ದೇವಸ್ಥಾನದ ಘಂಟೆಯನ್ನು ಬಾರಿಸುತ್ತಿರುವ ನಾಯಿಯ ಈ ಜೋಷ್​ ನೋಡಿ

Dog Ringing a Temple Bell : ನಾಯಿ ಯಾವಾಗ ಬಾಲ ಅಲ್ಲಾಡಿಸುತ್ತದೆ? ಖುಷಿಯಾದಾಗ. ಅಂದರೆ ಈ ನಾಯಿಗೆ ಘಂಟೆ ಬಾರಿಸುವುದು ಖುಷಿಯ ವಿಷಯ. ವಾಹ್​! ಎಂದಿದ್ದಾರೆ ಈ ವಿಡಿಯೋ ನೋಡಿದ ನೆಟ್ಟಿಗರು.

ದೇವಸ್ಥಾನದ ಘಂಟೆಯನ್ನು ಬಾರಿಸುತ್ತಿರುವ ನಾಯಿಯ ಈ ಜೋಷ್​ ನೋಡಿ
Dog ringing a temple bell with utmost joy
Edited By:

Updated on: Nov 12, 2022 | 6:06 PM

Viral Video : ದೇವಸ್ಥಾನದ ಘಂಟೆಯನ್ನು ಈ ನಾಯಿ ಅದೆಷ್ಟು ಉತ್ಸಾಹದಿಂದ ಬಾರಿಸುತ್ತಿದೆ ನೋಡಿ. ನೆಟ್ಟಿಗರಂತೂ ಅವಾಕ್ಕಾಗಿ ಈ ವಿಡಿಯೋ ನೋಡುತ್ತಿದ್ದಾರೆ. ಘಂಟೆಯ ಗುಣಿಯ ತುದಿಗೆ ಕಟ್ಟಿರುವ ಹಗ್ಗವನ್ನು ಬಾಯಲ್ಲಿ ಹಿಡಿದುಕೊಂಡು ತನ್ನ ಜಗತ್ತಿನಲ್ಲಿ ಮುಳುಗಿದೆ. ಪ್ರಾಣಿಗಳಿಗೂ ಅವುಗಳದೇ ಆದ ಖುಷಿಯ ಸಂಗತಿಗಳು ಇರುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.

ಟ್ವಿಟರ್​ನಲ್ಲಿ ಹಂಚಿಕೊಂಡ ಈ ವಿಡಿಯೋ ಅನ್ನು ನೋಡಿದವರ ಸಂಖ್ಯೆ ಇನ್ನೇನು 8 ಲಕ್ಷ ತಲುಪುತ್ತದೆ. 4,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ರೀಟ್ವೀಟ್ ಮಾಡಿದ್ದಾರೆ. 34,000ಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.

ಎಂಥಾ ಬುದ್ಧಿವಂತನಿವ ಎಂದು ಹೇಳಿದ್ದಾರೆ ಹಲವಾರು ಜನರು. ನಾಯಿ ಯಾವಾಗಲೂ ತಾನು ಖುಷಿಯಾಗಿದ್ದೇನೆ ಎಂದು ವ್ಯಕ್ತಪಡಿಸುವುದು ಬಾಲವನ್ನು ಅಲ್ಲಾಡಿಸುವ ಮೂಲಕ, ಅಂದರೆ ಈ ಘಂಟೆಯನ್ನು ಬಾರಿಸುವುದು ನಾಯಿಗೆ ಖುಷಿಯ ಸಂಗತಿ ಎಂದು ಮತ್ತೊಬ್ಬರು ಹೇಳಿದ್ದಾರೆ. ಅಯ್ಯೋ ಎಂಥ ಚೆಂದ ಇದು ನಾನಿದನ್ನು ಬಹಳ ಪ್ರೀತಿಸುತ್ತೇನೆ ಎಂದಿದ್ದಾರೆ ಮಗದೊಬ್ಬರು.

ಅಂತೂ ಸಾಕುಪ್ರಾಣಿಗಳು ಹೆಚ್ಚು ಹೆಚ್ಚು ಮನುಷ್ಯನನ್ನು ಅನುಕರಿಸಲು ಆರಂಭಿಸಿದ್ದಾವೆ. ದಿನವೂ ಒಂದಾದರೂ ಇಂಥ ವಿಡಿಯೋ ನೋಡುತ್ತಲೇ ಇರುತ್ತೀರಿ. ಅಲ್ಲವೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ