Viral Video: ಚಲಿಸುತ್ತಿದ್ದ ರೈಲು ಹತ್ತಲು ಮುಂದಾದ ಮಹಿಳೆ…ಆಮೇನಾಯ್ತು?

| Updated By: ಝಾಹಿರ್ ಯೂಸುಫ್

Updated on: Jul 31, 2021 | 8:09 PM

Trending Video: ಈ ವಿಡಿಯೋ ನೋಡಿದ ಬಳಿಕವಾದರೂ ಚಲಿಸುತ್ತಿರುವ ರೈಲು ಅಥವಾ ಬಸ್​ಗಳಲ್ಲಿ ಹತ್ತುವ ಪ್ರಯತ್ನ ಮಾಡದಿರಿ. ಬಸ್ ಅಥವಾ ರೈಲು ಹೋದರೆ ಪುನಃ ಬರಬಹುದು. ಆದರೆ ಜೀವ ಹೋದರೆ ಮರಳಿ ಬರಲ್ಲ ಎಂಬುದನ್ನು ಸದಾ ನೆನಪಿನ್ನಲ್ಲಿಡಿ.

Viral Video: ಚಲಿಸುತ್ತಿದ್ದ ರೈಲು ಹತ್ತಲು ಮುಂದಾದ ಮಹಿಳೆ...ಆಮೇನಾಯ್ತು?
viral video
Follow us on

ಅವಸರವೇ ಅಪಾಯಕ್ಕೆ ದಾರಿ ಎಂಬ ಮಾತಿದೆ, ಆದರೆ ಕೆಲವೊಂದು ಬಾರಿ ಅವಸರ ಮಾಡುವುದು ಕೂಡ ಅತ್ಯಗತ್ಯವಾಗಿರುತ್ತೆ. ಮುಖ್ಯವಾಗಿ ಬಸ್ ಅಥವಾ ಟ್ರೈನ್ ಮಿಸ್ ಆಗೋ ಟೈಮ್​ನಲ್ಲಿ ಎಷ್ಟು ಸಾಧ್ಯವೊ ಅಷ್ಟು ಅವಸರದಲ್ಲಿ ತಲುಪಬೇಕಾಗುತ್ತದೆ. ಆದರೆ ಈ ವೇಳೆ ಅಜಾಗರೂಕರಾದ್ರೆ ಅಪಾಯ ತಪ್ಪಿದಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಹೌದು, ಈ ಘಟನೆ ನಡೆದಿರುವುದು ತೆಲಂಗಾಣ ಸಿಕಂದಾಬಾದ್​ನ ರೈಲ್ವೆ ನಿಲ್ದಾಣದಲ್ಲಿ. ರೈಲಿನಲ್ಲಿ ಹೋಗಬೇಕಾದ ಮಹಿಳೆಗೆ ನಿಲ್ದಾಣಕ್ಕೆ ತಡವಾಗಿ ಬಂದಿದ್ದಾರೆ. ಪ್ಲಾಟ್​ಫಾರ್ಮ್​ಗೆ ತಲುಪುತ್ತಿದ್ದಂತೆ ರೈಲು ಕೂಡ ಹೊರಟಿದೆ. ಇನ್ನೇನು ಮಾಡೋದು ಎಂದು ಚಲಿಸುತ್ತಿದ್ದ ರೈಲಿಗೆ ಓಡಿ ಹೋಗಿ ಹತ್ತಲು ಪ್ರಯತ್ನಿಸಿದ್ದಾರೆ. ಸಮತೋಲನ ತಪ್ಪಿದ ಮಹಿಳೆಯು ಜಾರಿ ಬಿದ್ದಿದ್ದಾರೆ.

ಅತ್ತ ರೈಲು ಮುಂದಕ್ಕೆ ಚಲಿಸುತ್ತಿದ್ದಂತೆ ಜಾರಿ ಬಿದ್ದ ಮಹಿಳೆಯ ಕಾಲುಗಳು ಪ್ಲಾಟ್​ಫಾರ್ಮ್ ಹಾಗೂ ರೈಲುಗಳ ನಡುವೆ ಸಿಲುಕಿಕೊಂಡಿತು. ಇದೇ ವೇಳೆ ಅಲ್ಲಿದ್ದ ಆರ್‌ಪಿಎಫ್ ಕಾನ್‌ಸ್ಟೇಬಲ್ ತಕ್ಷಣ ಮಹಿಳೆಯನ್ನು ಪ್ಲಾಟ್‌ಫಾರ್ಮ್ ಮೇಲೆ ಎಳೆದು ಜೀವ ರಕ್ಷಿಸಿದರು. ಪೊಲೀಸ್ ಕಾನ್​​ಸ್ಟೇಬಲ್ ಅವರ ಸಮಯ ಪ್ರಜ್ಞೆಯಿಂದ ಮಹಿಳೆಯ ಜೀವ ಉಳಿಯಿತು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆರ್​ಪಿಎಫ್ ಪೊಲೀಸ್​ ಕಾನ್​ಸ್ಟೇಬಲ್​ನ ಸಮಯ ಪ್ರಜ್ಞೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಈ ವಿಡಿಯೋ ನೋಡಿದ ಬಳಿಕವಾದರೂ ಚಲಿಸುತ್ತಿರುವ ರೈಲು ಅಥವಾ ಬಸ್​ಗಳಲ್ಲಿ ಹತ್ತುವ ಪ್ರಯತ್ನ ಮಾಡದಿರಿ. ಬಸ್ ಅಥವಾ ರೈಲು ಹೋದರೆ ಪುನಃ ಬರಬಹುದು. ಆದರೆ ಜೀವ ಹೋದರೆ ಮರಳಿ ಬರಲ್ಲ. ಜಾಗರೂಕರಾಗಿರಿ.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

 

(Viral Video: RPF constable saves woman’s life at Secunderabad station)