ನಗರದ ಜನರಿಗೆ ಹಳ್ಳಿಗಳಲ್ಲಿ ಓಡಾಡುವುದೆಂದರೆ ಒಂಥರಾ ಖುಷಿ, ಹಳ್ಳಿಗಳ ಬಗ್ಗೆ ಕುತೂಹಲ. ಸುತ್ತಲಿನ ಹಸಿರು, ವಿಸ್ತಾರವಾದ ನಿರ್ಮಲ ಆಕಾಶ ಮತ್ತು ತಾಜಾ ಗಾಳಿಯ ಅಲೆಗಳು ಎಂಥವರ ಮನಸನ್ನೂ ಉಲ್ಲಸಿತಗೊಳಿಸುತ್ತವೆ. ಹೀಗೆ ಹಳ್ಳಿಯ ದಟ್ಟ ಕಾಡಿನ ಮಧ್ಯೆ ಹೋಗುತ್ತಿರುವಾಗ ಅಕಸ್ಮಾತ್ ಸಿಂಹ (Lion) ಎದುರು ಬಂದರೆ ಹೇಗಿರುತ್ತದೆ? ಆರಾಮಾಗಿ ಹಳ್ಳಿಯ ವಾತಾವರಣದಲ್ಲಿ ಓಡಾಡಬೇಕು ಎಂದು ಹೋಗಿದ್ದವರಿಗೆ ಎದುರಲ್ಲಿ ಸಿಂಹಿಣಿಯೊಂದು ಎದುರು ಬಂದಿದೆ. ಕಿರಿದಾದ ಹಳ್ಳಿಯ ಹಾದಿಯಲ್ಲಿ ಪ್ರಯಾಣಿಸುವಾಗ ಇಬ್ಬರು ಪ್ರಯಾಣಿಕರಿಗೆ ಸಿಂಹಿಣಿ ಎದುರಾಗಿದೆ.
ವೈರಲ್ ಆಗಿರುವ ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್‌ನಲ್ಲಿ ಬೈಕಿನಲ್ಲಿ ಇಬ್ಬರು ಪ್ರಯಾಣಿಕರು ಹಳ್ಳಿಯ ಹಾದಿಯಲ್ಲಿ ಹಾದುಹೋಗುತ್ತಿರುವುದನ್ನು ನೋಡಬಹುದು. ಹಾಗೆ ಹೋಗುತ್ತಿರುವಾಗ ರಸ್ತೆಯಲ್ಲೇ ದೂರದಲ್ಲಿ ಸಿಂಹಿಣಿಯೊಂದು ಚಲಿಸುತ್ತಿರುತ್ತದೆ. ನಂತರ ಆ ಸಿಂಹಿಣಿ ಬೈಕ್‌ನತ್ತ ಬರುತ್ತಿರುವುದನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ. ಈ ಮೈ ಜುಂ ಎನಿಸುವ ವಿಡಿಯೋ ಭಾರೀ ವೈರಲ್ ಆಗಿದೆ.
Co travellers on a Village road. Happens in India? pic.twitter.com/XQKtOcEstF
— Susanta Nanda IFS (@susantananda3) February 14, 2022
ಅದೃಷ್ಟವಶಾತ್ ಆ ಸಿಂಹಿಣಿ ಬೈಕ್ ಸಮೀಪವೇ ಬಂದರೂ ಆ ಪ್ರಯಾಣಿಕರ ಮೇಲೆ ಯಾವುದೇ ದಾಳಿ ಮಾಡಲಿಲ್ಲ. ಪ್ರಯಾಣಿಕರ ಹತ್ತಿರಕ್ಕೆ ಬಂದ ಆ ಸಿಂಹಿಣಿ ನಂತರ ಪೊದೆಗಳ ಕಡೆಗೆ ಹೋಗುತ್ತದೆ. ನಂತರ ಪೊದೆಗಳ ಹಿಂದೆ ಆ ಸಿಂಹಿಣಿ ಕಣ್ಮರೆಯಾಗುತ್ತದೆ. ಈ ಘಟನೆ ನಡೆದಿರುವುದು ಗುಜರಾತ್‌ನಲ್ಲಿ. ಈ ವಿಡಿಯೋವನ್ನು 31,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
Brave man and women (pillion rider). It takes lot of guts to stand still like that, even though the lioness was in no mood to attack, it just want to move away.
— Praveen vaddepally (@Praveen_Writer) February 14, 2022
ಈ ವಿಡಿಯೋ ನೋಡಿದವರು ಆ ಇಬ್ಬರು ಪ್ರಯಾಣಿಕರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಂಹ ಹತ್ತಿರದಲ್ಲೇ ಸುಳಿದಾಡುವಾಗ ಹಾಗೆ ನಿಲ್ಲಲು ಸಾಕಷ್ಟು ಧೈರ್ಯ ಬೇಕು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಹಾಗೇ, ಆ ಸಿಂಹಿಣಿ ಬೈಕ್ ಸವಾರರ ಮೇಲೆ ಏಕೆ ದಾಳಿ ಮಾಡಲಿಲ್ಲ? ಎಂಬ ಕುತೂಹಲವನ್ನೂ ಅನೇಕರು ವ್ಯಕ್ತಪಡಿಸಿದ್ದಾರೆ.
Lions don’t attack humans unless they are provoked.
Its the same with almost all wild cats except those that have become man eaters or they mistake humans for other small animals.
They ideally want to avoid humans as much and as often as possible.— Yash (@Yash2297) February 14, 2022
“ಸಿಂಹಗಳು ಪ್ರಚೋದನೆಗೆ ಒಳಗಾಗದ ಹೊರತು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ” ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ಸಿಂಹಗಳು ಹೆಚ್ಚಾಗಿವೆ.
ಇದನ್ನೂ ಓದಿ: Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!
Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್