Viral Video: ಅಕ್ಕನ ಮದುವೆ ಮನೆಯಲ್ಲೇ ಭಾವನ ಜೊತೆ ನಾದಿನಿ ಆಡಿದಳು ಆಟ! ನಾಚಿಕೆಯಿಂದ ವರ ಸುಸ್ತೋ ಸುಸ್ತೋ!

| Updated By: ಸಾಧು ಶ್ರೀನಾಥ್​

Updated on: Aug 23, 2022 | 5:28 PM

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ವಧು ಮದುವೆ ಮಂಟಪಕ್ಕೆ ಬಂದ ಕೂಡಲೇ ವರನು ವಧುವಿನ ಕೈ ಹಿಡಿದು ಆಹ್ವಾನಿಸಲು ಮುಂದಾಗುತ್ತಾನೆ. ಸರಿಯಾಗಿ ಅದೇ ವೇಳೆ ಅಕ್ಕನ ಪಕ್ಕದಲ್ಲೇ ನಿಂತಿದ್ದ ತಂಗಿ (ನಾದಿನಿ) ತನ್ನ ವರಸೆ ತೋರಿದಳು. ಭಾವನ ಜೊತೆ ಒಂದು ಆಟ ಆಡಿದಳು ನಾದಿನಿ! ನಾಚಿಕೆಯಿಂದ ವರ ಸುಸ್ತೋ ಸುಸ್ತೋ!

Viral Video: ಅಕ್ಕನ ಮದುವೆ ಮನೆಯಲ್ಲೇ ಭಾವನ ಜೊತೆ ನಾದಿನಿ ಆಡಿದಳು ಆಟ! ನಾಚಿಕೆಯಿಂದ ವರ ಸುಸ್ತೋ ಸುಸ್ತೋ!
ವೈರಲ್ ವಿಡಿಯೋ: ಅಕ್ಕನ ಮದುವೆ ಮನೆಯಲ್ಲೇ ಭಾವನಿಗೆ ತನ್ನ ವರಸೆ ತೋರಿಸಿದ ನಾದಿನಿ! ನಾಚಿಕೆಯಿಂದ ವರ ಸುಸ್ತೋ ಸುಸ್ತೋ!
Follow us on

ಭಾವ- ನಾದಿನಿ ಆಟದ ವಿಡಿಯೋ ಫುಲ್ ವೈರಲ್: ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.. ವಧು-ವರರ ಹೊರತಾಗಿ ಮದುವೆ ಮನೆಗಳಲ್ಲಿ ನಾನಾ ರೀತಿಯ ಮದುವೆಯಾಟಗಳೂ ಕಾಣಸಿಗುತ್ತಿವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತದೇ ಮದುವೆಯ ವಿಡಿಯೋವೊಂದು ಹರಿದಾಡುತ್ತಿದೆ. ಇದು ವೈರಲ್ ಕೂಡ ಆಗುತ್ತಿದೆ. ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ… ಮಾಲೆ ಧರಿಸಿ, ವರ ಮಹಾಶಯ ಅದಾಗಲೇ ಮದುವೆ ವೇದಿಕೆಯ ಮೇಲೆ ವಿರಾಜಮಾನವಾಗಿರುತ್ತಾನೆ. ಸ್ವಲ್ಪ ಸಮಯದ ನಂತರ ಮದುವೆ ಮನೆಗೆ ವಧು ಪ್ರವೇಶ ಮಾಡುತ್ತಾಳೆ. ಆದರೆ ಅವಳ ಜೊತೆಗೆ ತಂಗಿಯೂ ಇರುತ್ತಾಳೆ. ಅವರನ್ನು ಕಂಡ ವರ ಮೊದಲಿಗೆ ತನ್ನ ಭಾವೀ ಪತ್ನಿಯನ್ನು ಸ್ವಾಗತಿಸಿ, ವೇದಿಕೆಗೆ ಕರೆದುಕೊಂಡು ಹೋಗಲು ವೇದಿಕೆಯಿಂದ ಕೆಳಗೆ ಬರುತ್ತಾನೆ. ಆದರೆ ವಧುವಿನ ತಂಗಿ ವರನನ್ನು ಚುಡಾಯಿಸಲು ಯತ್ನಿಸಿದ್ದಾಳೆ. ತನ್ನ ವರಸೆ ತೋರಿಸಿ ನಾದಿನಿ ಅಂದ್ರೆ ಸುಮ್ಕೇನಾ ಎಂದು ಛೇಡಿಸುತ್ತಾಳೆ. ಹಾಗಾದರೆ ಅಲ್ಲೇನಾಯಿತು?

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು ಮದುವೆ ಮಂಟಪಕ್ಕೆ ಬಂದ ಕೂಡಲೇ ವರನು ಆಕೆಯನ್ನು ಆಹ್ವಾನಿಸುತ್ತಾ ಕೆಳಗಿಳಿದು ಬರುತ್ತಾನೆ.. ವಧುವಿನ ಕೈ ಹಿಡಿದು ವೇದಿಕೆಗೆ ಕರೆದೊಯ್ಯಲು ಬಯಸುತ್ತಾನೆ. ಆದ್ರೆ ಮದುಮಗಳ ತಂಗಿ, ಯಾನಿ ನಾದಿನಿ ಮದುಮಗನಿಗೆ ಶಾಕ್ ಕೊಟ್ಟಿದ್ದಾಳೆ. ವೀಡಿಯೊದಲ್ಲಿ, ವರನು ವಧುವಿನ ಕೈಯನ್ನು ಹಿಡಿದಿಡಲು ಪದೇ ಪದೇ ಪ್ರಯತ್ನಿಸುವುದನ್ನು ಕಾಣಬಹುದು. ಆದರೆ ನಾದಿನಿ ಅದಕ್ಕೆ ಆಸ್ಪದ ಕೊಡದೆ, ಛೇಡಿಸುತ್ತಾ ವರ ಮಹಾಶಯನ ಪ್ರಯತ್ನಕ್ಕೆ ತಣ್ಣೀರು ಎರಚುತ್ತಾಳೆ. ವಧುವಿನ ಕೈಕುಲುಕಲು ವರ ಎಷ್ಟೇ ಪ್ರಯತ್ನಿಸಿದರೂ ಆತನಿಗೆ ಜಯ ದಕ್ಕುವುದಿಲ್ಲ.

ವೀಡಿಯೊದ ಕೊನೆಯಲ್ಲಿ, ವರನು ಈ ಪುನರಾವರ್ತಿತ ಕೃತ್ಯದಿಂದ ಮುಜುಗರಕ್ಕೊಳಗಾಗಿರುವುದನ್ನು ನೀವು ನೋಡುತ್ತೀರಿ. ಸ್ವಲ್ಪ ಮೋಜು-ಮಸ್ತಿ ಪ್ರದರ್ಶಿಸಿದ ಬಳಿಕ ವಧುವಿನ ತಂಗಚ್ಚಿ ಭಾವನಿಗಿನ್ನು ಆಟವಾಡಿಸಿದ್ದು ಸಾಕು ಎಂದು ದೊಡ್ಡ ಮನಸು ತೋರಿ, ಅಕ್ಕನ ಕೈಕುಲುಕುವುದಕ್ಕೆ ಕೊನೆಗೂ ನಾದಿನಿ ಆಸ್ಪದ ಕೊಡುತ್ತಾಳೆ. ಈ ಮದುವೆಯ ಈ ವೀಡಿಯೋವನ್ನು royal_kathiyawadi_couple ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋ ಲಕ್ಷಗಟ್ಟಲೆ ವೀಕ್ಷಣೆ ಪಡೆದಿದೆ.