Viral Video: ನಿಯಂತ್ರಣ ತಪ್ಪಿ ಬಿದ್ದ ದ್ವಿಚಕ್ರ ವಾಹನ, ಹಿಂಬದಿ ವಾಹನ ಸವಾರನ ಮೇಲೆ ಎಗರಾಡಿದ ಮಹಿಳೆ!

ಅಡಿಗೆ ಬಿದ್ದರೂ ಮೂಗು ಮೇಲೆ ಎಂಬಂತಾಯ್ತು ಇವರ ಕಥೆ, ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದಿದ್ದಲ್ಲದೆ, ಘಟನೆಗೆ ನೀನೇ ಕಾರಣ ಎಂದು ಮತ್ತೊಂದು ಬೈಕ್ ಸವಾರನಿಗೆ ಮಹಿಳೆ ಬೈದಿದ್ದಾಳೆ. ಇದರ ವಿಡಿಯೋ ವೀಕ್ಷಣೆ ನಡೆಸಲು ಈ ಸುದ್ದಿ ಓದಿ.

Viral Video: ನಿಯಂತ್ರಣ ತಪ್ಪಿ ಬಿದ್ದ ದ್ವಿಚಕ್ರ ವಾಹನ, ಹಿಂಬದಿ ವಾಹನ ಸವಾರನ ಮೇಲೆ ಎಗರಾಡಿದ ಮಹಿಳೆ!
ಬೈಕ್ ಸವಾರನನ್ನು ದೂಷಿಸಿದ ಮಹಿಳೆ
Updated By: Rakesh Nayak Manchi

Updated on: Jun 20, 2022 | 6:20 PM

ತಮ್ಮದೇ ತಪ್ಪಿರುವಾಗ ಬೇರೆಯವರ ಮೇಲೆ ಕೋಪದಿಂದ ಎಗರಾಡುವುದು ಎಷ್ಟು ಸರಿ? ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ, ಯಾವುದೇ ತಪ್ಪು ಮಾಡದ ಮತ್ತೊಬ್ಬ ಬೈಕ್ ಸವಾರನಿಗೆ ಬೈದಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Video Viral) ಆಗುತ್ತಿದ್ದು, ಮಹಿಳೆಯನ್ನು ನೆಟ್ಟಿಗರು ‘ಅಂಬರ್ ಹರ್ಡ್ ಲೈಟ್’ ಎಂದು ಕರೆದಿದ್ದಾರೆ.

ಇದನ್ನೂ ಓದಿ: Viral Video: ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ಯುವತಿಯ ರಂಪಾಟ..!

ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ವ್ಯಕ್ತಿ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ಕೂಡಲೇ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಈತನದ್ದು ಯಾವುದೇ ತಪ್ಪು ಇಲ್ಲದಿದ್ದರೂ ರಸ್ತೆ ಮೇಲೆ ಬಿದ್ದ ಮಹಿಳೆ ಮಾತ್ರ ಬೈಕ್ ಸವಾರನದ್ದೇ ತಪ್ಪು ಎಂದು ಬೈಯಲು ಪ್ರಾರಂಭಿಸಿದ್ದಾಳೆ. ಈ ವೇಳೆ ಬೈಕ್ ಸವಾರ, ತನ್ನದೇನು ತಪ್ಪಿಲ್ಲ, ನಾನು ವಿಡಿಯೋ ಮಾಡಿದ್ದೇನೆ, ಸಾಕ್ಷಿ ತೋರಿಸುತ್ತೇನೆ ಎಂದು ಹೇಳುವುದನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ: Viral Video: ಮೊದಲ ಬಾರಿ ಕಿಸ್ ಪಡೆದ ನಾಯಿಯ ಸಂತೋಷ ಹೇಗಿತ್ತು ನೀವೇ ನೋಡಿ

ವಿಡಿಯೋವನ್ನು meemlogy ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “Acha hua camera tha” ಎಂದು ಬರೆದುಕೊಳ್ಳಲಾಗಿದೆ. ಈ ವಿಡಿಯೋ ವೈರಲ್ ಆಗಿ 3.7 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದ್ದು, 207k ಲೈಕ್‌ಗಳನ್ನು ಗಿಟ್ಟಿಸಿಕೊಂಡಿದೆ. ವಿಡಿಯೋ ವೀಕ್ಷಣೆ ಮಾಡಿದ ನೆಟ್ಟಿಗರು, ಮಹಿಳೆಯನ್ನು ಅಂಬರ್ ಹರ್ಡ್‌ನೊಂದಿಗೆ ಹೋಲಿಸಿದ್ದಾರೆ. ತಮ್ಮದೇ ತಪ್ಪಿಗೆ ಬೈಕ್ ಸವಾರನನ್ನು ದೂಷಿಸಿದ ಕಾರಣ ಆಕೆಯನ್ನು ‘ಸಾಸ್ತಿ ಅಂಬರ್ ಹರ್ಡ್’ ಅಥವಾ ‘ಅಂಬರ್ ಹರ್ಡ್ ಲೈಟ್’ ಕರೆದಿದ್ದಾರೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ