Viral Video: ಟ್ರಕ್‌ನ ಇಂಜಿನ್‌ನಲ್ಲಿ ಸಿಲುಕಿ 98 ಕಿ.ಮೀ ಪ್ರಯಾಣಿಸಿದ ದೈತ್ಯ ಹೆಬ್ಬಾವು

ಉತ್ತರ ಪ್ರದೇಶದಿಂದ ಬಿಹಾರಕ್ಕೆ ಚಲಿಸುತ್ತಿದ್ದ ಟ್ರಕ್‌ನ ಎಂಜಿನ್‌ನಲ್ಲಿ ದೊಡ್ಡ ಹೆಬ್ಬಾವು ಸಿಲುಕಿಕೊಂಡು 98 ಕಿಲೋಮೀಟರ್ ಪ್ರಯಾಣಿಸಿದೆ. ಲಾರಿಯ ಬಾನೆಟ್ ತೆರೆದಾಗ ಹಾವು ಕಂಡು ಚಾಲಕ ಬೆಚ್ಚಿ ಬಿದ್ದಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಉತ್ತರ ಪ್ರದೇಶ: ಹೆಬ್ಬಾವೊಂದು ಟ್ರಕ್‌ನ ಇಂಜಿನ್‌ನಲ್ಲಿ ಸಿಲುಕಿಕೊಂಡು ಸುಮಾರು 98 ಕಿಲೋಮೀಟರ್ ಪ್ರಯಾಣಿಸಿದ ಭಯಾನಕ ಘಟನೆ ಬಿಹಾರದ ನರ್ಕಟಿಯಾಗಂಜ್​ನಲ್ಲಿ ನಡೆದಿದೆ. ಉತ್ತರ ಪ್ರದೇಶದಿಂದ ಬಿಹಾರಕ್ಕೆ ಚಲಿಸುತ್ತಿದ್ದ ಟ್ರಕ್‌ನ ಎಂಜಿನ್‌ನಲ್ಲಿ ಹೆಬ್ಬಾವು ಪತ್ತೆಯಾಗಿದೆ. 98 ಕಿಲೋಮೀಟರ್ ಚಲಿಸಿದ ಬಳಿಕ ಲಾರಿಯ ಬಾನೆಟ್ ತೆರೆದಾಗ ದೈತ್ಯ ಹೆಬ್ಬಾವನ್ನು ಕಂಡು ಚಾಲಕ ಬೆಚ್ಚಿ ಬಿದ್ದಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ಬಿಹಾರದ ನರ್ಕಟಿಯಾಗಂಜ್‌ನಲ್ಲಿ ನಿರ್ಮಾಣ ಕಾರ್ಯಕ್ಕಾಗಿ ಟ್ರಕ್‌ಗೆ ಕಲ್ಲುಗಳನ್ನು ತುಂಬುತ್ತಿದ್ದಾಗ ಕುಶಿನಗರದಲ್ಲಿ ಹಾವು ಟ್ರಕ್‌ಗೆ ಪ್ರವೇಶಿಸಿರಬಹುದು ಊಹಿಸಲಾಗಿದೆ.

ಹಾವಿನ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅವರು ಸುದೀರ್ಘ ಹೋರಾಟದ ನಂತರ ಲಾರಿಯ ಇಂಜಿನ್‌ನಿಂದ ಹಾವನ್ನು ರಕ್ಷಿಸಿದ್ದಾರೆ. ಹಾವನ್ನು ಮತ್ತೆ ಕಾಡಿಗೆ ಬಿಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಹಾವು ಯಾರ ಮೇಲೂ ದಾಳಿ ಮಾಡಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us