ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್

Tiger : ನಾಡಿಗೆ ಹುಲಿ ಬಂದಿತು ಎಂದು ಹೇಳುವುದು ಎಷ್ಟು ಸರಿ? ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡಿದ್ದೇವೆ ಎಂದು ನೆಟ್ಟಿಗರು ಆತಂಕಿತರಾಗುತ್ತಿದ್ದಾರೆ.

ಹಾಡಹಗಲೇ ಹುಲಿಯೊಂದು ರಸ್ತೆ ದಾಟುತ್ತಿರುವ ವಿಡಿಯೋ ವೈರಲ್
ರಸ್ತೆ ದಾಟುತ್ತಿರುವ ಹುಲಿ
Updated By: ಶ್ರೀದೇವಿ ಕಳಸದ

Updated on: Feb 08, 2023 | 4:09 PM

Viral Video : ಕಾಡನ್ನು ನಾಡನ್ನಾಗಿ ಪರಿವರ್ತಿಸುರ್ತಿಸುತ್ತ ಹೊರಟಿರುವ ನಾವು, ಯಾವುದಾದರೂ ಕಾಡುಪ್ರಾಣಿ ನಾಡಿಗೆ ಬಂದಾಗ ಅವುಗಳದ್ದೇ ತಪ್ಪೇನೋ ಎನ್ನುವಂತೆ ವರ್ತಿಸುತ್ತೇವೆ. ರಣರಂಪ ಮಾಡಿ ಅವುಗಳಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ಬಂಧಿಸಿ ಮರಳಿ ಕಾಡಿಗೆ ಬಂದಿತ್ತು ಎನ್ನುತ್ತೇವೆ. ವಾಸ್ತವದಲ್ಲಿ ಅವುಗಳ ಜಾಗವನ್ನು ನಾವು ಆಕ್ರಮಿಸಿಕೊಂಡಿರುವುದು ತಾನೆ? ಇದೀಗ ಐಎಫ್‌ಎಸ್ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿರುವ ಈ ವಿಡಿಯೋ ನೋಡಿ. ರಸ್ತೆಯಲ್ಲಿ ಗಾಡಿಗಳು ಓಡಾಡುತ್ತಿವೆ. ಈ ಹುಲಿ ಮಾತ್ರ ತನ್ನ ಪಾಡಿಗೆ ರಸ್ತೆ ದಾಟುತ್ತಿದೆ.

ನೆಟ್ಟಿಗರು ಈ ದೃಶ್ಯವನ್ನು ನೋಡಿ ಆತಂಕಗೊಂಡಿದ್ದಾರೆ. ಹೀಗೆ ಪ್ರಾಣಿಗಳು ರಸ್ತೆಗೆ ಬಂದರೆ ಅವುಗಳ ಜೀವಕ್ಕೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಿದ್ದಾರೆ. 1 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಸುಮಾರು 10,500ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ನೂರಾರು ಜನ ರೀಟ್ವೀಟ್ ಮಾಡಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ‘ವಿಮಾನದಲ್ಲಿ ಕಿಟಕಿ ಪಕ್ಕ ಆಸನ ಬೇಕೆಂದು ಹೆಚ್ಚುವರಿ ಹಣ ಪಾವತಿಸಿದೆ, ಆದರೆ…’

ಕಾಡುಪ್ರಾಣಿಗಳ ಜಾಗವನ್ನು ನಾವು ವಶಪಡಿಸಿಕೊಂಡಿದ್ದೇವೆ. ಅವುಗಳಿಗೆ ವಾಸಿಸಲು ಕಾಡಿನಲ್ಲಿ ಸೂಕ್ತವಾದ ಜಾಗವಿಲ್ಲ ಅದಕ್ಕಾಗಿ ಅವು ಹೀಗೆ ನಾಡಿಗೆ ಬರುತ್ತವೆ ಎಂದಿದ್ದಾರೆ ಒಬ್ಬರು. ಹುಲಿ ಇಲ್ಲಿ ರಸ್ತೆ ದಾಟುತ್ತಿಲ್ಲ. ನಾವು ಅವುಗಳ ಜಾಗವನ್ನು ಆಕ್ರಮಿಸಿಕೊಂಡಿದ್ದೇವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಈಗಿನಿಂದಲೇ ಇಂಥದನ್ನೆಲ್ಲ ನಿಭಾಯಿಸಬೇಕು. ಇಲ್ಲವಾದಲ್ಲಿ ಗಂಭೀರವಾದ ಸಮಸ್ಯೆಗೆ ಪರಸ್ಪರ ಒಳಗಾಗಬೇಕಾಗುತ್ತದೆ ಎಂದು ಮಗದೊಬ್ಬರು ಹೇಳಿದ್ದಾರೆ.

ಈ ವಿಡಿಯ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ