AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ವಿಮಾನದಲ್ಲಿ ಕಿಟಕಿ ಪಕ್ಕ ಆಸನ ಬೇಕೆಂದು ಹೆಚ್ಚುವರಿ ಹಣ ಪಾವತಿಸಿದೆ, ಆದರೆ…’

Window Seat : ಬ್ರಿಟಿಷ್ ಏರ್​ವೇಸ್​ ಮೂಲಕ ಲಂಡನ್​ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸುಂದರವಾದ ಭೂದೃಶ್ಯವನ್ನು ನೋಡಬೇಕು ಎಂಬ ಆಸೆ ಅನಿರುದ್ಧ ಮಿತ್ತಲ್​ ಅವರದಾಗಿತ್ತು. ಆದರೆ...

‘ವಿಮಾನದಲ್ಲಿ ಕಿಟಕಿ ಪಕ್ಕ ಆಸನ ಬೇಕೆಂದು ಹೆಚ್ಚುವರಿ ಹಣ ಪಾವತಿಸಿದೆ, ಆದರೆ...’
ಎಲ್ಲಿದೆ ಆಸನದ ಪಕ್ಕದ ಕಿಟಕಿ?
ಶ್ರೀದೇವಿ ಕಳಸದ
|

Updated on:Feb 08, 2023 | 1:21 PM

Share

Viral News : ಬಸ್ಸು, ಕಾರಿನಲ್ಲಿ ಪ್ರಯಾಣಿಸುವಾಗ ಕಿಟಿಕಿಯ ಬದಿಯ ಆಸನವೇ ಬೇಕು ಎಂದು ಮನಸು ಬಯಸುತ್ತದೆ. ಇನ್ನು ವಿಮಾನದಲ್ಲಿ ಪ್ರಯಾಣಿಸುವಾಗ ಕೇಳಬೇಕೆ? ಅಷ್ಟು ಎತ್ತರದಿಂದ ಹಾರುತ್ತಿರುವಾಗ ಪ್ರಕೃತಿಯನ್ನು ಆಸ್ವಾದಿಸಲು ಕಿಟಿಕಿ ಬೇಕೇಬೇಕು ಎನ್ನಿಸುವುದು ಸಹಜ. ಆದರೆ ವಿಮಾನದಲ್ಲಿ ಕೆಲವೊಮ್ಮೆ ಬಯಸಿದಂಥ ಕಿಟಕಿ ಬಳಿಯ ಆಸನ ಪಡೆಯಲು ಹೆಚ್ಚುವರಿ ಹಣವನ್ನು ನೀಡಬೇಕಾಗುತ್ತದೆ. ಇದೀಗ ವೈರಲ್ ಆಗಿರುವ ಈ ಟ್ವೀಟ್ ಗಮನಿಸಿ. ಈ ಪ್ರಯಾಣಿಕರು ಹೆಚ್ಚುವರಿ ಹಣ ನೀಡಿದಮೇಲೆಯೂ ಅವರು ನಿರಾಸೆಯನ್ನು ಅನುಭವಿಸಿದ್ದಾರೆ.

I paid extra for a right side window seat because it’s supposed to be beautiful when you land into Heathrow.@British_Airways where’s my window yo? pic.twitter.com/2EBYlweAfW

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಬ್ರಿಟಿಷ್ ಏರ್​ವೇಸ್​ ಮೂಲಕ ಲಂಡನ್​ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಸುಂದರವಾದ ಭೂದೃಶ್ಯವನ್ನು ನೋಡಬೇಕು ಎಂಬ ಆಸೆ ಅನಿರುದ್ಧ ಮಿತ್ತಲ್​ ಅವರದಾಗಿತ್ತು. ಆ ಪ್ರಕಾರ ಬಲಭಾಗದ ಕಿಟಿಕಿಗಾಗಿ ಹೆಚ್ಚುವರಿ ಹಣವನ್ನು ಇವರು ಪಾವತಿಸಿದರು. ಆದರೆ ವಿಮಾನವೇರಿ ಆಸನದ ಬಳಿ ಬಂದಾಗ ಪಕ್ಕದಲ್ಲಿ ಕಿಟಕಿಯೇ ಇರಲಿಲ್ಲ! ಆಗ ಅನಿರುದ್ಧ ಅವರಿಗೆ ಭಯಂಕರ ನಿರಾಶೆ ಆವರಿಸಿದೆ. ಆಗ ಈ ಫೋಟೋ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಏರ್ ಇಂಡಿಯಾ ವಿಮಾನದಲ್ಲಿ ಮದುವೆ ನಿವೇದನೆ ಮಾಡಿಕೊಂಡ ವ್ಯಕ್ತಿಯ ವಿಡಿಯೋ ವೈರಲ್

ಈ ಪೋಸ್ಟ್​ ನೋಡಿದ ಅನೇಕರು ತಮ್ಮ ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ನಾನೂ ಕೂಡ ಇಂಥದೇ ಸನ್ನಿವೇಶವನ್ನು ಎದುರಿಸಿದ್ದೇನೆ ಎಂದು ಕಿಟಕಿರಹಿತ ವಿಮಾನಪ್ರಯಾಣದ ಫೋಟೋ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಸುಂದರ ಕಿಟಕಿಯುಳ್ಳ ವಿಮಾನದ ಫೋಟೋ ಅನ್ನು ಫೋಟೋಶಾಪ್​ ಮಾಡಿ ಟ್ವೀಟ್ ಮಾಡಿ, ಇಲ್ಲಿದೆ ಕಿಟಕಿ ಎಂದು ತೋರಿ ತಮಾಷೆ ಮಾಡಿದ್ದಾರೆ.

ಪ್ರಸ್ತುತ ಟ್ವೀಟ್​ ಅನ್ನು 4.6 ಲಕ್ಷ ಜನರು ನೋಡಿದ್ದಾರೆ. 6,000ಕ್ಕೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ. ನೂರಾರು ಜನರು ರೀಟ್ವೀಟ್ ಮಾಡಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 1:21 pm, Wed, 8 February 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ