ಟಿಎಂಸಿ ಶಾಸಕ ಮದನ್ ಮಿತ್ರಾ ಫಿಫಾ ವರ್ಲ್ಡ್​ ಕಪ್​ಗಾಗಿ ಹಾಡಿದ ಹಾಡು ಈಗಾಗಲೇ ವೈರಲ್

| Updated By: Digi Tech Desk

Updated on: Nov 19, 2022 | 12:03 PM

FIFA World Cup 2022 : ಈ ವಿಡಿಯೋದಲ್ಲಿ ಮದನ್ ಮಿತ್ರಾ 'ಡಿ ಗೋಲ್ ಡಿ ಗೋಲ್' ಎಂಬ ಮಜಾ ಹಾಡನ್ನು ಬರೆದು ಸ್ವತಃ ಹಾಡಿದ್ದಾರೆ. ಅರಬ್ ಶೇಖ್‌ನಂತೆ ವೇಷ ಧರಿಸಿರುವುದು ನೆಟ್ಟಿಗರ ಗಮನ ಸೆಳೆದಿದೆ.

ಟಿಎಂಸಿ ಶಾಸಕ ಮದನ್ ಮಿತ್ರಾ ಫಿಫಾ ವರ್ಲ್ಡ್​ ಕಪ್​ಗಾಗಿ ಹಾಡಿದ ಹಾಡು ಈಗಾಗಲೇ ವೈರಲ್
TMC MLA Madan Mitra’s funny song for FIFA World Cup 2022
Follow us on

Viral Video : ಸಾಮಾಜಿಕ ಮಾಧ್ಯಮದಲ್ಲಿ ಇಂಥ ಮಜಮಜಾ ಹಾಡುಗಳು, ಸಾಹಿತ್ಯದಿಂದ ಆಗಾಗ ಗಮನ ಸೆಳೆಯುತ್ತಿರುತ್ತಾರೆ ತೃಣಮೂಲ ಕಾಂಗ್ರೆಸ್​ನ ಶಾಸಕ ಮದನ್ ಮಿತ್ರಾ. ಈಗಾಗಲೇ ಟ್ವಿಟರ್, ಯೂಟ್ಯೂಬ್‌ನಲ್ಲಿ ಇವರ ಮತ್ತೊಂದು ಹೊಸ ಹಾಡು ವೈರಲ್ ಆಗುತ್ತಿದೆ. ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ 2022 ಗಾಗಿ ಈ  ಹಾಡನ್ನು ಬಿಡುಗಡೆ ಮಾಡುವ ಉದ್ದೇಶ ಇವರದಾಗಿದೆ. ಅರಬ್​ ಶೇಖ್​ನಂತೆ ವೇಷತೊಟ್ಟ ಅವರನ್ನು ನೆಟ್ಟಗರು ಕುತೂಹಲದಿಂದ ನೋಡುತ್ತಿದ್ದಾರೆ.

ಡಿ ಗೋಲ್​ ಡಿ ಗೋಲ್​ ಎಂಬ ಹಾಡನ್ನು ಬರೆದು ಅವರೇ ಹಾಡಿದ್ದಾರೆ ಈ ವಿಡಿಯೋದಲ್ಲಿ. ಸಹಕಲಾವಿದರೊಂದಿಗೆ ನರ್ತಿಸಿದ್ದಾರೆ ಕೂಡ. ಕೊನೆಯಲ್ಲಿ ಅವರು ತೋರಿಸುವ ಕಪ್​ನ ಪ್ರತಿಕೃತಿಯಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಚಿತ್ರವನ್ನು ನೋಡಬಹುದಾಗಿದೆ.

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಮೊದಲು ಮದನ್​ ದಸರಾ ಸಂದರ್ಭದಲ್ಲಿ ರ್ಯಾಪ್​ ಹಾಡನ್ನು ಹಾಡಿದ್ದು ವೈರಲ್ ಆಗಿತ್ತು; ‘ಇಂಡಿಯಾ ವನ್ನಾವೇ ಹರ್ ಬೇಟಿಯಾ’. ಇದೀಗ ಈ ಹಾಡಿನ ಮೂಲಕ ನೆಟ್ಟಿಗರ ಮತ್ತು ಫುಟ್​ಬಾಲ್ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಈ ವಿಡಿಯೋದಲ್ಲಿ ಅವರ ಉತ್ಸಾಹ ನೋಡಲು ಮರೆಯದಿರಿ.

ನೆಟ್ಟಗರು ಈ ಹಾಡನ್ನು ಅದ್ಭುತವಾಗಿದೆ ಎಂದು ಹೊಗಳುತ್ತಿದ್ಧಾರೆ. ನಿಮ್ಮ ಅಭಿಪ್ರಾಯವೇನು ಇವರ ಹಾಡಿನ ಬಗ್ಗೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 9:28 am, Sat, 19 November 22