Viral Video: ಅಪ್ಪನಿಗೆ ಅಮ್ಮ ಕೊಟ್ಟ ಭರ್ಜರಿ ಕೆಲಸಕ್ಕೆ ಮಗುವಿಂದೊಂದು ಅಳಿಲು ಸೇವೆ ಹೇಗಿದೆ ನೋಡಿ?

ತಂದೆ ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ಸುಳಿಯುತ್ತಿದ್ದರೆ, ಅಲ್ಲೇ ಕುಳಿತಿದ್ದ ಆತನ ಪುಟ್ಟ ಮಗು ಸಿಪ್ಪೆ ಸುಳಿದ ಆಲೂಗಡ್ಡೆಯನ್ನೆಲ್ಲಾ ಚೆನ್ನಾಗಿ ಮ್ಯಾಶ್ ಮಾಡಿ ಹಾಕುತ್ತಿತ್ತು. ಇದು ಮಾತ್ರವಲ್ಲದೆ ಮಗುವಿಗೆ ಬಾಣಸಿಗರು ಹಾಕುವಂತಹ ಬಟ್ಟೆ ಮತ್ತು ಟೋಪಿಯನ್ನು ಹಾಕಿಕೂರಿಸಿದ್ದರು.

Viral Video: ಅಪ್ಪನಿಗೆ ಅಮ್ಮ ಕೊಟ್ಟ ಭರ್ಜರಿ ಕೆಲಸಕ್ಕೆ ಮಗುವಿಂದೊಂದು ಅಳಿಲು ಸೇವೆ ಹೇಗಿದೆ ನೋಡಿ?
ವೈರಲ್ ವಿಡಿಯೊ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 23, 2023 | 3:23 PM

ಮಗುವನ್ನು ಅದರ ತಂದೆಯ ಜೊತೆ ಒಬ್ಬಂಟಿಯಾಗಿ ಬಿಟ್ಟರೆ ಏನೆಲ್ಲಾ ಕಿತಾಪತಿ ಆಗುತ್ತೆ ಎಂಬುದಕ್ಕೆ ಇದು ಉದಾಹರಣೆ, ಈ ತಮಾಷೆ ಹಾಗೂ ಕ್ಯೂಟ್ ಆಗಿರುವ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರ ಮನಸ್ಸನ್ನು ಗೆದ್ದ ಈ ಕ್ಯೂಟ್ ವಿಡಿಯೋ ಇಲ್ಲಿದೆ. ಪುಟ್ಟ ಮಕ್ಕಳು ಮನೆಯವರು ಏನು ಮಾಡುತ್ತಾರೆ, ಅದನ್ನೇ ಅನುಕರಿಸುತ್ತಾರೆ. ಮಕ್ಕಳನ್ನು ತಾಯಂದಿರು ಜೋಪಾನವಾಗಿ ನೋಡಿಕೊಳ್ಳುತ್ತಾರೆ. ಹಾಗೇ ಕೆಲ ತಂದೆಯಂದಿರು ಮಕ್ಕಳ ಜೊತೆ ತಮಾಷೆಗೆ ಏನೆನೋ ತರ್ಲೆಗಳನ್ನು ಮಾಡುತ್ತಾರೆ. ಇದು ಮನೆಯವರಿಗೆ ನಗು ತರಿಸುವುದಂತೂ ನಿಜ. ನಿಮ್ಮ ಮನೆಯಲ್ಲೂ ಪುಟ್ಟ ಮಕ್ಕಳಿದ್ದರೆ ಈ ರೀತಿಯ ತಮಾಷೆಯ ಘಟನೆಗಳು ನಡೆದೇ ಇರುತ್ತೆ ಅಲ್ವಾ. ಹಾಗೇನೇ ಇಲ್ಲೊಬ್ಬ ವ್ಯಕ್ತಿ ಹೆಂಡತಿ ತನಗೆ ನೀಡಿದ ಅಡುಗೆ ಕೆಲಸವನ್ನು ತನ್ನ ಪುಟ್ಟ ಮಗುವಿನ ಜೊತೆ ಹಂಚಿಕೊಂಡು ಮಾಡುತ್ತಿದ್ದಾನೆ. ಇನ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಆಗಿರುವ ಈ ವಿಡಿಯೋ ವೈರಲ್ ಆಗುವುದರ ಜೊತೆಗೆ ನೋಡುಗರ ಮುಖದಲ್ಲಿ ನಗುವನ್ನು ತರಿಸಿದೆ.

ಇದನ್ನೂ ಓದಿ: Viral Video : ಶಾಲಾಬಾಲಕಿಯ ಬ್ಯಾಗಿನೊಳಗೆ ಅಡಗಿ ತರಗತಿಗೆ ಹಾಜರಾಗಿದ್ದ ಈ ನಾಗರಾಜ

ವೈರಲ್ ಆಗಿರುವ ಈ ಕಾಮಿಡಿ ವಿಡಿಯೋದಲ್ಲಿ ತಂದೆ ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ಸುಳಿಯುತ್ತಿದ್ದರೆ, ಅಲ್ಲೇ ಕುಳಿತಿದ್ದ ಆತನ ಪುಟ್ಟ ಮಗು ಸಿಪ್ಪೆ ಸುಳಿದ ಆಲೂಗಡ್ಡೆಯನ್ನೆಲ್ಲಾ ಚೆನ್ನಾಗಿ ಮ್ಯಾಶ್ ಮಾಡಿ ಹಾಕುತ್ತಿತ್ತು. ಇದು ಮಾತ್ರವಲ್ಲದೆ ಮಗುವಿಗೆ ಬಾಣಸಿಗರು ಹಾಕುವಂತಹ ಬಟ್ಟೆ ಮತ್ತು ಟೋಪಿಯನ್ನು ಹಾಕಿಕೂರಿಸಿದ್ದರು. ಮುದ್ದು ಮುದ್ದಾಗಿರುವ ಆ ಪುಟ್ಟ ಮಗು ತಂದೆ ನೀಡಿದ ಕೆಲಸವನ್ನು ಅಷ್ಟೇ ಶ್ರದ್ಧೆಯಿಂದ ಮಾಡುತ್ತಿತ್ತು. ಇನ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋ ಎಷ್ಟು ಕ್ಯೂಟ್ ಆಗಿದೆಯೋ ಅಷ್ಟೇ ನಗುವನ್ನು ಕೂಡ ತರಿಸುತ್ತದೆ.

ವೈರಲ್ ಆಗಿರುವ ಈ ವಿಡಿಯೋವು 7 ಮಿಲಿಯನ್‌ಗಿಂತಲೂ ಅಧಿಕ ವೀಕ್ಷಣೆಯನ್ನು ಪಡೆದಿದೆ. ಹಾಗೂ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್‌ಗಳು ಹರಿದು ಬಂದಿವೆ. ಈ ವಿಡಿಯೋ ಕ್ಲಿಪ್‌ಗೆ ಮನಸೋತ ನೆಟ್ಟಿಗರು ತಮಾಷೆಯ ಕಮೆಂಟ್‌ಗಳನ್ನು ನೀಡಿದ್ದಾರೆ. ಒಬ್ಬ ಇನ್ಟಾಗ್ರಾಮ್ ಬಳಕೆದಾರರು ನನಗೆ ಈ ಕ್ಯೂಟ್ ಆಲೂಗಡ್ಡೆ ಸ್ಯಾಷರ್ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರು ಪುಟ್ಟ ಬಾಣಸಿಗ ಎಂದು ಹೇಳಿದರೆ, ಮತ್ತೊಬ್ಬರು ಸಂಪನ್ಮೂಲದ ಸರಿಯಾದ ಬಳಕೆ ಎಂದು ಕಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

Published On - 3:23 pm, Thu, 23 February 23