿಗೆ ಅಲ್ಲಿಂದ ಹೋಗಲು ಹೇಳುತ್ತಾನೆ.

ಈ ವೈರಲ್ ವಿಡಿಯೋವನ್ನು ಎರಡು ದಿನಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ ಮತ್ತು ಇದುವರೆಗೆ 3.4 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದವರು ಅಮ್ಮ- ಮಗನ ಬಾಂಧವ್ಯ ಕಂಡು ಬಹಳ ಖುಷಿ ಪಟ್ಟಿದ್ದಾರೆ.

ನನ್ನ ತಾಯಿ ಕೂಡ ಇದೇ ರೀತಿ ನನ್ನ ಕೆಲಸದ ನಡುವೆ ತೊಂದರೆ ಕೊಡುತ್ತಿರುತ್ತಾರೆ. ಅದನ್ನು ಆಕೆ ಬಹಳ ಎಂಜಾಯ್ ಮಾಡುತ್ತಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಬಾತುಕೋಳಿಗಳ ಜೊತೆ ಹಸುಗಳ ಫೈಟಿಂಗ್; ವೈರಲ್ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

Viral Video: ರಸ್ತೆ ಬದಿ ನಿಂತಿದ್ದ ಬೀದಿ ನಾಯಿಗೆ ಒದೆಯಲು ಹೋದವನಿಗೆ ಏನಾಯ್ತು ಗೊತ್ತಾ?; ವಿಡಿಯೋ ವೈರಲ್