ಸಾರ್ವಜಿನಿಕ ಶೌಚಾಲಯಗಳನ್ನು ನಾವು ಹೆಚ್ಚಾಗಿ ಜನನಿಬಿಡ ಸ್ಥಳಗಳಲ್ಲಿ ಕಾಣುತ್ತೇವೆ. ಬಹಳಷ್ಟು ಜನರು ವಿವಿಧ ಕಾರಣಗಳಿಗಾಗಿ ಸಾರ್ವಜನಿಕ ಶೌಚಾಲಯ (public toilet) ಗಳನ್ನು ಬಳಸುವುದಿಲ್ಲ. ಅದರಲ್ಲಿ ಪ್ರಮುಖ ಕಾರಣವೆಂದರೆ ಸ್ಪಚ್ಛತೆ ಮತ್ತು ಬ್ಯಾಕ್ಟೀರಿಯಾಗಳ ಭಯವಾಗಿದೆ. ಈ ಸಾರ್ವಜನಿಕ ಶೌಚಾಲಯಗಳನ್ನು ಬಳಕೆ ಮಾಡುವವರಾಗಲಿ ಅಥವಾ ಅದನ್ನು ನಿರ್ವಹಿಸುವವರಾಗಲಿ ಸರಿಯಾಗಿ ಕಾಯ್ದುಕೊಳ್ಳದಿರುವುದರಿಂದ ಅವು ಗಬ್ಬು ವಾಸನೆ ಹೊಡೆಯುತ್ತವೆ. ಇನ್ನು ಶೌಚಾಲಯಗಳನ್ನು ಸರಿಯಾಗಿ ಸ್ಪಚ್ಛಗೊಳಿಸದಿರುವುದು ಕೂಡ ರೋಗಗಳಿಗೆ ಕಾರಣವಾಗುತ್ತದೆ. ಆದರೆ ಸದ್ಯದ ತಂತ್ರಜ್ಞಾನ ಯುಗದಲ್ಲಿ ಸ್ವಯಂ-ಶುಚಿಗೊಳಿಸುವ ಸಾರ್ವಜನಿಕ ಶೌಚಾಲಯಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಈ ಶೌಚಾಲಯಗಳು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ತಂತಾನೆ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ.
ಸದ್ಯ ಸ್ವಯಂ-ಶುಚಿಗೊಳಿಸಬಲ್ಲ ಸಾರ್ವಜನಿಕ ಶೌಚಾಲಯದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಡಿದಾಡುತ್ತಿದೆ. ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಒಂದುಕ್ಷಣ ಬೆರಗಾಗಿದ್ದಾರೆ.
This is how a self cleaning public toilet in Paris works 🇫🇷 pic.twitter.com/ZOL5rscehJ
— H0W_THlNGS_W0RK (@HowThingsWork_) April 6, 2024
‘ಹೌ ಥಿಂಗ್ಸ್ ವರ್ಕ್’ ಎಂಬ ಎಕ್ಸ್ ಖಾತೆಯೊಂದು ಈ ಸ್ವಯಂ-ಶುಚಿಗೊಳಿಸಬಲ್ಲ ಸಾರ್ವಜನಿಕ ಶೌಚಾಲಯದ ವಿಡಿಯೋವನ್ನು ಹಂಚಿಕೊಂಡಿದೆ. ಮೊದಲು ಬಾಗಿಲುಗಳು ಮುಚಿಕೊಳ್ಳುತ್ತವೆ. ಟಾಯ್ಲೆಟ್ ಕೂಡ ಸ್ವಯಂಚಾಲಿತವಾಗಿ ಮುಚ್ಚುತ್ತದೆ. ನಂತರ ಕೋಣೆಯೊಳಗೆ ಕೆಳಭಾಗದಲ್ಲಿ ನೀರು ಬರುವ ಮೂಲಕ ಸ್ವಯಂ-ಶುಚಿಗೊಳ್ಳುತ್ತದೆ. ಬಳಿಕ ಬಾಗಿಲು ಮತ್ತೆ ತೆರೆಯುತ್ತದೆ.
ಇದನ್ನೂ ಓದಿ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ: ಪಾಪ ನಿಂತುಕೊಂಡೇ ಐಪಿಎಲ್ ಪಂದ್ಯ ವೀಕ್ಷಿಸಿದ ಫ್ಯಾನ್ಸ್
ಈ ಸ್ವಯಂ-ಶುಚಿಗೊಳಿಸಬಲ್ಲ ಸಾರ್ವಜನಿಕ ಶೌಚಾಲಯದ ಬಳಕೆಯೂ ಮುಂದಿನ ಪಿಳಿಗೆಗೆ ಉತ್ತಮವಾದ ಪರಿಸರವನ್ನು ನೀಡುವುದಾಗಿದೆ. ಜೊತೆಗೆ ಹಾನಿಕಾರಕ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದಾಗಿದೆ.
ಸದ್ಯ ವೈರಲ್ ಆದ ವಿಡಿಯೋಗೆ ನೆಟ್ಟಿಗರು ವಿಧವಿಧವಾದ ಕಮೆಂಟ್ ಮಾಡಿದ್ದಾರೆ. ಇದು ಯುರೋಪ್ನಲ್ಲಿ ಈಗಾಗಲೇ ಬಳಕೆಯಲ್ಲಿದೆ ಎಂದು ನಾನು ಇತ್ತೀಚೆಗೆ ನೋಡಿದ್ದೇನೆ ಎಂದು ಒಬ್ಬರು ಬರೆದುಕೊಂಡಿದ್ದಾರೆ. ಇಂತಹ ವ್ಯವಸ್ಥೆ ಎಲ್ಲೆಡೆ ಇರಬೇಕು. ಇದರಿಂದ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Viral Video: ಭಾವೈಕ್ಯತೆಯ ಸಂಗಮ; ದೇವಾಲಯಕ್ಕೆ ತೆರಳುವ ಭಕ್ತರಿಗಾಗಿ ಮುಸ್ಲಿಂ ವ್ಯಕ್ತಿಯ ಮಾನವೀಯ ಕಾರ್ಯ
ಇದು ಒಂದು ಅದ್ಭುತ ಕಲ್ಪನೆ ಆಗಿದೆ. ನಮ್ಮ ದೈನಂದಿನ ದಿನಚರಿಯನ್ನು ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಆಗಿದೆ. ಸಾರ್ವಜನಿಕ ಸೌಲಭ್ಯಗಳನ್ನು ಹೆಚ್ಚು ಸಮರ್ಥನೀಯ ಮತ್ತು ಪರಿಣಾಮಕಾರಿಯಾಗಿ ಬಳಕೆ ಮಾಡುವುದು, ಜಾಗೃತ ಮತ್ತು ಜವಾಬ್ದಾರಿಯುತ ನಗರ ಜೀವನಕ್ಕೆ ಒಂದು ಹೆಜ್ಜೆಯಾಗಿದೆ ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.