Viral Video: ವಿಮಾನ ನಿಲ್ದಾಣಕ್ಕೆ ಸ್ಫೋಟಗೊಳ್ಳದ ಶೆಲ್ ತಂದ ಪ್ರವಾಸಿಗ; ಶಾಕ್ ಆದ ಪ್ರಯಾಣಿಕರು ಮಾಡಿದ್ದೇನು?

ಲೆವಂಟ್‌ನ ಪ್ರದೇಶವಾದ ಗೋಲನ್ ಹೈಟ್ಸ್‌ಗೆ ಭೇಟಿ ನೀಡಿದ ಕುಟುಂಬಕ್ಕೆ ಶೆಲ್ ಸಿಕ್ಕಿತ್ತು. ತಮ್ಮ ಪ್ರವಾಸದ ನೆನಪಿಗಾಗಿ ಅದನ್ನು ಪ್ಯಾಕ್ ಮಾಡಿಕೊಂಡು, ಬ್ಯಾಗ್​ನಲ್ಲಿಟ್ಟುಕೊಂಡಿದ್ದರು.

Viral Video: ವಿಮಾನ ನಿಲ್ದಾಣಕ್ಕೆ ಸ್ಫೋಟಗೊಳ್ಳದ ಶೆಲ್ ತಂದ ಪ್ರವಾಸಿಗ; ಶಾಕ್ ಆದ ಪ್ರಯಾಣಿಕರು ಮಾಡಿದ್ದೇನು?
ವಿಮಾನ ನಿಲ್ದಾಣದಲ್ಲಿ ಸ್ಫೋಟಗೊಳ್ಳದ ಶೆಲ್
Updated By: ಸುಷ್ಮಾ ಚಕ್ರೆ

Updated on: Apr 29, 2022 | 3:36 PM

ನವದೆಹಲಿ: ಭಾರೀ ಭದ್ರತೆ ಇರುವ ವಿಮಾನ ನಿಲ್ದಾಣಕ್ಕೆ ಸ್ಫೋಟಗೊಳ್ಳದ ಜೀವಂತವಾದ ಶೆಲ್ ತಂದು, ಆ ಸ್ಥಳದಲ್ಲಿ ಆತಂಕ ಮೂಡಿಸಿದರೆ ಅಲ್ಲಿನ ಪರಿಸ್ಥಿತಿ ಹೇಗಿರುತ್ತದೆ? ಗುರುವಾರ ಇಸ್ರೇಲ್‌ನ ಮುಖ್ಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕನೊಬ್ಬ ಸ್ಫೋಟಗೊಳ್ಳದ ಜೀವಂತ ಶೆಲ್ ಅನ್ನು ತಂದಾಗ ಅ ಅಮೆರಿಕನ್ ಕುಟುಂಬವು ಏನನ್ನು ಮಾಡಲು ಪ್ರಯತ್ನಿಸಿತ್ತು ಎಂಬುದು ಸ್ಪಷ್ಟವಾಗಲಿಲ್ಲ. ಆದರೆ, ಅವರು ಭದ್ರತಾ ಇನ್ಸ್‌ಪೆಕ್ಟರ್‌ಗಳಿಗೆ ತಮ್ಮ ಬಳಿಯಿದ್ದ ಸ್ಫೋಟಕವನ್ನು ತೋರಿಸಿದಾಗ ಅಲ್ಲಿ ಬಾಂಬ್ ಸ್ಫೋಟಗೊಳ್ಳುವ ಆತಂಕ ಸೃಷ್ಟಿಯಾಯಿತು.

ಲೆವಂಟ್‌ನ ಪ್ರದೇಶವಾದ ಗೋಲನ್ ಹೈಟ್ಸ್‌ಗೆ ಭೇಟಿ ನೀಡಿದ ಕುಟುಂಬಕ್ಕೆ ಶೆಲ್ ಸಿಕ್ಕಿತ್ತು. ತಮ್ಮ ಪ್ರವಾಸದ ನೆನಪಿಗಾಗಿ ಅದನ್ನು ಪ್ಯಾಕ್ ಮಾಡಿಕೊಂಡು, ಬ್ಯಾಗ್​ನಲ್ಲಿಟ್ಟುಕೊಂಡಿದ್ದರು. ಬಳಿಕ ಅವರು ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಆ ಶೆಲ್ ಅನ್ನು ತೋರಿಸಿದಾಗ ಗಾಬರಿಯಾದ ಪ್ರಯಾಣಿಕರು ಏರ್​ಪೋರ್ಟ್​ನ ತುಂಬ ಓಡಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇಸ್ರೇಲ್ ಏರ್‌ಪೋರ್ಟ್ಸ್ ಅಥಾರಿಟಿ ಪ್ರಕಾರ, ಒಬ್ಬ ವ್ಯಕ್ತಿಯು ಈ ಘಟನೆ ವೇಳೆ ಓಡಿಹೋಗಲು ಪ್ರಯತ್ನಿಸಿದಾಗ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಭದ್ರತಾ ಸಿಬ್ಬಂದಿಯ ವಿಚಾರಣೆಯ ನಂತರ ಕುಟುಂಬವು ಅವರ ವಿಮಾನವನ್ನು ಹತ್ತಲು ಅನುಮತಿಸಲಾಗಿದೆ.

ಇದನ್ನೂ ಓದಿ: Viral Video: ಎಟಿಎಂನಲ್ಲಿ ಹಣ ಡ್ರಾ ಮಾಡಿದ ಖುಷಿಗೆ ಸ್ಟೆಪ್ ಹಾಕಿ, ಸೆಲ್ಯೂಟ್ ಹೊಡೆದ ಯುವತಿ; ವಿಡಿಯೋ ಇಲ್ಲಿದೆ

Viral Video: ಮೊನಾಲಿಸಾ ಪೇಂಟಿಂಗ್​ಗೆ ಊದುಬತ್ತಿ ಹಚ್ಚಿ ಪೂಜೆ ಮಾಡಿದ ಸೀರಿಯಲ್​ ನಾಯಕಿ; ಈ ವಿಡಿಯೋ ಮಿಸ್ ಮಾಡಬೇಡಿ!