Viral Video: ಜಪಾನ್‌ನಲ್ಲಿ ಸಕುರಾಜಿಮಾ ಜ್ವಾಲಮುಖಿ ಸ್ಫೋಟ; ಬೂದಿ, ಬಂಡೆಗಳನ್ನು ಉಗುಳುತ್ತಿರುವ ಜ್ವಾಲಾಮುಖಿ ವೈರಲ್ ವಿಡಿಯೋ ಇಲ್ಲಿದೆ

| Updated By: Rakesh Nayak Manchi

Updated on: Jul 25, 2022 | 9:41 AM

Sakurajima Volcano In Japan: ಜಪಾನ್‌ನ ಪ್ರಮುಖ ದಕ್ಷಿಣ ದ್ವೀಪವಾದ ಕ್ಯುಶುವಿನಲ್ಲಿ ಭಾನುವಾರ ರಾತ್ರಿ ಸಕುರಾಜಿಮಾ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಬೂದಿ ಮತ್ತು ಬಂಡೆಗಳನ್ನು ಉಗುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಜಪಾನ್‌ನಲ್ಲಿ ಸಕುರಾಜಿಮಾ ಜ್ವಾಲಮುಖಿ ಸ್ಫೋಟ; ಬೂದಿ, ಬಂಡೆಗಳನ್ನು ಉಗುಳುತ್ತಿರುವ ಜ್ವಾಲಾಮುಖಿ ವೈರಲ್ ವಿಡಿಯೋ ಇಲ್ಲಿದೆ
ಸಕುರಾಜಿಮಾ ಜ್ವಾಲಾಮುಖಿ ಸ್ಫೋಟ
Image Credit source: TWITTER/CIRCULOGLOBAL_I
Follow us on

ಜಪಾನ್‌ನ ಪ್ರಮುಖ ದಕ್ಷಿಣ ದ್ವೀಪವಾದ ಕ್ಯುಶುವಿನಲ್ಲಿ ಭಾನುವಾರ ರಾತ್ರಿ ಸಕುರಾಜಿಮಾ ಜ್ವಾಲಾಮುಖಿ (Sakurajima Volcano) ಸ್ಫೋಟಗೊಂಡಿದ್ದು, ಬೂದಿ ಮತ್ತು ಬಂಡೆಗಳನ್ನು ಉಗುಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗುತ್ತಿದೆ. ಸಕುರಾಜಿಮಾ ಜ್ವಾಲಾಮುಖಿ ಎಂದು ಕರೆಯಲಾಗುತ್ತಿರುವ ವಿಡಿಯೋಗಳು ದೂರದಲ್ಲಿ ಕಿತ್ತಳೆ ಜ್ವಾಲೆಗಳು ಮಿನುಗುತ್ತಿರುವುದನ್ನು ಮತ್ತು ಪರ್ವತದ ತುದಿಯಿಂದ ರಾತ್ರಿಯ ಆಕಾಶದಲ್ಲಿ ಬೂದಿಯ ಕಡು ಹೊಗೆಯನ್ನು ತೋರಿಸುತ್ತವೆ.

ಜಪಾನ್​ನಲ್ಲಿ ಅತ್ಯಂತ ಸಕ್ರಿಯವಾಗಿ ಸ್ಫೋಟಗೊಳ್ಳುವ ಜ್ವಾಲಮುಖಿಗಳಲ್ಲಿ ಒಂದಾಗಿರುವ ಸಕುರಾಜಿಮಾ ಜ್ವಾಲಾಮುಖಿ ರಾತ್ರಿ 8:05 ರ ಸುಮಾರಿಗೆ ಸ್ಫೋಟಗೊಂಡಿದ್ದು, ಕಾಗೋಶಿಮಾದ ದಕ್ಷಿಣ ಪ್ರಾಂತ್ಯದಲ್ಲಿ 2.5 ಕಿಮೀ (1.5 ಮೈಲುಗಳು) ದೂರದಲ್ಲಿ ದೊಡ್ಡ ಬಂಡೆಗಳನ್ನು ಸ್ಫೋಟಿಸಿದೆ ಎಂದು ಜಪಾನ್‌ನ ಹವಾಮಾನ ಸಂಸ್ಥೆ ಹೇಳಿದೆ. ಘಟನೆಯಿಂದ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ, ಅದಾಗ್ಯೂ ಆ ಪ್ರದೇಶದಿಂದ ಜನರನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಯೋಶಿಹಿಕೊ ಐಸೊಜಾಕಿ, “ನಾವು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿ ನಿರ್ವಹಿಸಲು ನಮ್ಮ ಕೈಲಾದಷ್ಟು ಕೆಲಸ ಕಾರ್ಯಗಳನ್ನು ಮಾಡಲು ಸಿದ್ಧ” ಎಂದು ಹೇಳಿದ್ದಾರೆ. ಅಲ್ಲದೆ, ಜ್ವಾಲಾಮುಖಿಯನ್ನು ಎದುರಿಸುತ್ತಿರುವ ಎರಡು ಪಟ್ಟಣಗಳಲ್ಲಿ ನೆಲೆಸಿರುವ ಸುಮಾರು 120 ನಿವಾಸಿಗಳು ತಮ್ಮ ಮನೆಗಳನ್ನು ತೊರೆಯುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಅದಾಗ್ಯೂ, ಮತ್ತೊಮ್ಮೆ ಜ್ವಾಲಾಮುಖಿಯ ಎಚ್ಚರಿಕೆಯನ್ನು ನೀಡಿದ ಹವಾಮಾನ ಸಂಸ್ಥೆ, ಕುಳಿಯಿಂದ 3 ಕಿಮೀ (1.8 ಮೈಲುಗಳು) ಪ್ರದೇಶದಲ್ಲಿ ಜ್ವಾಲಾಮುಖಿ ಬಂಡೆಗಳು ಬೀಳುವ ಮತ್ತು 2 ಕಿಮೀ (1.2 ಮೈಲಿಗಳು) ಒಳಗೆ ಲಾವಾ, ಬೂದಿ ಮತ್ತು ಸೀರಿಂಗ್ ಗ್ಯಾಸ್ ಹರಿಯುವ ಸಾಧ್ಯತೆಯ ಇದೆ ಎಂದು ಹೇಳಿದೆ.

ಸಕುರಾಜಿಮಾ ಜಪಾನ್‌ನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಮತ್ತು ಪದೇ ಪದೇ ಸ್ಫೋಟಗೊಂಡಿದೆ. ಇದು ಒಂದು ದ್ವೀಪವಾಗಿತ್ತು ಆದರೆ 1914 ರಲ್ಲಿ ಸ್ಫೋಟಗೊಂಡ ನಂತರ ಪರ್ಯಾಯ ದ್ವೀಪವಾಯಿತು.

Published On - 9:41 am, Mon, 25 July 22