ನವದೆಹಲಿ: ದೆಹಲಿಯ ಅರ್ಜನ್‌ಗಢ್ ಮೆಟ್ರೋ ನಿಲ್ದಾಣದ ಬಳಿ ಬೈಕ್ ಸವಾರರ ಗುಂಪಿನೊಂದಿಗೆ ತೀವ್ರ ಮಾತಿನ ಚಕಮಕಿಯ ನಂತರ ವ್ಯಕ್ತಿಯೊಬ್ಬ ತನ್ನ ಸ್ಕಾರ್ಪಿಯೋ ವಾಹನದಿಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯನ್ನು ಹಿಂಬದಿಯಲ್ಲಿ ಬರುತ್ತಿದ್ದ ಬೈಕ್ ಸವಾರರು ವಿಡಿಯೋ (Video Viral) ಮಾಡಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ. ಪೊಲೀಸರು ಈ ವಿಷಯ ತಿಳಿದು ತನಿಖೆ ನಡೆಸುತ್ತಿದ್ದಾರೆ.
ದೆಹಲಿಯಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದ ಆಘಾತಕಾರಿ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೆಹಲಿ ರಸ್ತೆಯಲ್ಲಿ ಸ್ಕಾರ್ಪಿಯೋ ಕಾರನ್ನು ಓಡಿಸುವ ವ್ಯಕ್ತಿಯೊಂದಿಗೆ ಬೈಕ್ ಸವಾರರು ವಾಗ್ವಾದಕ್ಕಿಳಿದಾಗ ಸ್ಕಾರ್ಪಿಯೋ ಮತ್ತು ಬೈಕ್ನ ಮಧ್ಯೆ ರೇಸಿಂಗ್ ಶುರುವಾಗುತ್ತದೆ. ಆಗ ಸ್ಕಾರ್ಪಿಯೋವನ್ನು ಹಿಂದಿಕ್ಕಿ ಮುಂದೆ ಹೋದ ಬೈಕ್ ಅನ್ನು ಓವರ್ ಟೇಕ್ ಮಾಡುವ ಸ್ಕಾರ್ಪಿಯೋ ಸವಾರ ತನ್ನೊಂದಿಗೆ ಜಗಳವಾಡಿದ ಆ ಬೈಕ್ ಸವಾರನ ಬೈಕ್ಗೆ ಸ್ಕಾರ್ಪಿಯೋದಿಂದ ಗುದ್ದಿ ಮುಂದೆ ಹೋಗುತ್ತಾನೆ.
ಇದನ್ನೂ ಓದಿ: Viral Video: ಅಬ್ಬಬ್ಬಾ ಎಂಥಾ ಬಿಸಿಲು!; ಸ್ಕೂಟಿ ಸೀಟ್ ಮೇಲೆ ಬಿಸಿ ಬಿಸಿ ದೋಸೆ ಬೇಯಿಸಿದ ಯುವಕ
ಇದರಿಂದ ಕೆಳಗೆ ಬಿದ್ದ ಬೈಕ್ ಸವಾರ ಒಂದು ಕಡೆ ಬಿದ್ದರೆ ಆತನ ಬೈಕ್ ಇನ್ನೊಂದು ಕಡೆ ಬೀಳುತ್ತದೆ. ಅದೃಷ್ಟವಶಾತ್ ಆ ಚಾಲಕನಿಗೆ ಪ್ರಾಣಾಪಾಯವಾಗಿಲ್ಲ. ವೇಗವಾಗಿ ಬರುತ್ತಿದ್ದ ವಾಹನಗಳ ಮಧ್ಯೆ ಆ ಬೈಕ್ ಬಿದ್ದಿದ್ದರೆ ಆ ಚಾಲಕ ಉಳಿಯುವ ಚಾನ್ಸೇ ಇರಲಿಲ್ಲ. ಆದರೆ, ರಸ್ತೆಯ ಅಂಚಿನಲ್ಲಿ ಬಿದ್ದಿದ್ದರಿಂದ ತರಚಿದ ಗಾಯಗಳು ಬಿಟ್ಟರೆ ಹೆಚ್ಚೇನೂ ಗಾಯಗಳಾಗಿಲ್ಲ.
@PMOIndia @ArvindKejriwal @DCPNewDelhi
Please help us , the Scorpio Car driver almost killed a few of our riders and threatened to kill us by crushing us under the car.
This is not what we vote for or pay taxes for
no one was severely injured
Gears respect riders pic.twitter.com/rcZIZvP7q4— ANURAG R IYER (@anuragiyer) June 5, 2022
ಸ್ಕಾರ್ಪಿಯೋ ಚಾಲಕ ತನ್ನ ವಾಹನವನ್ನು ಉದ್ದೇಶಪೂರ್ವಕವಾಗಿ ತಿರುಗಿಸುವುದು ಮತ್ತು ಬದಿಯಿಂದ ಬೈಕ್ ಸವಾರರಲ್ಲಿ ಒಬ್ಬನಿಗೆ ಡಿಕ್ಕಿ ಹೊಡೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಡಿಕ್ಕಿ ಹೊಡೆದ ಕಾರು ವೇಗವಾಗಿ ಹೋಗುವಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ರಾಷ್ಟ್ರ ರಾಜಧಾನಿಯ ಅರ್ಜನ್‌ಗಢ್ ಮೆಟ್ರೋ ನಿಲ್ದಾಣದ ಕೆಳಗೆ ಭಾನುವಾರ ಬೆಳಗ್ಗೆಯಿಂದ ಈ ಘಟನೆ ನಡೆದಿದೆ. ಢಿಕ್ಕಿ ಹೊಡೆದು ಬಿದ್ದ ಬೈಕ್ ಸವಾರನನ್ನು ಸುಮಾರು 20 ವರ್ಷದ ಶ್ರೇಯಾಂಶ್ ಎಂದು ಗುರುತಿಸಲಾಗಿದೆ. ತನ್ನ ಸ್ನೇಹಿತರೊಂದಿಗೆ ಬೈಕಿಂಗ್ ಮುಗಿಸಿ ದೆಹಲಿಗೆ ಹಿಂತಿರುಗುತ್ತಿದ್ದ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ