Viral News: ಕಂಪನಿಯ ಲಕ್ಕಿ ಡ್ರಾದಲ್ಲಿ ಉದ್ಯೋಗಿಗೆ ಹೊಡೀತು ಬಂಪರ್ ಲಾಟರಿ, ಒಂದು ವರ್ಷ ರಜೆ, ಸ್ಯಾಲರೀನೂ ಕೊಡ್ತಾರೆ

ಈ ಒತ್ತಡದ ಜೀವನದಲ್ಲಿ ನೌಕರಿ ಮಾಡುತ್ತಿರುವವರು ವಾರದ ಒಂದೆರಡು ದಿನಗಳ ರಜೆಗಾಗಿ ಹಂಬಲಿಸುತ್ತಿರುತ್ತಾರೆ. ಸಾಕಷ್ಟು ಮಂದಿ ಇಡೀ ದಿನವೂ ನಿದ್ರೆ ಮಾಡಿ ತಮ್ಮ ವಾರದ ಸುಸ್ತನ್ನು ಕಳೆದುಕೊಳ್ಳುತ್ತಾರೆ.

Viral News: ಕಂಪನಿಯ ಲಕ್ಕಿ ಡ್ರಾದಲ್ಲಿ ಉದ್ಯೋಗಿಗೆ ಹೊಡೀತು ಬಂಪರ್ ಲಾಟರಿ, ಒಂದು ವರ್ಷ ರಜೆ, ಸ್ಯಾಲರೀನೂ ಕೊಡ್ತಾರೆ
ಚೀನಾ ಉದ್ಯೋಗಿ
Follow us
|

Updated on: Apr 14, 2023 | 11:50 AM

ಈ ಒತ್ತಡದ ಜೀವನದಲ್ಲಿ ನೌಕರಿ ಮಾಡುತ್ತಿರುವವರು ವಾರದ ಒಂದೆರಡು ದಿನಗಳ ರಜೆಗಾಗಿ ಹಂಬಲಿಸುತ್ತಿರುತ್ತಾರೆ. ಸಾಕಷ್ಟು ಮಂದಿ ಇಡೀ ದಿನವೂ ನಿದ್ರೆ ಮಾಡಿ ತಮ್ಮ ವಾರದ ಸುಸ್ತನ್ನು ಕಳೆದುಕೊಳ್ಳುತ್ತಾರೆ. ಆದರೆ ಒಂದೊಮ್ಮೆ ನಿಮಗೆ ವೇತನದ ಜತೆ 1 ವರ್ಷ ರಜೆ ಕೊಟ್ಟಿದ್ದರೆ ಹೇಗಿರುತ್ತೆ ಯೋಚನೆ ಮಾಡಿ. ಚೀನಾದ ಕಂಪನಿಯೊಂದು ತನ್ನ ಉದ್ಯೋಗಿಗೆ ಈ ಅವಕಾಶವನ್ನು ನೀಡಿದೆ. ಕಂಪನಿಯ ಲಕ್ಕಿ ಡ್ರಾದಲ್ಲಿ ವಿಜೇತರಾದ ಉದ್ಯೋಗಿಗೆ 365 ದಿನಗಳ ಕಾಲ ವೇತನ ಸಹಿತ ರಜೆಯನ್ನು ನೀಡಿದ್ದು, ಉದ್ಯೋಗಿ ಫುಲ್ ಖುಷ್ ಆಗಿದ್ದಾರೆ.

ಶೆನ್​ಜೆನ್​ ಗ್ವಾಂಗ್​ಡಾಂಗ್​ನಲ್ಲಿ ಕಂಪನಿಯು ವಾರ್ಷಿಕ ಡಿನ್ನರ್ ಆಯೋಜಿಸಿತ್ತು. ಆ ಉದ್ಯೋಗಿಯು ಕಂಪನಿಯ ಮ್ಯಾನೇಜಿರಿಯಲ್ ಹುದ್ದೆಯಲ್ಲಿದ್ದಾರೆ ಎಂಬುದು ತಿಳಿದುಬಂದಿದೆ. ಚೆಕ್ ಒಂದನ್ನು ಅವರಿಗೆ ನೀಡಿದ್ದು ಅದರಲ್ಲಿ 365 ದಿನಗಳ ಕಾಲ ವೇತನ ಸಹಿತ ರಜೆ ಎಂದು ಬರೆದಿತ್ತು. ಆದರೆ ಈ ಬಹುಮಾನ ನಿಜವೇ ಎಂದು ಪದೇ ಪದೇ ಕೇಳಲಾಯಿತು.

ಲಕ್ಕಿ ಡ್ರಾ ಪಾಟ್ ಬಹುಮಾನ ಮತ್ತು ಪೆನಾಲ್ಟಿ ಎರಡನ್ನೂ ಒಳಗೊಂಡಿತ್ತು. ಪೆನಾಲ್ಟಿಯಲ್ಲಿ ಮನೆಯಲ್ಲಿ ತಯಾರಿಸಿದ ಮಾನೀಯವನ್ನು ಕುಡಿಯುವುದು ಅಥವಾ ವೇಯ್ಟರ್​ ಕೆಲಸವನ್ನು ಮಾಡುವುದು. ಕೋವಿಡ್​ 19 ನಿಂದಾಗಿ ಕಳೆದ 3 ವರ್ಷಗಳಿಂದ ಕಚೇರಿಯಲ್ಲಿ ಯಾವುದೇ ಕಾರ್ಯಕ್ರಮಗಳು ನಡೆದಿರಲಿಲ್ಲ. ಉದ್ಯೋಗಿಗಳಿಗೆ ಕೆಲಸ ಒತ್ತಡದಿಂದ ದೂರ ಮಾಡಲು ಲಕ್ಕಿ ಡ್ರಾ ನಡೆಸಲಾಯಿತು.

ಮತ್ತಷ್ಟು ಓದಿ: ಮೊಮ್ಮಗನ ಮದುವೆಯಲ್ಲಿ 96ರ ವಯಸ್ಸಿನ ತಾತನ ಭರ್ಜರಿ ಡಾನ್ಸ್​​​; ವಿಡಿಯೋ ವೈರಲ್​​

ಬಹುಮಾನವನ್ನು ಎನ್​ಕ್ಯಾಶ್​ ಮಾಡಲು ಅಥವಾ ರಜೆಯನ್ನು ಆನಂದಿಸಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಉದ್ಯೋಗಿಗೆ ಕೇಳಲಾಗಿದೆ. ಕೆಲವರು ಏಪ್ರಿಲ್ ಫೂಲ್ ಎಂದು ಹೇಳಿದರೆ ಇನ್ನೂ ಕೆಲವರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ಕಾಲದಲ್ಲಿ ಎಲ್ಲರನ್ನೂ ನೌಕರಿಯಿಂದ ತೆಗೆದು ಹಾಕಲಾಗುತ್ತಿದೆ, ಈ ಸಮಯದಲ್ಲಿ ಇಂತಹ ಆಫರ್ ಕೊಟ್ಟಿದ್ದು ಸತ್ಯವೇ ಎಂದು ಪ್ರಶ್ನಿಸುತ್ತಿದ್ದಾರೆ.

2022ರಲ್ಲಿ ಮತ್ತೊಂದು ಕಂಪನಿಯ ಉದ್ಯೋಗಿ 365 ದಿನಗಳ ರಜೆಯನ್ನು ಲಕ್ಕಿ ಡ್ರಾದಲ್ಲಿ ಗೆದ್ದಿದ್ದರು. ಉದ್ಯೋಗಿ ತನ್ನ ಬಹುಮಾನದ ಒಂದು ಭಾಗವನ್ನು ಎನ್​ಕ್ಯಾಶ್​ ಮಾಡಿ ಮತ್ತೊಂದು ಭಾಗವನ್ನು ಧಾನ ಮಾಡಿದ್ದರು ಎಂದು ಚೀನಾ ಮಾಧ್ಯಮ ವರದಿ ಮಾಡಿತ್ತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ