Dog Ball Balancing Video: ಬಾಲ್ ಬ್ಯಾಲೆನ್ಸ್ ಹೇಗೆ ಮಾಡುತ್ತೆ ನೋಡಿ ಈ ಮುದ್ದು ಮರಿ, ಈ ನಾಯಿಯನ್ನು ಕೂಡ ಫುಟ್ಬಾಲ್ ಟೀಂಗೆ ಸೇರಿಸಿಕೊಳ್ಳಿ
ಸಾಮಾಜಿಕ ಜಾಲತಾಣಗಳಲ್ಲಿ ನೀವು ಸ್ಕ್ರೋಲ್ ಮಾಡುವಾಗ ಹಲವು ಆಸಕ್ತಿದಾಯಕ ವಿಡಿಯೋಗಳು ನಿಮ್ಮ ಕಣ್ಣಿಗೆ ಬೀಳಬಹುದು. ಕೆಲವು ವಿಡಿಯೋಗಳು ಅಚ್ಚರಿ ಮೂಡಿಸುತ್ತವೆ.
ಸಾಮಾಜಿಕ ಜಾಲತಾಣಗಳಲ್ಲಿ ನೀವು ಸ್ಕ್ರೋಲ್ ಮಾಡುವಾಗ ಹಲವು ಆಸಕ್ತಿದಾಯಕ ವಿಡಿಯೋಗಳು ನಿಮ್ಮ ಕಣ್ಣಿಗೆ ಬೀಳಬಹುದು. ಕೆಲವು ವಿಡಿಯೋಗಳು ಅಚ್ಚರಿ ಮೂಡಿಸುತ್ತವೆ. ಹಾಗೆಯೇ ನಾಯಿಯೊಂದು ಬಾಲ್ ಅನ್ನು ಬ್ಯಾಲೆನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ವೀಡಿಯೊವನ್ನು ಟ್ವಿಟರ್‌ನಲ್ಲಿ @buitengebiden ಹೆಸರಿನ ಪುಟದಿಂದ ಹಂಚಿಕೊಳ್ಳಲಾಗಿದೆ, ಇದು Twitter ನಲ್ಲಿ 2 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದೆ.
ಈ ಆಸಕ್ತಿದಾಯಕ ವೀಡಿಯೊದಲ್ಲಿ, ನಾಯಿಯೊಂದು ಉದ್ಯಾನದಲ್ಲಿ ಆಡುತ್ತಿರುವುದನ್ನು ಕಾಣಬಹುದು. ಈ ನಾಯಿಯ ಕಡೆಗೆ ಚೆಂಡನ್ನು ಎಸೆದ ತಕ್ಷಣ, ನಾಯಿ ಅದನ್ನು ತನ್ನ ತಲೆಯ ಮೇಲೆ ತ್ವರಿತವಾಗಿ ಸಮತೋಲನಗೊಳಿಸುತ್ತದೆ. ಅಷ್ಟೇ ಅಲ್ಲ, ಈ ನಾಯಿ ಈ ಚೆಂಡನ್ನು ನೆಲದ ಮೇಲೆ ಬೀಳಲು ಬಿಡದೆ, ಚೆಂಡನ್ನು ತನ್ನ ತಲೆಯ ಮೇಲೆ ಬ್ಯಾಲೆನ್ಸ್ ಮಾಡಿ ಅಲ್ಲಿ ಇಲ್ಲಿ ಓಡುತ್ತದೆ ಮತ್ತು ಪುಟಿಯುತ್ತದೆ.
ಮತ್ತಷ್ಟು ಓದಿ: ಓಹ್ ಕಾರು! ಎಲ್ಲಿಗೆ ಹೋಗ್ತಿದೀವಿ? ಸ್ಕ್ಯಾನಿಂಗ್ಗೆ, ಕಿಮೋಥೆರಪಿಗೆ, ಸರ್ಜರಿಗೆ…
ಈ ವಿಶಿಷ್ಟ ವೀಡಿಯೊವನ್ನು ಫೆಬ್ರವರಿ 1 ರಂದು Twitter ನಲ್ಲಿ ಹಂಚಿಕೊಳ್ಳಲಾಗಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡ ನಂತರ, ಈ ವೀಡಿಯೊವನ್ನು ಇಲ್ಲಿಯವರೆಗೆ 17 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
Skills.. ?
? TT: bruisertheboston pic.twitter.com/07UggVmNB3
— Buitengebieden (@buitengebieden) February 1, 2023
ಕ್ಲಿಪ್‌ನಲ್ಲಿ ಅನೇಕ ಕಾಮೆಂಟ್‌ಗಳು ಬಂದಿವೆ, ಇದು ಈ ನಾಯಿಯ ಬಾಲ್ ಬ್ಯಾಲೆನ್ಸಿಂಗ್ ಸ್ಕಿಲ್ ವೀಡಿಯೊದಿಂದ ಬಳಕೆದಾರರು ಎಷ್ಟು ಪ್ರಭಾವಿತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಒಬ್ಬ ಬಳಕೆದಾರರು ಬರೆದಿದ್ದಾರೆ, “ಇದು ಅದ್ಭುತವಾಗಿದೆ, ಬಹುಶಃ ಯಾವುದೇ ಫುಟ್ಬಾಲ್ ತಂಡದಲ್ಲಿ ಆಡಬಹುದು ಎಂದು ಬರೆದಿದ್ದಾರೆ. ಹೀಗೆ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ.
ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ