ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಓಡಿದ ಒಡಿಯಾ ಮಹಿಳೆ; ವಿಡಿಯೋ ವೈರಲ್​​​​

|

Updated on: Apr 19, 2023 | 12:24 PM

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸಾಂಪ್ರದಾಯಿಕ ಉಡುಗೆಯನ್ನು ಪ್ರತಿನಿಧಿಸುವ ಸಲುವಾಗಿ ಒಡಿಯಾ ಮಹಿಳೆ 42.5 ಕಿ.ಮೀ ಮ್ಯಾರಥಾನ್​​ನಲ್ಲಿ ಓಡಿ ಎಲ್ಲರ ಗಮನ ಸೆಳೆದಿದ್ದಾರೆ.

ಯುಕೆ ಮ್ಯಾರಥಾನ್‌ನಲ್ಲಿ ಸೀರೆಯುಟ್ಟು ಓಡಿದ ಒಡಿಯಾ ಮಹಿಳೆ; ವಿಡಿಯೋ ವೈರಲ್​​​​
Image Credit source: Twitter
Follow us on

ವಿದೇಶದಲ್ಲಿ ಮಹಿಳೆಯೊಬ್ಬರು ಒರಿಸ್ಸಾ ಕೈ ಮಗ್ಗದ ಸಂಬಲ್ಪುರಿ  ಸೀರೆಯಲ್ಲಿ ಮ್ಯಾರಥಾನ್‌ನಲ್ಲಿ ಓಡಿರುವುದು ಇದೀಗಾ ಭಾರೀ ವೈರಲ್​​ ಆಗಿದೆ. ಹೌದು ಒಡಿಯಾ ಮಹಿಳೆ 42.5 ಕಿ.ಮೀ ಮ್ಯಾರಥಾನ್​​ನಲ್ಲಿ ಓಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಧುಸ್ಮಿತಾ ಜೆನಾ ದಾಸ್(41) 4 ಗಂಟೆ 50 ನಿಮಿಷಗಳಲ್ಲಿ ಮ್ಯಾರಥಾನ್ ಪೂರ್ಣಗೊಳಿಸಿದ್ದಾರೆ. ಸುಂದರವಾದ ಕೆಂಪು ಸೀರೆ ಮತ್ತು ಕಿತ್ತಳೆ ಬಣ್ಣದ ಸ್ನೀಕರ್ಸ್ ಧರಿಸಿ ಮ್ಯಾರಥಾನ್‌ನಲ್ಲಿ ಎಲ್ಲರ ಗಮನ ಸೆಳೆದ್ದಿದ್ದಾರೆ.

@FISI_UK ಟ್ವಿಟರ್​​ ಖಾತೆಯಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸೀರೆಯಲ್ಲಿ ಆರಾಮವಾಗಿ ಓಡುತ್ತಿರುವಾಗ ಆಕೆಯ ಸ್ನೇಹಿತರು ಆಕೆಗಾಗಿ ಹುರಿದುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಇದನ್ನೂ ಓದಿ: ನವಿಲಿನ ಮೊಟ್ಟೆ ಕದಿಯಲು ಬಂದವರಿಗೆ ತಾಯಿ ನವಿಲು ಮಾಡಿದ್ದೇನು ನೋಡಿ; ವಿಡಿಯೋ ವೈರಲ್

ಯುಕೆಯ ಮ್ಯಾಂಚೆಸ್ಟರ್‌ನಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದವರಾದ ಮಧುಸ್ಮಿತಾ ಭಾರತೀಯ ಸಂಸ್ಕೃತಿಯ ಬಗ್ಗೆ ಅಪಾರ ಹೆಮ್ಮೆಯನ್ನು ಹೊಂದಿದ್ದಾರೆ. ಮೂಲತಃ ಒರಿಸ್ಸಾದ ಮೂಲದವರಾದ ಇವರು ವಿದೇಶದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಷ್ಟೇ 2023ರ ಮ್ಯಾಂಚೆಸ್ಟರ್‌ ಮ್ಯಾರಥಾನ್‌ ಭಾಗಿಯಾಗಿದ್ದು, ತನ್ನ ಭಾರತ ಸಂಸ್ಕೃತಿಯನ್ನು ಪ್ರತಿನಿಧಿಸುವ ಹಿನ್ನೆಯಲ್ಲಿ ಕೈ ಮಗ್ಗದದಿಂದ ವಿನ್ಯಾಸಗೊಳಿಸಲಾದ ಒರಿಸ್ಸಾದ ಸಂಬಲ್ಪುರಿ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ನಮ್ಮ ಭಾರತದ ಗರಿಮೆಯನ್ನು ವಿದೇಶದಲ್ಲಿಯೂ ಬಿತ್ತರಿಸಿರುವುದು ಹೆಮ್ಮೆಯ ವಿಷಯ ಒಂದು ಬಳಕೆದಾರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:23 pm, Wed, 19 April 23