ಆನೆಯನ್ನು ಬೇಟೆಯಾಡಲು ಹೋದ ಹುಲಿ ಬೆಕ್ಕಿನಂತೆ ಓಡಿಹೋಯಿತು

| Updated By: ಶ್ರೀದೇವಿ ಕಳಸದ

Updated on: Oct 15, 2022 | 11:26 AM

Tiger Tries To Hunt Elephant : ಆನೆಯನ್ನು ಹುಲಿಗಳು ಬೇಟೆಯಾಡಬಲ್ಲವೆ, ನಿಮ್ಮ ಅಭಿಪ್ರಾಯವೇನು? ಈಗ ವೈರಲ್ ಆಗಿರುವ ವಿಡಿಯೋ ನೋಡಿದ ನೆಟ್ಟಿಗರು, ನಿಜವಾಗಲೂ ಕಾಡಿನ ರಾಜ ಆನೆಯೇ ಎನ್ನುತ್ತಿದ್ದಾರೆ.

ಆನೆಯನ್ನು ಬೇಟೆಯಾಡಲು ಹೋದ ಹುಲಿ ಬೆಕ್ಕಿನಂತೆ ಓಡಿಹೋಯಿತು
Tiger Tries To Hunt Elephant Runs Away Like A Scared Little Cat
Follow us on

Viral Video : ಬೇಟೆ ಎಂದರೆ ಹುಲಿಯ ಬೇಟೆ! ಒಂಟಿಯಾಗಿ ಆಡುವಂಥ ವಿಶೇಷ ಸಾಮರ್ಥ್ಯ ಹುಲಿಯದು. ಸಾಮಾನ್ಯವಾಗಿ ಹುಲಿಗಳು ಆನೆಯ ಮೇಲೆ ದಾಳಿ ಮಾಡಲಾರವು. ಏಕೆಂದರೆ ಆನೆಗಳು ಹಿಂಡಿನಲ್ಲಿ ಚಲಿಸುತ್ತಿರುತ್ತವೆ. ಅಕಸ್ಮಾತ್​ ಹುಲಿ ಆನೆಯನ್ನು ಬೇಟೆಯಾಡಲು ಅವಕಾಶ ಸಿಕ್ಕರೆ ಖಂಡಿತ ಬಿಡುವುದಿಲ್ಲ. ಆದರೆ ಹೆಚ್ಚಿನ ಪಾಲು ಗೆಲುವು ದೈತ್ಯದೇಹಿಯಾದಂಥ ಆನೆಯದ್ದೇ ಆಗಿರುತ್ತದೆ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ. ಹುಲಿಯ ಬರುವಿಕೆಯನ್ನು ಆನೆ ದೂರದಿಂದಲೇ ಗ್ರಹಿಸಿದಂತಿದೆ. ನಂತರ ಏನಾಗುತ್ತದೆ?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಸಂತೋಷ ಸಾಗರ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಹುಲಿಯು ಆನೆಯನ್ನು ಬೇಟೆಯಾಡಲು ನೋಡುತ್ತದೆ. ಆದರೆ ಅದರ ಯತ್ನ ವಿಫಲವಾಗುತ್ತದೆ. ಏಕೆಂದರೆ ಇದು ಮರಿಯಾನೆಯಲ್ಲ. ದೊಡ್ಡ ಆನೆ. ಹುಲಿಯು ಆನೆಯನ್ನು ಹೆದರಿಸಿ ಬೇಟೆಯಾಡಲು ಪ್ರಯತ್ನಿಸಬಹುದೆ ವಿನಾ ಆನೆಯನ್ನು ಕೊಲ್ಲಲು ಸಾಧ್ಯವಿಲ್ಲ.

ಆನೆ ಯಾವಾಗ ಒಮ್ಮೆ ತಿರುಗಿ ನಿಲ್ಲುತ್ತದೆಯೋ ಹುಲಿ ತನ್ನನ್ನು ರಕ್ಷಿಸಿಕೊಳ್ಳಲು ಬಾಲ ಮುದುರಿದ ಬೆಕ್ಕಿನಂತೆ ಬೇರೆ ದಾರಿ ಹಿಡಿಯುತ್ತದೆ. ಈ ವಿಡಿಯೋದಲ್ಲಿ ನೀವದನ್ನು ಗಮನಿಸಿರಬಹುದು. ಈ ವೀಡಿಯೊ ಸುಮಾರು 8,5000 ಜನರಿಂದ ವೀಕ್ಷಿಸಲ್ಪಟ್ಟಿದೆ. ‘ನಾನು ಆನೆಯಾಗಿದ್ದರೆ, ಖಂಡಿತ ಹುಲಿ ನನ್ನನ್ನು ಕೊಲ್ಲಲು ಸಾಧ್ಯವೇ ಇಲ್ಲ ಎಂಬ ಬಗ್ಗೆ ನನಗೆ ಗ್ಯಾರಂಟಿ ಇದೆ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ‘ಅರೆ ಹುಲಿಯು ನಾಯಿ ಥರ ಓಡಿಹೋಗಿದೆ. ಕಾಡಿನ ನಿಜವಾದ ರಾಜಾ ಎಂದರೆ ಆನೆಯೇ’ ಎಂದಿದ್ಧಾರೆ ಮತ್ತೊಬ್ಬರು. ‘ಜಿಮ್ ಕಾರ್ಬೆಟ್​ ಪುಸ್ತಕ ಓದಿದ್ದೀರಾ? ಎರಡು ಆನೆಗಳು ಹುಲಿಯನ್ನು ಕೊಲ್ಲಬಲ್ಲವು’ ಎಂದಿದ್ದಾರೆ ಮಗದೊಬ್ಬರು.

ನಿಮಗೇನು ಅನ್ನಿಸುತ್ತದೆ ಈ ವಿಡಿಯೋ ನೋಡಿದರೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ